ಸಂಪುಟ ವಿಸ್ತರಣೆಗೆ ಹೈಕಮಾಂಡ್ ಸಮ್ಮತಿ, ಜ 13ರಂದು 7 ನೂತನ ಸಚಿವರು ಸಂಪುಟಕ್ಕೆ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡಿದ್ದು ಜ 13ರಂದು ನೂತನ ಸಚಿವರಾಗಿ 7 ಜನರು ಸಂಪುಟ ಸೇರ್ಪಡೆಯಾಗಲಿ ದ್ದಾರೆ.ಸಂಪುಟಕ್ಕೆ ಸೇರ್ಪಡೆಯಾಗಲಿರುವವರ ಹೆಸರನ್ನು ಸೋಮವಾರ ಬಹಿರಂಗಪಡಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗೆ ಪಕ್ಷದ ವರಿಷ್ಠರು ದೂರ ವಾಣಿ ಕರೆ ಮಾಡಿ 7 ಜನರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ .ಜ 14ರಂದು ಸಂಕ್ರಾತಿ ಹಬ್ಬದ ಹಿನ್ನಲೆಯಲ್ಲಿ ಜ 13ರಂದ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಯಾರೆಲ್ಲಾ ಸಂಪುಟಕ್ಕೆ ಸೇರ್ಪಡೆ ಯಾಗಲಿದ್ದಾರೆ ಎಂಬುದನ್ನು ನಾಳೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.ಆಮೂಲಕ ಹಲ ವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ರಚನೆಗೆ ಕಾಡಿ ಬೇಡಿ ಹೈಕಮಾಂ ಡ್ ಒಪ್ಪಿಗೆ ನೀಡಿದೆ ಎನ್ನಲಾಗಿದೆ