ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಪರೀಕ್ಷೆ ಕಡ್ಡಾಯ

ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟೀವ್ ಪರೀಕ್ಷೆ ಕಡ್ಡಾಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ

ನವದೆಹಲಿ: ಬ್ರಿಟನ್‍ನಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟೀವ್ ಪರೀಕ್ಷೆ ಕಡ್ಡಾಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ

ಬ್ರಿಟನ್‍ನಿಂದ ಭಾರತಕ್ಕೆ ವಿಮಾನಗಳ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಜ 8 ರಿಂದ 31 ರವರೆಗೆ ನೆಗೆಟೀವ್‍ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿ ಸ್ವಯಂ-ಪಾವತಿಸುವ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ನಡೆಸಬೇಕು ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.

ಬ್ರಿಟನ್‍ ನಲ್ಲಿ ಕೋವಿಡ್‍ -19 ಸಾಂಕ್ರಾಮಿಕ ಕರೋನಾವೈರಸ್ ರೂಪಾಂತ ಕಂಡುಬಂದ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವಿನ ವಿಮಾನ ಸೇವೆಗಳನ್ನು ಡಿ 22 ರಂದು ಸ್ಥಗಿತಗೊಳಿಸಲಾಗಿತ್ತು. ಇದೀಗ ಜ 6 ರಂದು ಸೇವೆಗಳು ಪುನರಾರಂಭಗೊಳ್ಳಲಿವೆ. ಬ್ರಿಟನ್‍ನಲ್ಲಿ ಕಂಡುಬಂದಿರುವ ಹೊಸ ರೂಪಾಂತರ ವೈರಸ್‍ನ ಸೋಂಕು 29 ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ವರದಿಯಾಗಿದೆ.

ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳಂತೆ ಜ 8 ಮತ್ತು 31 ರ ನಡುವೆ ಪ್ರಯಾಣಿಸುವ ಪ್ರಯಾಣಿಕರು ಭಾರತದ ವಿಮಾನ ನಿಲ್ದಾಣಗಳಿಗೆ ಆಗಮಿಸಿದಾಗ ಕಡ್ಡಾಯವಾಗಿ ಸ್ವಯಂ-ಪಾವತಿಸಿದ ಆರ್ ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಸೋಂಕು ದೃಢಪಟ್ಟವರನ್ನು ಸಾಂಸ್ಥಿಕ ಆರೋಗ್ಯ ಆರೈಕೆ ಕೇಂದ್ರಗಳಲ್ಲಿ ಸಂಪರ್ಕ ತಡೆಯಲ್ಲಿರಿಸಲಾಗುತ್ತದೆ.

ಪ್ರಯಾಣಿಕರಿಗೆ ಮಾರ್ಗದರ್ಶಿ ಸೂತ್ರ
1.ಯುಕೆಯಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದ (www.newdelhiairport.in) ಆನ್‌ಲೈನ್ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ನಿಗದಿತ ಪ್ರಯಾಣಕ್ಕೆ ಕನಿಷ್ಠ 72 ಗಂಟೆಗಳ ಮೊದಲು ಸಲ್ಲಿಸಬೇಕು.
2. ಪ್ರಯಾಣಿಕರು ತಮ್ಮ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ತರಬೇಕು, ಇದನ್ನು ಪ್ರಯಾಣ ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ ನಡೆಸಬೇಕು.
3. ವರದಿಯ ಪ್ರತಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
4. ಪ್ರಯಾಣಿಕರು ಬಂದ ನಂತರ ತಮ್ಮ ಸ್ವಂತ ವೆಚ್ಚದಲ್ಲಿ ಮತ್ತೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು.
5. ಆಗಮನದ ನಂತರ ಸೋಂಕು ದೃಢಪಟ್ಟರೆ, ಪ್ರಯಾಣಿಕರನ್ನು ಅದಕ್ಕೆ ಅನುಗುಣವಾಗಿ ನಿರ್ಬಂಧಿಸಬೇಕಾಗುತ್ತದೆ.
6. ಒಬ್ಬರಿಗೆ ಸೋಂಕು ದೃಢಪಟ್ಟರೂ ಸಹ-ಪ್ರಯಾಣಿಕರು ಮತ್ತು ಇತರ ಸಂಪರ್ಕಗಳನ್ನು ಸಹ ನಿರ್ಬಂಧಿಸಬೇಕಾಗುತ್ತದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *