ಇಂದು ಸುಪ್ರೀಂ ಕೋರ್ಟ್ನಲ್ಲಿ ಹೊರಬರಲಿದೆ ನಟಿ ರಾಗಿಣಿಯ ಅರ್ಜಿ ವಿಚಾರಣೆ ತೀರ್ಪು!!
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರಿರೋ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ವೈದ್ಯಕೀಯ ಗ್ರೌಂಡ್ಸ್ ಮೇಲೆ ಇಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ತೀರ್ಪು ಹೊರಬರಲಿದೆ. NDPS ವಿಶೇಷ ನ್ಯಾಯಾಲಯ, ರಾಜ್ಯ ಹೈ ಕೋರ್ಟ್ನಲ್ಲೂ ನಟಿ ರಾಗಿಣಿ ಜಾಮೀನು ಅರ್ಜಿ ವಜಾ ಆಗಿತ್ತು. ಈ ಹಿನ್ನಲೆ ಸುಪ್ರೀಂ ಕೋರ್ಟ್ಗೆ ನಟಿ ರಾಗಿಣಿ ಜಾಮೀನು ಅರ್ಜಿ ಸಲ್ಲಿಸಿದ್ರು.
ಸಿಸಿಬಿ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಡ್ರಗ್ಸ್ ದಂಧೆ ಕೇಸ್ನಲ್ಲಿ ಜಾರ್ಜ್ ಶೀಟ್ ಸಹ ಸಲ್ಲಿಕೆ ಮಾಡಲಾಗಿದೆ. ಸಿಸಿಬಿ ಪೊಲೀಸರು ಮತ್ತು ನಟಿ ರಾಗಿಣಿ ಪರ ವಕೀಲರಿಂದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದಿಗೆ ನಟಿ ರಾಗಿಣಿ ಜಾಮೀನು ತೀರ್ಪು ಕಾಯ್ದಿರಿಸಿತ್ತು. ಇಂದು ಮಧ್ಯಾಹ್ನದ ವೇಳೆಗೆ ಜಾಮೀನು ಅರ್ಜಿ ತೀರ್ಪು ಹೊರಬರುವ ಸಾಧ್ಯತೆ ಇದೆ.