ಕೋವ್ಯಾಕ್ಸಿನ್ ಲಸಿಕೆ ಪಡೆದ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರೇಗೌಡ ಪಾಟೀಲ್
ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ನವದೆಹಲಿ ಅವರು ಜೀವನ್ ರೇಖಾ ಆಸ್ಪತ್ರೆಯಲ್ಲಿ ಭಾರತ್ ಬಯೊಟೆಕ್ ಸಂಸ್ಥೆಯ ಕೋ-ವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಳ್ಳುವುದರ ಮೂಲಕ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಭಾಗಿಯಾದರು.
ನವದೆಹಲಿ: ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ನವದೆಹಲಿ ಅವರು ಜೀವನ್ ರೇಖಾ ಆಸ್ಪತ್ರೆಯಲ್ಲಿ ಭಾರತ್ ಬಯೊಟೆಕ್ ಸಂಸ್ಥೆಯ ಕೋ-ವ್ಯಾಕ್ಸಿನ್ ಲಸಿಕೆಯನ್ನು ತೆಗೆದುಕೊಳ್ಳುವುದರ ಮೂಲಕ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಭಾಗಿಯಾದರು.
ತೀವ್ರ ಕೂತುಹಲ ಮೂಡಿಸಿರುವ ದೇಶಿ ಲಸಿಕೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಮೂರನೇ ಹಂತದ ಮುಕ್ತಾಯಗೊಂಡಿದೆ. ಐಸಿಎಂಆರ್ ಮತ್ತು ಭಾರತ ಬಯೋಟೆಕ್ ಸಂಸ್ಥೆ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ. ಇದರ ಭಾಗವಾಗಿ ಲಸಿಕೆಯನ್ನು ಮಾನವರ ಮೇಲೆ ಲಸಿಕೆ ಪ್ರಯೋಗ ಮಾಡಲಾಗುತ್ತಿದೆ. ಕೋವ್ಯಾಕ್ಸಿನ್ ಲಸಿಕೆ ಮೂರನೇ ಹಂತದ ಲಸಿಕೆ ಪ್ರಯೋಗ ಪೂರ್ಣಗೊಂಡಿದ್ದು, ಇಂದು ನಡೆದ ಲಸಿಕೆಯ ಕ್ಲಿನಿಕಲ್ ಟ್ರಯಲ್ನಲ್ಲಿ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಭಾಗಿಯಾಗಿದ್ದರು.
ಬೆಳಗಾವಿಯಲ್ಲಿ ಜೀವನ್ ರೇಖಾ ಆಸ್ಪತ್ರೆಯಲ್ಲಿ ಇಂದು ಲಸಿಕೆ ಪ್ರಯೋಗ ಮಾಡಲಾಗುತ್ತಿದೆ. ಈಗಾಗಲೇ 1 ಮತ್ತು 2 ಹಂತದ ಲಸಿಕೆ ಪ್ರಯೋಗ ಸಕ್ಸಸ್ ಆಗಿದೆ. ಮೂರನೇ ಹಂತದ ಲಸಿಕೆ ಪ್ರಯೋಗ ಕೂಡಾ ಮುಗಿದಿದೆ. ಇನ್ನು ಈಗಾಗಲೇ ಜನ ಸಾಮಾನ್ಯರ ಜನಪ್ರತಿನಿಧಿಗಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಮೂರನೇ ಹಂತದ ಟ್ರಯಲ್ ಲಸಿಕೆಯನ್ನು ಸಿಎಂ ಯಡಿಯೂರಪ್ಪ ಆಪ್ತ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಮಾಡಲಾಗಿದೆ.
ಲಸಿಕೆ ಪಡೆದ ಬಳಿಕ ಮಾತನಾಡಿದ ಶಂಕರಗೌಡ ಪಾಟೀಲ್ ಅವರು, ಸಾಮಾನ್ಯ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕಿಲ್ಲರ್ ಕೊರೊನಾ ಹೋಗಲಾಡಿಸಲು ಜನರು ಸಹಕಾರ ನೀಡಬೇಕು. ICMR ಈ ಲಸಿಕೆಯ ಬೆಳಗಾವಿ ಪ್ರತಿನಿಧಿತ್ವವನ್ನು ಜೀವನ್ ರೇಖಾ ಆಸ್ಪತ್ರೆಯ ಡಾ.ಅಮಿತ್ ಭಾಟೆ ಅವರಿಗೆ ವಹಿಸಿರುವುದು ಅಭಿನಂದನೀಯ. ಈಗಾಗಲೇ ಈ ಲಸಿಕೆಯನ್ನು ಬೆಳಗಾವಿಯ ಹಲವಾರು ಸ್ತರದ, ವೃತ್ತಿಯಲ್ಲಿರುವ ಸಾವಿರಾರು ಜನರು ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಜನಪ್ರತಿನಿಧಿಯಾಗಿ, ಸಮಾಜದ ಸೇವಕನಾಗಿ ಲಸಿಕೆಯ ಬಗ್ಗೆ ಜನರಲ್ಲಿ ಅರಿವು-ಆತ್ಮವಿಶ್ವಾಸ ಮೂಡಿಸುವುದು ಅತಿ ಅವಶ್ಯಕ ಎಂಬುದು ಶಂಕರಗೌಡ ಪಾಟೀಲ್ ತಿಳಿಸಿದರು.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ICMR ಸಹಯೋಗದೊಂದಿಗೆ ಭಾರತದ ಮೊಟ್ಟ ಮೊದಲ ಲಸಿಕೆಯಾದ ಕೋವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಜೀವನ್ ರೇಖಾ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಈಗಾಗಲೇ ಒಂದು ಮತ್ತು ಎರಡನೇ ಹಂತದ ಲಸಿಕೆ ಪ್ರಯೋಗ ಯಶಸ್ಸು ಆಗಿದೆ. ಇದುವರೆಗೆ 1,900 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಇನ್ನು 28 ದಿನಗಳ ನಂತರ ಎರಡನೇ ಇಂಜೆಕ್ಷನ್ ನೀಡಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಮೂರು ತಿಂಗಳಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.