ಕಲಬುರಗಿಯಲ್ಲಿ 100ಕ್ಕೂ ಹೆಚ್ಚು ರೌಡಿಗಳ ಪರೇಡ್​… ಬಸ್ಕಿ ಹೊಡೆಸಿ ವಾರ್ನ್ ಮಾಡಿದ ಪೊಲೀಸರು

ಕಲಬುರಗಿ ಪೊಲೀಸರು ಇಂದು ಜಿಲ್ಲೆಯ 100 ಕ್ಕೂ ಹೆಚ್ಚು ರೌಡಿಗಳ ಪರೇಡ್​ ನಡೆಸಿದ್ದು, ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಕಲಬುರಗಿ: ಮುಂಬರುವ ಪಾಲಿಕೆ‌ ಚುನಾವಣೆ ಮತ್ತು ಇತರ ಕಾರ್ಯಗಳ ಹಿನ್ನೆಲೆ ಕಲಬುರಗಿಯಲ್ಲಿ 100 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಲಾಯಿತು.

ನಗರದ ಮಿನಿವಿಧಾನಸೌಧ ಹಿಂಬದಿಯ ಎ ಡಿವಿಷನ್ ಕಚೇರಿ ಎದುರು ರೌಡಿಗಳಿಗೆ ಬಸ್ಕಿ ಹೊಡೆಸಿ ಪೊಲೀಸರು ವಾರ್ನ್ ಮಾಡಿದರು. ಎಸಿಪಿ ಅನ್ಷು ಕುಮಾರ್​ ನೇತೃತ್ವದಲ್ಲಿ ನಗರದ ಆರ್.​ಜೆ. ನಗರ, ಸ್ಟೇಷನ್ ಬಜಾರ್, ಬ್ರಹ್ಮಪುರ ಮತ್ತು ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ 100 ಕ್ಕೂ ಹೆಚ್ಚು ರೌಡಿಗಳಿಗೆ ಪರೇಡ್ ನಡೆಸಲಾಯಿತು.

ಅಹಿತಕರ ಮತ್ತು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಇದೇ ವೇಳೆ ಖಡಕ್ ಎಚ್ಚರಿಕೆ ನೀಡಲಾಯಿತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *