ಬೆಂಗಳೂರಿನಲ್ಲಿ ಮುಂಜಾನೆಯೇ ಪೊಲೀಸ್​ ಗುಂಡಿನ ಸದ್ದು..! ಕೊಲೆ ಆರೋಪಿ ಮೇಲೆ ಫೈರ್​ ಮಾಡಿ ಬಂಧಿಸಿದ ಪೊಲೀಸರು..!

ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗ್ತಿದ್ದ ಪ್ರವೀಣ್​​​ ಎಂಬಾತನನ್ನು ಬೆಂಗಳೂರಿನಲ್ಲಿ ಇಂದು ಮುಂಜಾನೆ‌ ಪೊಲೀಸರು ಕೊಲೆ ಆರೋಪಿ ಮೇಲೆ ಫೈರ್​ ಮಾಡಿ ಬಂಧಿಸಿದ್ದಾರೆ. ಎಲ್ಲಾ ಖಚಿತ ಮಾಹಿತಿಯ ಮೇಲೆ ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ.

ತಿಪ್ಪೇನಹಳ್ಳಿ ಬಳಿ ಅಡಗಿದ್ದ ಕೊಲೆ ಆರೋಪಿ ಪೀಣ್ಯಾ ಪೊಲೀಸರನ್ನು ಕಂಡ ಕೂಡಲೇ ಎಸ್ಕೇಪ್​​ಗೆ ಯತ್ನ ನಡೆಸಿದ್ದಾನೆ. ಕಾನ್ಸ್​ಟೇಬಲ್​​​​​​ ರಂಗಸ್ವಾಮಿ ಮೇಲೆ ಡ್ರ್ಯಾಗರ್​​​ನಿಂದ ಪ್ರವೀಣ್​​ ಹಲ್ಲೆ ನಡೆಸಲು ಯತ್ನಿಸಿದ್ದ ಸಮಯದಲ್ಲಿ PSI ಮಾಯಪ್ಪ ಬಿರಾಣಿ ಗಾಳಿಯಲ್ಲಿ‌‌‌ ಗುಂಡು ಹಾರಿಸಿ ಶರಣಾಗತಿಗೆ ಸೂಚಿಸಿದ್ದಾರೆ.

ಎಚ್ಚರಿಕೆ ನಡುವೆಯೂ ಎಸ್ಕೇಪ್​​ಗೆ ಯತ್ನಿಸಿದ್ದ ಆರೋಪಿ ಪ್ರವೀಣ್​​​​ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಾಗೂ ನಿನ್ನೆ ರಾತ್ರಿ ಇದೆ ರೀತಿ ಇಬ್ಬರು ರೌಡಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಪುಟ್ಟೇನಹಳ್ಳಿ, ಗಿರಿನಗರ ವ್ಯಾಪ್ತಿಯಲ್ಲಿ ರೌಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *