ಮಗಳ ಮದುವೆಗೆ ಕರೆಯಲು ಬಂದ ಜಮೀರ್ ಗೆ ಕೇಸರಿ ಶಾಲು ಹಾಕಿ ಸನ್ಮಾನಿಸಿದ ಸಂಸದ ತೇಜಸ್ವಿ ಸೂರ್ಯ
ರಾಜಕೀಯದಲ್ಲಿ ವೈರಿಗಳು ಯಾರೂ ಇಲ್ಲ ಎನ್ನುವುದು ಹಲವಾರು ಕಾಲದಿಂದ ಜನಜನಿತವಾದ ಮಾತು. ಪಕ್ಷದ ಸಿದ್ದಾಂತಗಳಲ್ಲಿ ಭಿನ್ಗ ಅಭಿಪ್ರಾಯಗಳಿದ್ದರೂ, ಕೆಲವೊಮ್ಮೆ ಅದೆಲ್ಲಾ ಗಣನೆಗೆ ಬರುವುದೂ ಇಲ್ಲ. ಇತ್ತ ಶಾಸಕರೊಬ್ಬರು ತಮ್ಮ ಮಗಳ ಮದುವೆಯ ಆಮಂತ್ರಣ ಕೊಡೋಕೆ ಬಂದಾಗ ಕೇಸರಿ ಶಾಲು ಹೊದೆಸಿ ಸನ್ಮಾನಿಸಿದ್ದಾರೆ.
ತನ್ನ ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಇತ್ತೀಚೆಗೆ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಅವರ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಶಾಸಕರನ್ನು ಕೇಸರಿ ಶಾಲು, ಹಾರ ಮತ್ತು ಪೇಟ ತೊಡಿಸಿ ಸನ್ಮಾನಿಸಿದ್ದಾರೆ.
ಇನ್ನು ಶಾಸಕ ಜಮೀರ್ ಅಹ್ಮದ್ ಪುತ್ರಿಯ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ತಿಂಗಳಲ್ಲಿ ನಡೆಯಲಿದೆ. ಪಕ್ಷಾತೀತವಾಗಿ ಎಲ್ಲಾ ಶಾಸಕ ಸಂಸದರನ್ನು ಭೇಟಿಯಾಗಿ ಮಗಳ ವಿವಾಹದ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ.