ರೈತರು ಪ್ರಧಾನಿ ಮಂತ್ರಿಗಿಂತ ಹೆಚ್ಚು ಸಂವೇದನಶೀಲರು: ರಾಹುಲ್ ಗಾಂಧಿ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಪ್ರತಿಭಟನೆ ನಡೆಸಿದ್ದು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ತಮ್ಮ ಪಕ್ಷವು ಸುಮ್ಮನಿರುವುದಿಲ್ಲ. ರೈತರು ಪ್ರಧಾನಿ ಮಂತ್ರಿಗಿಂತಲೂ ಹೆಚ್ಚು ಸಂವೇದನಶೀಲರು ಎಂದು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಪಂಜಾಬ್ ಮತ್ತು ಹರಿಯಾಣದ ಜನರು ಕೃಷಿ ಕಾನೂನನ್ನು ರದ್ದುಗೊಳಿಸುವ ಸಲುವಾಗಿ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ ಇದರಿಂದ ಅವರು ತುಂಬಾ ಕಷ್ಟ, ನಷ್ಟಗಳನ್ನು ಅನುಭವಿಸಿದ್ದಾರೆ ಹಾಗೂ ಇಲ್ಲಿನ ಶೇಕಡ 60 ರಷ್ಟು ಜನ ಕೃಷಿಯನ್ನು ಅವಲಂಭಿಸಿದ್ದಾರೆ. ಮೂರು ಕೃಷಿ ಕಾಯ್ದೆಗಳಿಂದ ರೈತರು ಮಾತ್ರವಲ್ಲದೆ ಮಧ್ಯಮ ವರ್ಗದ ಕುಟುಂಬಗಳೂ ಕಷ್ಟ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.
ಈ ನೂತನ ಕೃಷಿ ಕಾಯ್ದೆಗಳು ರೈತರಿಗಲ್ಲ. ಅದು ಅಂಬಾನಿ ಮತ್ತು ಅದಾನಿಯಂತಹ ಕಾರ್ಪೊರೇಟ್ಗಳಿಗೆ ಸಹಾಯವಾಗುತ್ತದೆ ಎಂದು ರಾಹುಲ್ ಆರೋಪಿಸಿದ್ದು ಅದಕ್ಕಾಗಿಯೇ ನಾವು ರೈತರ ಪರವಾಗಿ ನಿಂತಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ಕಾರವು ಈ ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೂ ಕಾಂಗ್ರೆಸ್ ಪಕ್ಷವು ಹಿಂದೆ ಸರಿಯಲ್ಲ. “ನರೇಂದ್ರ ಮೋದಿ ಸರ್ಕಾರ ಈ ಹಿಂದೆ ರೈತರ ಭೂಮಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿತು. ಭೂಸ್ವಾಧೀನ ಕಾಯ್ದೆಯನ್ನು ತಂದಾಗ ಕಾಂಗ್ರೆಸ್ ಪಕ್ಷವು ಆ ಸಮಯದಲ್ಲಿ ಅವರನ್ನು ತಡೆದಿತ್ತು.