‘ಘಟಾನುಘಟಿಗಳ ಚಿತ್ತ ನಗರಾಭಿವೃದ್ಧಿಇಲಾಖೆಯತ್ತ’: ಯಾರಿಗೊಲಿಯಲಿದೆ ‘ಬೆಂಗಳೂರು’ ಪಾರುಪತ್ಯ?

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡಿದ ಸಿಎಂ ಯಡಿಯೂರಪ್ಪ ಅವರ ಮುಂದಿರುವ ಬಹು ದೊಡ್ಡ ಸವಾಲು ಖಾತೆ ಹಂಚಿಕೆ, ಮುಖ್ಯಮಂತ್ರಿ ಯಡಿಯೂರಪ್ಪ  ತಮ್ಮ ಬಳಿಯೇ ಹಲವು ಮಹತ್ವದ ಖಾತೆ ಇಟ್ಟುಕೊಂಡಿದ್ದಾರೆ.

ಖಾತೆ ಹಂಚಿಕೆ ಸಂಬಂಧ ಮಗಳವಾರ ಸಿಎಂ ಹಿರಿಯ ನಾಯಕರ ಸಭೆ ಕರೆದಿದ್ದಾರೆ,  ಅವರ ಜೊತೆ ಚರ್ಚಿಸಿ ಖಾತೆಗಳ ಪುನರ್ ಹಂಚಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ, ಈ ಪ್ರಕ್ರಿಯೆ ಸರಾಗವಾಗಿ ನಡೆಯಲಿದೆ ಎಂದ ಸಿಎಂ ಭಾವಿಸಿದ್ದಾರೆ, ಆದರೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವ  ಹಲವು ಆಕಾಂಕ್ಷಿಗಲಿಂದ ಖಾತೆ ಹಂಚಿಕೆ ಕಬ್ಬಿಣದ ಕಡಲೆಯಾಗಿದೆ.

ತಮ್ಮ ಬಳಿಯಿರುವ ಖಾತೆಗಳನ್ನು ಸಿಎಂ ನೀಡಲಿದ್ದಾರೆ ಎಂದು ಹೊಸಬರು ಭರವಸೆ ವ್ಯಕ್ತ ಪಡಿಸಿದ್ದಾರೆ. ಆದರೆ ಅಸಮತೋಲನ ನಿವಾರಿಸಲು ಬಿಜೆಪಿಯ ಹಳಬರಿಗೆ ಮಹತ್ವದ ಖಾತೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಬೆಂಗಳೂರು ನಗರ ಜಿಲ್ಲೆಯೊಂದರಲ್ಲೆ 8 ಸಚಿವರಿದ್ದಾರೆ.  ಡಾ ಸಿ ಎನ್ ಅಶ್ವತ್ ನಾರಾಯಣ್, ಅರವಿಂದ್ ಲಿಂಬಾವಳಿ ಮತ್ತು ಆರ್ ಅಶೋಕ್ -ಮಹತ್ವದ ಖಾತೆಗಾಗಿ ಪೈಪೋಟಿ ನಡೆಸಿದ್ದಾರೆ.

ಹೊಸಬರಿಗೆ ಆದ್ಯತೆ ನೀಡಲಾಗುತ್ತಿರುವ ಬಗ್ಗೆ ಪಕ್ಷದಲ್ಲಿನ ನಾಯಕರ ಮನಸ್ಥಿತಿಯನ್ನು ಗಮನಿಸಿದರೆ, ಖಾತೆ  ಮರುಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿಯವರಿಗೆ ಸಮನ್ವೆತೆ ಕಾಪಾಡಿಕೊಳ್ಳುವುದು ಪ್ರಮುಖ ಸವಾಲಾಗಿದೆ.

ಪಕ್ಷದ ಹಳಬರಿಗೆ ಕೆಲವು ಪ್ರಮುಖ ಖಾತೆ ನೀಡುವ ಸಾಧ್ಯತೆಯಿದೆ, ಹಣಕಾಸು, ಡಿಪಿಎಆರ್ ಮತ್ತು ಗುಪ್ತಚರ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಖಾತೆಗಳನ್ನು ಹಂಚಿಕೆ ಮಾಡಲು ಸಿಎಂ ನಿರ್ಧರಿಸಿದ್ದಾರೆ.  ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಆರ್.ಅಶೋಕ್ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ನಾನು ರೈತರಿಗೆ ಸಹಾಯ ಮಾಡಲು ಅನೇಕ ಕೆಲಸಗಳಿವೆ, ಕಳೆದ ಒಂದು ವರ್ಷದಿಂದ ನಾನು ಈ ಖಾತೆ ನಿರ್ವಹಿಸುತ್ತಿದ್ದೇನೆ, ಹೆಚ್ಚುವರಿ ಖಾತೆಗಳ ಉಸ್ತುವಾರಿ ವಹಿಸುವುದರಿಂದರಿಂದ ಜವಾಬ್ದಾರಿಯಿಂದ ವಿಮುಖಗೊಳಿಸುವಂತಾಗುತ್ತದೆ,  ಆದರೆ ಸಿಎಂ ಕರೆಯ ಮೇಲೆ ಎಲ್ಲವು ನಿರ್ಧರಿತವಾಗಲಿದೆ ಎಂದು ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ಅಶ್ವತ್ಥ ನಾರಾಯಣ ಅವರನ್ನು ಈಗಾಗಲೇ ಡಿಸಿಎಂ ಮಾಡಲಾಗಿದೆ, ಹಾಗಾಗಿ ಬೆಂಗಳೂರು ನಗರಾಭಿವೃದ್ಧಿ ಖಾತೆ ಅವರಿಗೆ ಸೂಕ್ತ ವಾಗುವುದಿಲ್ಲ, ಈ ಹಿಂದೆ ಡಿಸಿಎಂ ಆಗಿದ್ದ ಆರ್. ಅಶೋಕ್ ಕಂದಾಯ ಖಾತೆ ನಿರ್ವಹಿಸುತ್ತಿದ್ದಾರೆ, ಹಾಗಾಗಿ ಕಳೆದ ಒಂದೂ ವರೆ ವರ್ಷದಿಂದ ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವ ಅರವಿಂದ ಲಿಂಬಾವಳಿ ಅವರಿಗೆ ನಗರಾಭಿವೃದ್ಧಿ ನೀಡಬಹುದು ಎಂದು ಹೇಳಲಾಗುತ್ತಿದೆ,  ಇನ್ನೂ ಯಡಿಯೂರಪ್ಪ ನಿಷ್ಠ ಎಂದೇ ಹೇಳಲಾಗುತ್ತಿರುವ ಸೋಮಣ್ಣ ಕೂಡ ಮುಂಚೂಣಿಯಲ್ಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದಿ  ನೇಮಕವಾಗಿರುವ ಸಿಪಿ ಯೋಗೇಶ್ವರ್ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದು, ಮುರುಗೇಶ್ ನಿರಾಣಿ ಅಬಕಾರಿ ಖಾತೆ ಬಯಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *