ನಿಮ್ಮ ಸಮಸ್ಯೆ ನೀವೇ ಬಗೆಹರಿಸಿಕೊಳ್ಳಿ ದಿಲ್ಲಿವರೆಗೆ ಬರ್ಬೇಡಿ…! ಪ್ರಮುಖರ ಸಭೆಯಲ್ಲಿ ಖಡಕ್ ಸೂಚನೆ ಕೊಟ್ಟ ಅಮಿತ್ ಶಾ…!
ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಕೆಲವು ಶಾಸಕರು ಸರ್ಕಾರವನ್ನು ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ, ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಿಮ್ಮ ನಿಮ್ಮ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳಬೇಕು ಅದಕ್ಕಾಗಿ ದಿಲ್ಲಿಗೆ ಬರಬೇಡಿ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.
ನಿಮ್ಮ ಸಮಸ್ಯೆ ತಾಲೂಕು ಮಟ್ಟದಲ್ಲಿ ನೀವೇ ಬಗೆ ಹರಿಸಿಕೊಳ್ಳಿ. ಜಿಲ್ಲಾ ಮಟ್ಟದಲ್ಲಿದ್ದರೆ ಜಿಲ್ಲಾ ಮಟ್ಟದಲ್ಲಿ ಸರಿಪಡಿಸಿಕೊಳ್ಳಿ. ರಾಜ್ಯ ಮಟ್ಟದಲ್ಲಿದ್ದರೆ ರಾಜ್ಯ ಮಟ್ಟದಲ್ಲೇ ಬಗೆ ಹರಿಸಿಕೊಳ್ಳಿ. ರಾಜ್ಯ ಮಟ್ಟದಲ್ಲಿ ಆಗದೇ ಇದ್ದಾಗ ಮಾತ್ರ ದೆಹಲಿವರೆಗೂ ಬನ್ನಿ. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ ಅನ್ನೋದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಕುಟುಂಬ ರಾಜಕಾರಣ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಪಕ್ಷದಲ್ಲಿ ಹಣ ಬಲ, ತೋಳ್ಬಲದ ರಾಜಕಾರಣಕ್ಕೆ ಅವಕಾಶವಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿ. ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಮನೆ-ಮನೆಗೂ ತಲುಪಿಸಿ. ಕಟ್ಟಕಡೆಯ ಕಾರ್ಯಕರ್ತನನ್ನೂ ಗೌರವಿಸಿ ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ.