ಕಲಬುರಗಿಗೆ ಬಂದ ಕೊರೊನಾ ವ್ಯಾಕ್ಸಿನ್ಗೆ ಬರಪೂರ ಸ್ವಾಗತ ಕೋರಿದ ಆರೋಗ್ಯಾಧಿಕಾರಿಗಳು
ಬೆಂಗಳೂರಿನಿಂದ ಭದ್ರತೆ ಮೂಲಕ ವ್ಯಾಕ್ಸಿನ್ ಕಲಬುರಗಿಗೆ ತರಲಾಗಿದೆ. ಕಲಬುರಗಿ ಭಾಗಕ್ಕೆ ಒಟ್ಟು 12 ಸಾವಿರ ವ್ಯಾಕ್ಸಿನ್ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯ ಫ್ರೀಜರ್ನಲ್ಲಿ ಲಸಿಕೆ ದಾಸ್ತಾನು ಮಾಡಲಾಗಿದೆ.
ಕಲಬುರಗಿ: ದೇಶದಲ್ಲೇ ಮೊದಲ ಸಾವು ಕಂಡ ಕಲಬುರಗಿಗೆ ಕೊರೊನಾ ವ್ಯಾಕ್ಸಿನ್ ಬಂದಿದೆ. ಸಂಕ್ರಾಂತಿ ದಿನವೇ ಜಿಲ್ಲೆಗೆ ಆಗಮಿಸಿದ ಕೋವಿಡ್ ವ್ಯಾಕ್ಸಿನ್ ಅನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಶೇಖರ ಮಾಲಿ ಬರಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ಭದ್ರತೆ ಮೂಲಕ ವ್ಯಾಕ್ಸಿನ್ ಕಲಬುರಗಿಗೆ ತರಲಾಗಿದೆ. ಕಲಬುರಗಿ ಭಾಗಕ್ಕೆ ಒಟ್ಟು 12 ಸಾವಿರ ವ್ಯಾಕ್ಸಿನ್ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯ ಫ್ರೀಜರ್ನಲ್ಲಿ ಲಸಿಕೆ ದಾಸ್ತಾನು ಮಾಡಲಾಗಿದೆ. ರಾಯಚೂರು ಜಿಲ್ಲೆಗೆ 9 ಸಾವಿರ, ಬೀದರ್ ಜಿಲ್ಲೆಗೆ 5,500, ಯಾದಗಿರಿ ಜಿಲ್ಲೆಗೆ 3 ಸಾವಿರ ಎಂಬಂತೆ ಒಟ್ಟು 12 ಸಾವಿರ ವ್ಯಾಕ್ಸಿನ್ ಕಳುಹಿಸಿಕೊಡಲಾಗಿದೆ. ಆದರೆ, ಒಟ್ಟು 21 ಸಾವಿರ ವ್ಯಾಕ್ಸಿನ್ ಅಗತ್ಯವಿತ್ತು. ಆದರೆ, ಜಿಲ್ಲೆಗೆ 12 ಸಾವಿರ ವ್ಯಾಕ್ಸಿನ್ ಮಾತ್ರ ಬಂದಿದೆ. ಉಳಿದ ಡೋಸ್ ನಂತರದಲ್ಲಿ ಬರಲಿವೆ. ಸದ್ಯಕ್ಕೆ ಕೋವಿಶೀಲ್ಡ್ ವ್ಯಾಕ್ಸಿನ್ ಬಂದಿದ್ದು, ಮುಂದಿನ ದಿನಗಳಲ್ಲಿ ಕೋವ್ಯಾಕ್ಸಿನ್ ಸಹ ಬರಲಿದೆ ಎಂದು ಡಾ. ರಾಜಶೇಖರ ಮಾಲಿ ತಿಳಿಸಿದ್ದಾರೆ.
ನಾಳೆ ಎಲ್ಲಾ ಪ್ರಾಥಮಿಕ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗುವುದು. ಜನವರಿ 16 ಕ್ಕೆ ವ್ಯಾಕ್ಸಿನ್ಗೆ ಚಾಲನೆ ಸಿಗಲಿದ್ದು. ಜನವರಿ 17 ರಿಂದ ಎಲ್ಲಾ ಕಡೆ ವ್ಯಾಕ್ಸಿನ್ ಕೊಡಲಾಗುವುದು. ಬೇರೆ ಜಿಲ್ಲೆಗಳ ವ್ಯಾಕ್ಸಿನ್ ಡೋಸ್ಗಳನ್ನು ಪೊಲೀಸ್ ಭದ್ರತೆಯಲ್ಲಿ ಕಳಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಡಾ. ರಾಜಶೇಖರ ಮಾಲಿ ಅವರು ಮಾಹಿತಿ ನೀಡಿದ್ದಾರೆ.