12 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಭಾರತ್ ಬಯೋಟೆಕ್ ಸಂಸ್ಥೆಗೆ ಕೇಂದ್ರ ಅನುಮತಿ
ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ರಡೆದಿರುವ ಭಾರತ್ ಬಯೊಟೆಕ್ ಪ್ರಾಯೋಗಿಕ ಹಂತದ ಮಾದರಿಯಲ್ಲಿ 12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ.
ನವದೆಹಲಿ: ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮತಿ ರಡೆದಿರುವ ಭಾರತ್ ಬಯೊಟೆಕ್ ಪ್ರಾಯೋಗಿಕ ಹಂತದ ಮಾದರಿಯಲ್ಲಿ 12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ.
12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಮಾಡಿರುವ ಪ್ರಯೋಗದಿಂದ ಲಸಿಕೆ ಸುರಕ್ಷಿತ ಎಂದು ಕಂಡುಬಂದಿದ್ದು ಹೈದರಾಬಾದ್ ಮೂಲದ ಸಂಸ್ಥೆ ಮೂರನೇ ಹಂತದ ಪ್ರಯೋಗದಲ್ಲಿ ನಿರತವಾಗಿದೆ.
ಲಸಿಕೆ ಅಭಿಯಾನವನ್ನು ವಯಸ್ಕರಿಗೆ ಮಾತ್ರ ಸದ್ಯ ನಡೆಸಲಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ದತ್ತಾಂಶವಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಹ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸೆರಂ ಇನ್ಸ್ ಟಿಟ್ಯೂಟ್ ನ ಕೊವಿಶೀಲ್ಡ್ ಲಸಿಕೆಗೆ ನೀಡಲಾಗಿರುವ ಅನುಮೋದನೆಗೂ ಭಾರತ್ ಬಯೋಟೆಕ್ ನ ಕೊವಾಕ್ಸಿನ್ ತುರ್ತು ಬಳಕೆಗೂ ವ್ಯತ್ಯಾಸವಿದೆ. ಕೊವಾಕ್ಸಿನ್ ಬಳಕೆ ಪ್ರಾಯೋಗಿಕ ಹಂತದಲ್ಲಿದೆ. ಪ್ರಾಯೋಗಿಕ ಹಂತದಲ್ಲಿ ಭಾಗಿಯಾಗುವ ಜನರನ್ನು ಪತ್ತೆಹಚ್ಚುವ ಮತ್ತು ನಿಗಾವಹಿಸುವ ಕಾರ್ಯ ಮಾಡಲಾಗುತ್ತದೆ ಎಂದು ನಿನ್ನೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ತಿಳಿಸಿದ್ದರು.
ಕೊವಾಕ್ಸಿನ್ಗೆ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಇದು ಇನ್ನೂ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸದೆ ಡೇಟಾವನ್ನು ಸಲ್ಲಿಸಿಲ್ಲ ಎಂದು ರಾಜಕೀಯ ವಿವಾದವಾಗಿ ಮಾರ್ಪಟ್ಟಿತು.