ಮಾನಸ ಸರೋವರ ಯಾತ್ರೆ, ಚಾರ್​ ಧಾಮ್​ ಯಾತ್ರೆಗೆ ಸಹಾಯ ಧನ : ಸಿ.ಎಂ ಬಿ.ಎಸ್​ ಯಡಿಯೂರಪ್ಪ ಘೋಷಣೆ.

ಮಾನಸ ಸರೋವರ, ಚಾರ್​ ಧಾಮ್ ಪ್ರವಾಸ ಹೊರಟಿರುವವರಿಗೆ ಇಲ್ಲಿದೆ ಸಿಹಿ ಸುದ್ಧಿ. ರಾಜ್ಯದಿಂದ ಮಾನಸ ಸರೋವರ, ಚಾರ್​ಧಾಮ್​ ಯಾತ್ರೆಗೆ ತೆರಳುವ 2700 ಯಾತ್ರಿಗಳಿಗೆ 30 ಸಾವಿರ ರೂ ಸಹಾಯಧನ ಹಾಗೂ ಜಾರ್ ಧಾಮ್ ಯಾತ್ರೆಗೆ ಹೊರಟಿರುವ 1500 ಮಂದಿಗೆ 20 ಸಾವಿರ ಸಹಾಯ ಧನ‌ ನೀಡಲಾಗುತ್ತದೆ. ಪ್ರಮುಖ ದೇವಸ್ಥಾನದಲ್ಲಿ ಆದ್ಯತೆ ಮೇಲೆ ಪೂಜೆ ,ಪ್ರತ್ಯೇಕ ದರ್ಶನಕ್ಕೆ ಅವಕಾಶ ಅಂಗವಿಕಲರಿಗೆ, ವಯೋವೃದ್ದರಿಗೆ ಅವಕಾಶ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.


ರಾಜ್ಯದಿಂದ ತಿರುಮಲ ,ಮಂತ್ರಾಲಯ ,ಶ್ರೀಶೈಲಂ ಮತ್ತು ವಾರಣಾಸಿಗೆ ತೆರಳುವ ಯಾತ್ರಿಗಳಿಗೆ ವಸತಿ ಸೌಕರ್ಯ ದೇವಸ್ಥಾನಗಳ ಪರಂಪರೆಯನ್ನು ಪರಿಚಯಿಸುವ ಗುಡಿಮಾಸ ಪತ್ರಿಕೆ ಇಂದು ಬಿಡುಗಡೆ ಮಾಡಿದ್ದಾರೆ.

ಇನ್ನೂ ಜಿಲ್ಲಾ ಮಟ್ಟದ ದೇವಾಲಯಗಳ ಮೇಲ್ವಿಚಾರಣೆಗೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರುಗಳ ಕಾರ್ಯಗಾರವನ್ನು ಏರ್ಪಡಿಸಲಾಗಿದೆ. ಇಲಾಖೆ ಆಡಳಿತದಲ್ಲಿ ಪಾರದರ್ಶಕತೆ ತರಲು ಇಲಾಖೆಯ ಕಡತಗಳು ತ್ವರಿತ ಗತಿಯಲ್ಲಿ ವಿಲೇವಾರಿಯಾಗಲು ಇ- ಆಫೀಸ್ ತಂತ್ರಾಂಶವನ್ನು ಇಂದಿನಿಂದ ಜಾರಿಗೆ ತರಲಾಗಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *