ನಿಮ್ಮ ಖಾಸಗಿ ಸಂದೇಶಗಳನ್ನು ವಾಟ್ಸಾಪ್ಗೆ ನೋಡಲು ಸಾಧ್ಯವಿಲ್ಲ…! ಕೊನೆಗೂ ವಾಟ್ಸ್ಅಪ್ ಕಂಪನಿಯಿಂದ ಸ್ಪಷ್ಟನೆ..
ಕಳೆದ ಕೆಲವು ದಿನಗಳಿಂದ ಸಾಕಷ್ಟು ಚರ್ಚೆ ಹಾಗೂ ಗೊಂದಲ ಸೃಷ್ಟಿಸಿರೋ ವಾಟ್ಸ್ಅಪ್ ಹೊಸ ರೂಲ್ಸ್ಗೆ ಕೊನೆಗೂ ವಾಟ್ಸ್ಅಪ್ ಸಂಸ್ಥೆ ಸ್ಪಷ್ಟನೆ ನೀಡಿದೆ. ವಾಟ್ಸ್ಅಪ್ ಜನರ ಖಾಸಗಿತನಕ್ಕೆ ಧಕ್ಕೆ ತರುತ್ತಿದೆ ಅನ್ನೋ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಭಾರತ ಸೇರಿ ಇಡೀ ವಿಶ್ವಾದ್ಯಂತ ಹಲವು ರಾಷ್ಟ್ರಗಳು, ಸಿಗ್ನಲ್, ಟೆಲಿಗ್ರಾಮ್ ಆ್ಯಪ್ಗಳಿಗೆ ಜನ ಮೊರೆ ಹೋಗಿದ್ರು. ಈ ಸಂಬಂಧ ಕೊನೆಗೂ ವಾಟ್ಸ್ಅಪ್ ಕಂಪನಿ ಹಲವು ಸ್ಪಷ್ಟನೆಗಳನ್ನ ನೀಡಿ, ಜನರ ಖಾಸಗಿತನಕ್ಕೆ ಯಾವುದೇ ಧಕ್ಕೆ ಇಲ್ಲ ಅಂತ ಹೇಳಿದೆ.
ವಾಟ್ಸ್ಅಪ್ ಸ್ಪಷ್ಟನೆ ಏನು.?
ನಿಮ್ಮ ಖಾಸಗಿ ಸಂದೇಶಗಳನ್ನು ವಾಟ್ಸಾಪ್ಗೆ ನೋಡಲು ಸಾಧ್ಯವಿಲ್ಲ
ನಿಮ್ಮ ಕರೆಗಳನ್ನು ಕೇಳಿಸಿಕೊಳ್ಳುವುದಿಲ್ಲ. ಇದು ಫೇಸ್ಬುಕ್ಗೂ ಅನ್ವಯ.
ಸಂದೇಶಗಳನ್ನು, ಕರೆಗಳ ದಾಖಲೆಗಳನ್ನ ವಾಟ್ಸಾಪ್ ಉಳಿಸಿಕೊಳ್ಳುವುದಿಲ್ಲ.
ನಿಮ್ಮ ಲೊಕೇಷನ್ ಮಾಹಿತಿಯನ್ನೂ ವಾಟ್ಸಾಪ್, ಫೇಸ್ಬುಕ್ ನೋಡಲು ಸಾಧ್ಯವಿಲ್ಲ.
ಮುಖ್ಯವಾಗಿ ಫೇಸ್ಬುಕ್ ಜೊತೆ ನಿಮ್ಮ ಕಾಂಟ್ಯಾಕ್ಟ್ ನಂಬರ್ ಶೇರ್ ಮಾಡಲ್ಲ.
ವಾಟ್ಸಾಪ್ ಗ್ರೂಪ್ಗಳು ಖಾಸಗಿಯಾಗಿಯೇ ಉಳಿದುಕೊಳ್ಳಲಿವೆ.
ನಿಮ್ಮ ಮೆಸೇಜ್ಗಳನ್ನ ಡಿಲೀಟ್ ಮಾಡುವಂತೆ ನೀವೇ ಸೆಟ್ ಮಾಡಬಹುದು.
ನಿಮ್ಮ ಮೆಸೇಜ್, ಡೆಟಾಗಳನ್ನ ನೀವೇ ಡೌನ್ಲೋಡ್ ಮಾಡಬಹುದು.