ಮೂರನೇ ಬಾರಿ ಒಂದಾಗುತ್ತಿರುವ ‘ರಾಜಕುಮಾರ’ ಜೋಡಿ..! ಅಪ್ಪು-ಸಂತೋಷ್-ವಿಜಯ್ ಕಾಂಬೋದಲ್ಲಿ ಹೊಸ ಸಿನಿಮಾ..!
‘ರಾಜಕುಮಾರ’ ಸ್ಯಾಂಡಲ್ವುಡ್ನಲ್ಲಿ ಹೊಸ ಇತಿಹಾಸ ಬರೆದ ಸಿನಿಮಾ. ಈ ಚಿತ್ರ ಬಿಗ್ ಹಿಟ್ ಆಗ್ತಿದ್ದಂತೆ ‘ಯುವರತ್ನ’ ಸಿನಿಮಾ ಮೂಲಕ ಮತ್ತೆ ಈ ಜೋಡಿ ಒಂದಾದ್ರು. ಈ ಸಿನಿಮಾ ರಿಲೀಸ್ಗೂ ಮೊದಲೇ ಗಾಂಧಿನಗರದಿಂದ ಹಿಡಿದು ಟಾಲಿವುಡ್ ಅಂಗಳದಲ್ಲಿಯೂ ಟಾಕ್ ಕ್ರಿಯೇಟ್ ಮಾಡ್ತಿದೆ. ಹೀಗಿರುವಾಗಲೇ ಮತ್ತೊಮ್ಮೆ ಅಂದ್ರೆ ಮೂರನೇ ಬಾರಿ ಪವರ್ ಸ್ಟಾರ್ ಹಾಗೂ ಸ್ಟೈಲಿಶ್ ಸ್ಟಾರ್ ಒಂದಾಗುತ್ತಿರುವ ವಿಷಯವನ್ನ ರಿವೀಲ್ ಮಾಡಿದೆ.
ಇಡೀ ಕನ್ನಡ ಚಿತ್ರರಂಗಕ್ಕೆ ಹೊಸ ಎನರ್ಜಿ ತಂದು ಕೊಟ್ಟ ಸಿನಿಮಾ ರಾಜಕುಮಾರ. ಸ್ಯಾಂಡಲ್ವುಡ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸಿನಿಮಾವಿದು. ಸ್ಯಾಂಡಲ್ವುಡ್ನಲ್ಲಿ ‘ರಾಜಕುಮಾರ’ ಸೂಪರ್ ಹಿಟ್ ಆದ ನಂತ್ರ ಮತ್ತೆ ಈ ಜೋಡಿಗಳು ಅಂದ್ರೆ ನಿರ್ದೇಶಕ ಸಂತೋಷ್ ಆನಂದ್ ರಾಮ್, ಪುನೀತ್ ರಾಜ್ ಕುಮಾರ್ ಮತ್ತು ನಿರ್ಮಾಪಕ ವಿಜಯ್ ಕಿರಂಗದೂರು ‘ಯುವರತ್ನ’ ಸಿನಿಮಾ ಮೂಲಕ ಮತ್ತೊಮ್ಮೆ ಜೊತೆಯಾಗಿರೋದು ನಿಮ್ಗೂ ಗೊತ್ತಿದೆ.
ಈ ‘ರಾಜಕುಮಾರ’ ಜೋಡಿಗಳ ‘ಯುವರತ್ನ’ ಸಿನಿಮಾ ರಿಲೀಸ್ಗೂ ಮುಂಚೆನೇ ಗಾಂಧಿನಗರ ಮಾತ್ರವಲ್ಲದೇ ಟಾಲಿವುಡ್ನಲ್ಲಿಯೂ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸುತ್ತುದೆ. ಹೌದು ಯುವರತ್ನ ಸಿನಿಮಾದ ಪೋಸ್ಟರ್ನಿಂದ ಹಿಡಿದು ಟೀಸರ್, ಸಾಂಗ್ಗಳು ಸಿನಿಪ್ರೇಕ್ಷಕರನ್ನ ಹುಚ್ಚೇದು ಕುಣಿಸುತ್ತಿದೆ. ಇನ್ನೇನ್ನು ಏಪ್ರಿಲ್ 1ಕ್ಕೆ ‘ಯುವರತ್ನ’ ಸಿನಿಮಾ ರಿಲೀಸ್ ಆಗುತ್ತೆ ಅಂತ ಚಿತ್ರತಂಡ ಅನೌನ್ಸ್ ಮಾಡಿದ ಬೆನ್ನಲೇ, ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನ್ಯೂಸ್ ಕೊಟ್ಟಿದೆ.
ಸ್ಯಾಂಡಲ್ವುಡ್ನಲ್ಲಿ ಇನ್ನೊಮ್ಮೆ ಹೊಸ ಮೈಲಿಗಲ್ಲು ಸೃಷ್ಟಿಸಲು, ಈ ತ್ರಿವಳಿ ಜೋಡಿಗಳು ರೆಡಿಯಾಗಿದ್ದಾರೆ. ಯೆಸ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹಾಗೂ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರ್ ಮೂರನೇ ಬಾರಿ ಒಂದಾಗುತ್ತಿದ್ದಾರೆ. ಈಗಾಗಲೇ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್ಕುಮಾರ್ಗೆ ಹೊಸ ಸಿನಿಮಾ ಘೋಷಿಸಿತ್ತು. ಆದ್ರೆ ನಿರ್ದೇಶಕ,ನಿರ್ಮಾಪಕ, ಕಥೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಈಗ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್, ನನ್ನ ಮುಂದಿನ ಸಿನಿಮಾ,ನನ್ನ ಐಕಾನ್ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆಗೆ ಅಂತ ಟ್ವಿಟ್ ಮಾಡಿದ್ದಾರೆ.
ಸಂತೋಷ್ ಆನಂದ್ ರಾಮ್ ಟ್ವೀಟ್ ನೋಡಿದ ಅಪ್ಪು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ರಾಜಕುಮಾರ ಬಿಗ್ ಹಿಟ್ ಆಗಿದ್ದು,‘ಯುವರತ್ನ’ ರಿಲೀಸ್ಗೂ ಮೊದಲೇ ಹಿಟ್ ಆಗುವ ಸೂಚನೆ ಸಿಕ್ಕಿದೆ. ಇನ್ನು ಈ ಹೊಸ ಸಿನಿಮಾದ ಬಗ್ಗೆ ಇನ್ನಿಲ್ಲದ ಕುತೂಹಲ ಇದೆ. ಆದ್ರೆ ಸಂತೋಷ್ ಆನಂದ್ ರಾಮ್ ಕೊಟ್ಟ ಮಾಹಿತಿ ಬಿಟ್ರೆ ಬೇಱವ ಮಾಹಿತಿ ಕೊಡ ಸಿಕ್ಕಲ್ಲ, ಇದರ ಕಂಪ್ಲೀಟ್ ಡೀಟೈಲ್ಸ್ ರಿವೀಲ್ ಆಗಬೇಕಾದ್ರೆ ಸ್ವಲ್ಪ ದಿನ ವೈಟ್ ಮಾಡಲೇ ಬೇಕು..