ಇಂದು ನನಗೆ ಅತ್ಯಂತ ಸಂತೋಷ, ತೃಪ್ತಿ ತಂದ ದಿನ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್
ನವದೆಹಲಿ: ಇಂದು ನನಗೆ ಅತ್ಯಂತ ಸಂತೋಷ ಹಾಗೂ ತೃಪ್ತಿ ದಿನವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಶನಿವಾರ ಹೇಳಿದ್ದಾರೆ.
ದೇಶದಾದ್ಯಂತ ಕೊರೋನಾ ಲಸಿಕೆ ಆಂದೋಲನ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇಂದು ನನಗೆ ಅತ್ಯಂತ ಸಂತೋಷ ಹಾಗೂ ತೃಪ್ತಿ ದಿನವಾಗಿದೆ. . ಒಂದು ವರ್ಷದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಲೇ ಇದ್ದೇವೆ. ಕೊರೋನಾ ವಿರುದ್ಧ ಹೋರಾಡಲು ಈ ಲಸಿಕೆ ಸಂಜೀವಿನಿ ರೀತಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಇದು ವಿಶ್ವದಲ್ಲಿ ಅತೀದೊಡ್ಡ ರೋಗನಿರೋಧಕ ಅಭಿಯಾನವಾಗಿದೆ. ಇಂತಹ ಪರಿಸ್ಥಿತಿ ನಿಭಾಯಿಸುವಲ್ಲಿ ಭಾರತ ಅಪಾರ ಅನುಭವವನ್ನು ಹೊಂದಿದೆ. ನಾವು ಈಗಾಗಲೇ ಪೋಲಿಯೋ ಹಾಗೂ ಸಿಡುಬನ್ನು ನಿರ್ಮೂಲನೆ ಮಾಡಿದ್ದೇವೆಂದು ತಿಳಿಸಿದ್ದಾರೆ.