ಕ್ರಿಕೆಟ್​ ಅಂಗಳಕ್ಕೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ ಸ್ಟಾರ್ ಬ್ಯಾಟ್ಸ್​ಮ್ಯಾನ್ ಪುತ್ರ..!

ಭಾರತ ಕ್ರಿಕೆಟ್​ ದೇವರು ಎಂದೇ ಖ್ಯಾತರಾಗಿ, ದೇಶದ ಪರವಾಗಿ ಅಡಿ, ಭಾರತ ದೇಶದ ಮಾಸ್ಟರ್​ ಬ್ಲಾಸ್ಟರ್​ ಎಂದೇ ಗುರುತಿಸಿಕೊಂಡಿರುವ ಸಚಿನ್​ ತೆಂಡುಲ್ಕರ್​ ಅವರ ಮನೆಯ ಮತ್ತೊಂದು ಕುಡಿ ಈಗ ಸದ್ದಿಲ್ಲದೇ ಸೀನಿಯರ್ ಕ್ರಿಕೆಟ್​ ತಂಡಕ್ಕೆ ಎಂಟ್ರಿಯಾಗಿದ್ದಾರೆ. ಹಾಗಾದ್ರೆ ಆ ಆಟಗಾರ ಯಾರು? ಯಾವ ತಂಡಕ್ಕೆ ಆಯ್ಕೆಯಾಗಿದ್ದಾರೆ? ಈ ಎಲ್ಲಾ ವಿಚಾರಗಳ ಕಂಪ್ಲೀಟ್ ಡಿಟೈಲ್ಸ್​ ಇಲ್ಲಿದೆ.


ಮಾಸ್ಟರ್​​ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ ಪುತ್ರ ಅರ್ಜುನ್​ ತೆಂಡೂಲ್ಕರ್​​​​ ಮುಂಬೈ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ..
ಮುಂಬರುವ ಸೈಯದ್​ ಮುಷ್ತಾಕ್​ ಅಲಿ ಟೂರ್ನಿಗೆ ಅರ್ಜುನ್​​ ತೆಂಡುಲ್ಕರ್​ ಆಯ್ಕೆಯಾಗಿದ್ದಾರೆ ಇನ್ನೂ ಇಬ್ಬರು ಆಟಗಾರರನ್ನ ಹೆಚ್ಚುವರಿ ಆಯ್ಕೆ ಮಾಡುವಂತೆ ಬಿಸಿಸಿಐ ಸೂಚಿಸಿತ್ತು. ಹೀಗಾಗಿ ಬಿಸಿಸಿಐ ಸೂಚನೆ ಮೇರೆಗೆ ಸಚಿನ್​ ಪುತ್ರ ಅರ್ಜುನ್​ ತೆಂಡೂಲ್ಕರ್​ಗೆ​​ ಸೈಯದ್​ ಮುಷ್ತಾಕ್​ ಅಲಿ ಸರಣಿಗೆ ಆಯ್ಕೆ ಮಾಡಲಾಗಿದೆ.

ಒಟ್ಟಿನಲ್ಲಿ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಸಚಿನ್ ಪುತ್ರ, ತಂದೆಯಂತೆಯೇ ಮಿಂಚುತ್ತಾರಾ..? ಟೀಂ ಇಂಡಿಯಾ ಪರ ಆಡಲಿದ್ದಾರಾ ಈ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಬಹುದು..!

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *