ಭಾರತದಲ್ಲಿ ಲಸಿಕಾ ತಯಾರಿಕೆ: ವಿಶ್ವ ಆರೋಗ್ಯ ಸಂಘಟನೆ ಮೆಚ್ಚುಗೆ
ನವದೆಹಲಿ: ಭಾರತದಲ್ಲಿ ದೇಶಿಯವಾಗಿ ಕೊರೋನಾ ಲಸಿಕಾ ತಯಾರಿಕೆ ಮಾಡಿರುವುದಕ್ಕೆ ವಿಶ್ವ ಆರೋಗ್ಯ ಸಂಘಟನೆಯ ಮಹಾ ನಿರ್ದೇಶಕ ಟೆಡ್ರೋಸ್ ಅಧನೋಮ್ ಘೆಬ್ರೆಸಸ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ತನ್ನ ಸಂಕಲ್ಪವನ್ನು ಭಾರತವು ನಿರಂತರವಾಗಿ ಮುಂದುವರಿಸಿ, ಜೊತೆಗೆ ತನ್ನ ಸಂಕಲ್ಪವನ್ನೂ ಪ್ರದರ್ಶಿಸಿದೆ. ಎಂದೂ ವಿಶ್ವ ಸಂಸ್ಥೆ ಬಣ್ಣಿಸಿದೆ.
ವಿಶ್ವದ ಅತಿ ದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿ ಭಾರತ ಉತ್ತಮ ಸ್ಥಾನ ಪಡೆದಿದೆ. ನಾವು ಜೊತೆಯಾಗಿ ಕಾರ್ಯ ನಿರ್ವಹಿಸಿದರೆ, ಅತ್ಯಂತ ದುರ್ಬಲರನ್ನು ರಕ್ಷಿಸಲು ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆ ಬಳಸಿ ಜನರ ಆರೋಗ್ಯ ಕಾಪಾಡಬಹುದು ಎಂಬುದನ್ನು ಖಾತ್ರಿಪಡಿಸಿದೆ ಎಂದೂ ಅವರು ಹೇಳಿದ್ದಾರೆ.