ಗೋಹತ್ಯೆ ನಿಷೇಧ ಜಾರಿಗೆ ತಂದಿದ್ದು ಮಹಾತ್ಮ ಗಾಂಧಿ ಕನಸು ನನಸು ಮಾಡಿದಂತಾಗಿದೆ : ಬಿಎಸ್ವೈ
ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನಿನ್ನೆ ಕರಾವಳಿಯ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದು, ಇಂದು ಎರಡನೇ ದಿನದ ಪ್ರವಾಸವನ್ನು ಕೈಗೊಂಡಿದ್ದಾರೆ.
ಉಡುಪಿಯಲ್ಲಿ ಸಿಎಂ ಎರಡನೇ ದಿನದ ಪ್ರವಾಸ ಆರಂಭ ಮಾಡಿದ್ದು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಅಲ್ಲಿಂದ ಹೆಜಮಾಡಿ ಮೀನುಗಾರಿಕಾ ಬಂದರಿಗೆ ಹೋಗಿ ರಾಜಕೀಯದಲ್ಲಿ ನಾವು ಯಾವಾಗಲು ಗೊಂದಲದಲ್ಲಿ ಇರುತ್ತೇವೆ. ಆದ್ದರಿಂದ ರಾಜಕೀಯ ಮರೆತು ಧಾರ್ಮಿಕ ಪ್ರವಾಸ ಮಾಡಲು ಬಂದಿದ್ದೇನೆ ಎಂದು ಬಿ ಎಸ್ ವೈ ಹೇಳಿದ್ದಾರೆ.
ಈಗಾಗಲೇ ಶ್ರೀಕೃಷ್ಣಮಠ, ಕರಂಬಳ್ಳಿ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ ಹಾಗೂ ಪೇಜಾವರ ಶ್ರೀಗಳು ಅಷ್ಟ ಮಠದ ಸ್ವಾಮೀಜಿಗಳನ್ನು ಭೇಟಿಯಾಗಿದ್ದೇನೆ. ಇಂದು ಮಹಾಲಕ್ಷ್ಮಿ ದೇವಸ್ಥಾನ, ಗಣಪತಿ ದೇವಸ್ಥಾನಕ್ಕೆ ಭೇಟಿಯಾಗುತ್ತೇನೆ ನಂತರ ಕಾಪು ಹೆಜಮಾಡಿ ಬಂದರು ಶಿಲಾನ್ಯಾಸ ಇದೆ. ಮೀನುಗಾರರ ಸಮಸ್ಯೆಗಳು ಏನು ಎಂಬುದನ್ನು ತಿಳಿದುಕೊಳ್ಳುತ್ತೇನೆ.
ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದದ್ದು ಎಲ್ಲರಿಗೂ ಸಮಾಧಾನ ತಂದಿದೆ. ಸ್ವಾತಂತ್ರ್ಯ ಬಂದ ಕೂಡಲೇ ಗೋಹತ್ಯೆ ನಿಷೇಧ ಜಾರಿಗೆ ತರಬೇಕು ಎಂಬುದು ಮಹಾತ್ಮ ಗಾಂಧೀಜಿ ಕನಸಾಗಿತ್ತು. ಬೇರೆ ಬೇರೆ ಕಾರಣಕ್ಕೆ ಮುಂದೂಡುತ್ತಾ ಬಂದರು. ಗೋ ಹತ್ಯೆ ಕಾಯ್ದೆಯನ್ನು ನಾವು ತಕ್ಷಣಕ್ಕೆ ಜಾರಿಗೆ ತಂದಿದ್ದೇವೆ ಎಂದು ಉಡುಪಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.