ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (04-01-2021)
# ನಿತ್ಯ ನೀತಿ : ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ಅಂತರಂಗದ ಶೋಧವನ್ನು ತಾವೇ ಮಾಡಿಕೊಳ್ಳಬೇಕು. ಸಜ್ಜನರ ಸಹವಾಸ ಮಾಡಬೇಕು. ಸಜ್ಜನರ ನುಡಿಗಳನ್ನು ಕೇಳಬೇಕು, ಮನನ ಮಾಡಿಕೊಳ್ಳಬೇಕು. ಮನಸ್ಸಿನ ಕ್ಲೇಶಗಳನ್ನು ಕಳೆದುಕೊಳ್ಳಬೇಕು. ತನ್ಮೂಲಕ ಬದುಕಿನಲ್ಲಿ ಶಾಶ್ವತವಾದ ಬೆಳಕನ್ನು ಮೂಡಿಸಿಕೊಳ್ಳಬೇಕು.
# ಪಂಚಾಂಗ : ಸೋಮವಾರ, 04.01.2021
ಸೂರ್ಯ ಉದಯ ಬೆ.06.43 / ಸೂರ್ಯ ಅಸ್ತ ಸಂ.06.06
ಚಂದ್ರ ಉದಯ ಸಂ.10.57 / ಚಂದ್ರ ಅಸ್ತ ಬೆ.10.04
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ಹಿಮಂತ ಋತು / ಮಾರ್ಗಶಿರ ಮಾಸ, ಕೃಷ್ಣ ಪಕ್ಷ / ತಿಥಿ: ಪಂಚ-ಷಷ್ಠೀ (ಬೆ.07.14-ರಾ.05.47) / ನಕ್ಷತ್ರ: ಪೂರ್ವಫಲ್ಗುಣಿ (ರಾ.07.17) / ಯೋಗ: ಆಯು-ಸೌಭಾ (ಬೆ.08.00-ರಾ.05.37) / ಕರಣ: ತೈತಿಲ-ಗರಜೆ-ವಣಿಜ್ (ಬೆ.07.14-ಸಾ.06.33-ರಾ.05.47) / ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನುರ್ಮಾಸ, ತೇದಿ: 20
# ರಾಶಿಭವಿಷ್ಯ :
ಮೇಷ: ಎಂದೂ ಸಹಾಯ ಮಾಡದಿದ್ದವರು ನಿಮಗೆ ಸಹಾಯ ಮಾಡಲು ಬಯಸುತ್ತಾರೆ
ವೃಷಭ: ದುರ್ಜನರ ಸಹವಾಸದಿಂದ ದೂರವಿರಿ
ಮಿಥುನ: ಉದ್ಯೋಗಸ್ಥರಿಗೆ ಮೇಲಕಾರಿಗಳಿಂದ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ
ಕಟಕ: ಹಣಕಾಸು ವಿಷಯ ದಲ್ಲಿ ಬಂಧು-ಮಿತ್ರರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ
ಸಿಂಹ: ದುಡುಕು ಬುದ್ಧಿಯಿಂದ ಕಾರ್ಯ ಭಂಗವಾಗುತ್ತದೆ
ಕನ್ಯಾ: ಮುಂದಾಳತ್ವ ವಹಿಸಿ ಕೊಳ್ಳಲು ಹಿಂಜರಿಕೆ ಬೇಡ
ತುಲಾ: ಅಮೂಲ್ಯ ವಸ್ತು ವೊಂದನ್ನು ಕಳೆದುಕೊಳ್ಳಬಹುದು
ವೃಶ್ಚಿಕ: ಆರೋಗ್ಯದಲ್ಲಿ ಸಾಮಾನ್ಯ ತೊಂದರೆ ಕಂಡು ಬಂದರೂ ನಿಧಾನವಾಗಿ ಚೇತರಿಸಿಕೊಳ್ಳುವಿರಿ
ಧನುಸ್ಸು: ಶಕ್ತಿಮೀರಿ ಶ್ರಮ ಪಡುವುದರಿಂದ ಆರೋಗ್ಯದಲ್ಲಿ ತೊಂದರೆಯಾಗಬಹುದು
ಮಕರ: ಪ್ರೇಮಿಗಳಿಗೆ ತೊಂದರೆ ಕಾದಿದೆ
ಕುಂಭ: ಉತ್ತಮ ಭಾಷಣ ಮಾಡುವಿರಿ
ಮೀನ: ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ