New Year 2021: ಹೊಸ ವರ್ಷಕ್ಕೆ ಕ್ಷಣಗಣನೆ; ರಾತ್ರಿ 8 ಗಂಟೆ ಮೇಲೆ ರಸ್ತೆಗಿಳಿದರೆ ವಾಹನ ಸೀಜ್ ಆಗೋದು ಗ್ಯಾರಂಟಿ
ಇನ್ನು ನಗರದ ಒಟ್ಟು 44 ಫ್ಲೈ ಓವರ್ ಗಳನ್ನು ಸಹ ನಾಳೆ ರಾತ್ರಿ 8 ಗಂಟೆಗೆ ಬಂದ್ ಮಾಡಲಿದ್ದಾರೆ. ರೆಸ್ಟೋರೆಂಟ್, ಪಬ್ ಅಂತ ಮೊದಲೇ ಟಿಕೆಟ್ ಬುಕ್ ಮಾಡಿದ್ರೆ ಅಂತವರಿಗೆ ಪೊಲೀಸರು ನಿಗದಿ ಮಾಡಿದ್ದ ಸ್ಥಳಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕು. ಜಾಗ ಇದೆ ಅಂತ ಎಲ್ಲೆಂದರಲ್ಲಿ ನಿಲ್ಲಿಸಿದ್ರೆ ನಿಮ್ಮ ವಾಹನ ಸೀಜ್ ಮಾಡೋಕೆ ಅಂತಾನೆ ಟೀಂಗಳು ರೆಡಿಯಾಗಿದೆ.
ಬೆಂಗಳೂರು(ಡಿ.31): ಬಾರಿ ಹೊಸ ವರ್ಷಕ್ಕೆ ಲಾ ಅಂಡ್ ಆರ್ಡರ್ ಅಷ್ಟೆ ಅಲ್ಲ, ಟ್ರಾಫಿಕ್ ಪೊಲೀಸರು ಫುಲ್ ಟಫ್ ರೂಲ್ಸ್ ಅನ್ನೇ ತಂದಿದ್ದಾರೆ. ಒಂದಲ್ಲಾ ಎರಡಲ್ಲಾ ಸಾಕಷ್ಟು ಬಂದೋಬಸ್ತ್ ಮಾಡಲು ಸಂಚಾರಿ ಪೊಲೀಸರಿಂದ ಈಗಾಗಲೇ ಸಿದ್ದತೆ ಆಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಗೆ ಕುಡಿದು ಎಂಜಾಯ್ ಮಾಡಿ ಮನೆ ಸೇರ್ತೀವಿ ಅನ್ನೋರು, ಬೈಕ್ ತಗೊಂಡು ಜಾಲಿ ರೈಡ್ ಹೋಗ್ತೀವಿ ಅನ್ನೋರು, ವೀಲಿಂಗ್ ಮಾಡ್ತೀವಿ ಅನ್ನೋರು ನಿಮ್ಮ ಫ್ಲಾನ್ ನ ಕ್ಯಾನ್ಸಲ್ ಮಾಡ್ಕೊಂಡ್ರೆ ಬೆಟರ್. ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭ ಆಗಿದ್ದೇ ಪೊಲೀಸರು ಫುಲ್ ಅಲರ್ಟ್ ಆಗಿ ಬಂದೋಬಸ್ತ್ ಫ್ಲಾನ್ ಸಖತ್ ಆಗಿಯೇ ಮಾಡಿದ್ದಾರೆ. ಅದ್ರಲ್ಲೂ ಟ್ರಾಫಿಕ್ ಪೊಲೀಸರಂತೂ ಯಾರೊಬ್ಬರು ಮಿಸುಕಾಡೋ ಹಾಗಿಲ್ಲ ಹಾಗೆ ರೂಲ್ಸ್ ಮಾಡಿದ್ದಾರೆ.
ಜಾಗ ಇದೆ ಬೈಕ್ ಪಾರ್ಕ್ ಮಾಡೋಣ, ಪಬ್, ರೆಸ್ಟೋರೆಂಟ್ ಅಂತ ಸುತ್ತಾಡಿ ಬರೋಣ ಅನ್ನೋರು ಸುಮ್ಮನೆ ಮನೆಯಲ್ಲಿ ಇದ್ರೆ ಉತ್ತಮ. ಯಾಕಂದ್ರೆ ಸಂಚಾರಿ ಪೊಲೀಸರು 600ಕ್ಕೂ ಅಧಿಕ ಪಾಯಿಂಟ್ ಗಳನ್ನು ಹಾಕ್ಕೊಂಡು ಕಾಯ್ತಾ ಇರ್ತಾರೆ. ಜೊತೆಗೆ ಕುಡಿದು ವಾಹನ ಓಡಿಸಿದ್ರಿ ಅಂದ್ರೆ 10 ಸಾವಿರ ದಂಡದೊಂದಿಗೆ ವಾಹನ ಸಹ ಸೀಜ್ ಮಾಡ್ತಾರೆ.
ಇನ್ನು ನಗರದ ಒಟ್ಟು 44 ಫ್ಲೈ ಓವರ್ ಗಳನ್ನು ಸಹ ನಾಳೆ ರಾತ್ರಿ 8 ಗಂಟೆಗೆ ಬಂದ್ ಮಾಡಲಿದ್ದಾರೆ. ರೆಸ್ಟೋರೆಂಟ್, ಪಬ್ ಅಂತ ಮೊದಲೇ ಟಿಕೆಟ್ ಬುಕ್ ಮಾಡಿದ್ರೆ ಅಂತವರಿಗೆ ಪೊಲೀಸರು ನಿಗದಿ ಮಾಡಿದ್ದ ಸ್ಥಳಗಳಲ್ಲೇ ವಾಹನಗಳನ್ನು ನಿಲ್ಲಿಸಬೇಕು. ಜಾಗ ಇದೆ ಅಂತ ಎಲ್ಲೆಂದರಲ್ಲಿ ನಿಲ್ಲಿಸಿದ್ರೆ ನಿಮ್ಮ ವಾಹನ ಸೀಜ್ ಮಾಡೋಕೆ ಅಂತಾನೆ ಟೀಂಗಳು ರೆಡಿಯಾಗಿದೆ.
ಇನ್ನು ಈ ಬಾರಿ ನೈಸ್ ರಸ್ತೆಯಲ್ಲಿಯೂ ಪೊಲೀಸರು ರಾತ್ರಿ ಇಡೀ ಕಾರ್ಯ ನಿರ್ವಹಿಸಲಿದ್ದಾರೆ. ಯಾಕೆಂದರೆ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಾರೆ ಎನ್ನುವ ಮಾಹಿತಿ ಗೊತ್ತಾಗಿದ್ದು, ಅತ್ತಕಡೆ ಗಮನ ಕೊಟ್ಟಿದ್ದಾರೆ.
ಹಾಗಾದ್ರೆ ಎಲ್ಲೆಲ್ಲಿ ವಾಹನಗಳ ನಿಲುಗಡೆ ನಿಷೇಧ ಮಾಡಲಾಗಿದೆ.
- ಎಂಜಿ ರಸ್ತೆ
- ಬ್ರಿಗೇಡ್ ರಸ್ತೆ
- ಚರ್ಚ್ ಸ್ಟ್ರೀಟ್
- ಮ್ಯೂಸಿಯಂ ರೋಡ್
- ರೆಸ್ಟ್ ಹೌಸ್ ಪಾರ್ಕ್ ರಸ್ತೆ
- ರೆಸಿಡೆನ್ಸಿ ರಸ್ತೆ
- ರಿಚ್ಮಂಡ್ ರಸ್ತೆ
- ಇನ್ಫೆಂಟ್ರಿ ರಸ್ತೆ
- ಸೆಂಟ್ ಮಾರ್ಕ್ಸ್ ರಸ್ತೆ
- ಮುಗರತ್ ರಸ್ತೆ
- ಮಾರ್ಕನ್ ರೋಡ್
- ಇಂದಿರಾನಗರ 100 ಫೀಟ್ ರೋಡ್
ಈ ಮೇಲಿನ ಎಲ್ಲಾ ರಸ್ತೆಗಳಲ್ಲಿ ಯಾವೊಂದು ವಾಹನಗಳ ನಿಲುಗಡೆಗೆ ಸಂಚಾರಿ ಪೊಲೀಸರು ಅನುಮತಿ ನೀಡಿಲ್ಲ.
ಇನ್ನು ಇದ್ರ ಜೊತೆಗೆ ಸುಖಾ ಸುಮ್ಮನೆ ಓಡಾಡೋರ ಮೇಲೆಯೂ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ನಗರದ 150 ಕಡೆಗಳಲ್ಲಿ ಪೊಲೀಸರನ್ನು ವಾಹನಗಳ ತಪಾಸಣೆಗೆ ಅಂತಾನೆ ನಿಯೋಜನೆ ಮಾಡಲಾಗಿದೆ. ರಾತ್ರಿಯಿಡೀ ಪೊಲೀಸರು ಕೆಲಸ ಮಾಡಲಿದ್ದು ಸುಮ್ಮನೆ ಓಡಾಡಿಕೊಂಡು ಬರ್ತೀವಿ ಎನ್ನುವವರಿಗೆ ಕಡಿವಾಣ ಹಾಕಲಿದ್ದಾರೆ.
ಏನೇ ಆಗಲಿ, ಕೊರೋನಾ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಾ. ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿರುವುದು ಯಾವ ರೀತಿ ಸಕ್ಸಸ್ ಆಗುತ್ತೆ ಅಂತ ಕಾದು ನೋಡಬೇಕಿದೆ.