ಕಲಬುರಗಿ : ತಲ್ವಾರ್ ಹಿಡಿದು ಡಿಜೆಗೆ ಹೆಜ್ಜೆ ಹಾಕಿದ ಯುವಕರು ಅಂದರ್​

ಬರ್ತಡೇ ದಿನವೇ ಯುವಕರ ಗುಂಪು ತಲ್ವಾರ್​​ ಝಳಪಿಸಿದೆ. ತಲ್ವಾರ್ ಹಿಡಿದು ಕೆಲವು ಯುವಕತು ಡಿಜೆಗೆ ಹೆಜ್ಜೆ ಹಾಕಿದ್ದಾರೆ. ಕಲಬುರಗಿಯ ಮೆಹಬೂಬ ನಗರದಲ್ಲಿ ತಡರಾತ್ರಿ ನಡೆದ ಘಟನೆ ನಡೆದಿತ್ತು. ಈ ಸಂಬಂಧ ಇಮ್ರಾನ್, ತಬ್ರೇಜ್, ರಶೀದ್, ಅಫ್ರೋಜ್, ತಲ್ಹಾ, ಸೋಹೆಲ್ ಹಾಗೂ ಜಹೀರ್ ಎಂಬುವರನ್ನು ಬಂಧಿಸಲಾಗಿದೆ.

ಇಮ್ರಾನ್ ಎಂಬಾತನ ಬರ್ತಡೇಗೆ ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ವೇದಿಕೆ ಮೇಲೆ ತಲ್ವಾರ್ ಡ್ಯಾನ್ಸ್ ಮಾಡಿದ್ದು, ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಎಸಿಪಿ ಅಂಶುಕುಮಾರ್ ನೇತೃತ್ವದ ತಂಡ ಪುಂಡರನ್ನು ಬಂಧಿಸಿದ್ದು, ರೋಜಾ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *