ಸೋಮವಾರದಿಂದಲೇ ವ್ಯಾಕ್ಸಿನ್ ಪೂರೈಕೆ…! ಜನವರಿ 11ರಂದು ಲಸಿಕೆ ಪೂರೈಕೆಗೆ ಪ್ರಧಾನಿ ಮೋದಿ ಚಾಲನೆ ಕೊಡ್ತಾರಾ…?
ಕೊರೋನಾ ಲಸಿಕೆ ಹಂಚಿಕೆಗೆ ಸಿದ್ಧತೆ ಮಾಡ್ತಿರುವ ಬೆನ್ನಲ್ಲೆ ಜನವರಿ 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಲಿದ್ದಾರೆ. ವ್ಯಾಕ್ಸಿನ್ ಹಂಚಿಕೆ ಕುರಿತಂತೆ ಎಲ್ಲಾ ಸಿಎಂಗಳ ಜೊತೆ ಸಿಎಂ ಚರ್ಚಿಸಲಿದ್ದು, ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕೊರೋನಾ ಲಸಿಕೆ ಹಂಚಿಕೆಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದ್ದು ಈ ಹೊತ್ತಲ್ಲೇ ನಾಡಿದ್ದು ನಡೆಯಲಿರೋ ಪ್ರಧಾನಿಯವ್ರ ಕಾನ್ಫರೆನ್ಸ್ ಸಾಕಷ್ಟು ಕುತೂಹಲ ಕೆರಳಿಸಿದೆ.
ಸೋಮವಾರದಿಂದಲೇ ವ್ಯಾಕ್ಸಿನ್ ಪೂರೈಕೆ ಮಾಡಲು ನಿರ್ಧರಿಸಿದ್ದು, ಜನವರಿ 11ಕ್ಕೆ ಪ್ರಧಾನಿ ಮೋದಿ ವ್ಯಾಕ್ಸಿನ್ ಪೂರೈಕೆಗೆ ಚಾಲನೆ ನೀಡಲಿದ್ದಾರಂತೆ. ಸೋಮವಾರ ಎಲ್ಲಾ ರಾಜ್ಯಗಳ ಸಿಎಂಗಳ ಜತೆ ಸಭೆ ಸಡೆಸಿ, ವ್ಯಾಕ್ಸಿನ್ ಹಂಚಿಕೆ ಬಗ್ಗೆ ಮೋದಿ ವರ್ಚುವಲ್ ಮೀಟಿಂಗ್ ನಡೆಸಲಿದ್ದಾರಂತೆ.
ಸಿಎಂಗಳ ಮೀಟಿಂಗ್ನಲ್ಲೇ ವ್ಯಾಕ್ಸಿನ್ಗೆ ಸಿಗುತ್ತಾ ಚಾಲನೆ..? ಖುದ್ದು ಪ್ರಧಾನಿ ಮೋದಿ ವ್ಯಾಕ್ಸಿನ್ ಪಡೀತಾರಾ..? ಮೊದಲ ಹಂತದಲ್ಲಿ ಎಷ್ಟು ಮಂದಿಗೆ ಘೋಷಣೆ ಮಾಡ್ತಾರೆ..? ಮೊದಲ ದಿನ ಎಷ್ಟು ಮಂದಿಗೆ ವ್ಯಾಕ್ಸಿನ್ ನೀಡುತ್ತಾರೆ..? ಅಂತ ಕಾದು ನೋಡಬೆಕಾಗಿದೆ.