ಲಸಿಕೆ ಪಡೆದವರೇ ಆರೋಗ್ಯದ ಬಗ್ಗೆ ಎಚ್ಚರ..! ಎರಡನೇ ಡೋಸ್ ಪಡೆಯೋಕು ಮುನ್ನಾ ಬೇಕಿದೆ ಜಾಗೃತಿ..!
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳೋವ್ರ ಸಂಖ್ಯೆ ಜಾಸ್ತಿಯಾಗ್ತಿದೆ. ಈಗಾಗ್ಲೇ ಅನೇಕ ಆರೋಗ್ಯ ಕಾರ್ಯಕರ್ತರು ಮೊದಲ ಹಂತದ ಲಸಿಕೆ ಪಡೆದಿದ್ದು, ಎರಡನೇ ಹಂತಕ್ಕೆ 28 ದಿನಗಳ ಅವಧಿ ಇರುತ್ತೆ. ಹೀಗಾಗಿ ಈ 28 ದಿನ ಬಹಳ ಮುಖ್ಯವಾಗಿದ್ದು, ಲಸಿಕೆ ಪಡೆದವರು ಜಾಗೃತೆ ವಹಿಸಿ ಅಂತಿದ್ದಾರೆ
ಈಗಾಗ್ಲೇ ಕೋವಿಡ್ ವ್ಯಾಕ್ಸಿನ್ ಆರಂಭವಾಗಿದ್ದು, ಸುಮಾರು 1 ವಾರ ಕಳೆದಿದೆ. ಎರಡು ಪ್ರಾಥಮಿಕ ಡೋಸ್‌ಗಳಲ್ಲಿ ವ್ಯಾಕ್ಸಿನ್ ನೀಡ್ತಿದ್ದು, ಈಗಾಗಲೇ ನಗರದಲ್ಲಿ ಸಾವಿರಾರು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ. ಮೊದಲ ಲಸಿಕೆ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬೇಕಾಗಿದೆ.
ಹೀಗಿರುವಾಗ ಅನೇಕರಿಗೆ ಈ ಮೊದಲ ಡೋಸ್ ಪಡೆದ 28 ದಿನಗಳ ಅವಧಿ ಬಹಳ ಮುಖ್ಯವಾಗಿರುತ್ತೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಈ 28 ದಿನಗಳ ಕಾಲ ತಮ್ಮ ಆರೋಗ್ಯದ ಬಗ್ಗೆ ಲಸಿಕೆ ಪಡೆದವರು ಎಚ್ಚರ ವಹಿಸಬೇಕಿದೆ. ಯಾಕೆಂದ್ರೆ ಲಸಿಕೆ ಪಡೆದವರ ದೇಹದಲ್ಲಿ ಇಮ್ಯುನಿಟಿ ಬೂಸ್ಟ್ ಆಗಲು ಆರಂಭವಾಗಿರುತ್ತೆ. ಇಂತಹ ಸಂದರ್ಭದಲ್ಲಿ ದಿನ ನಿತ್ಯದ ಕೆಲಸಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಉತ್ತಮವಾದ ಆಹಾರ ಸೇವಿಸಬೇಕು. ಹಾಗೂ ಜ್ವರ, ಶೀಥ,ಕೆಮ್ಮ ಈ ರೀತಿಯಾದ ಆರೋಗ್ಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ.
ಇನ್ನು ಮುಖ್ಯವಾಗಿ ವ್ಯಾಕ್ಸಿನ್ ಪಡೆದವರು ಡ್ರಿಂಕ್ಸ್‌ನಿಂದ ದೂರ ಉಳಿಯುವುದು ಉತ್ತಮ ಅಂತಿದ್ದಾರೆ. ಜೊತೆಗೆ ಎರಡನೇ ಡೋಸ್‌ನ್ನು ಕೂಡಾ ಮೊದಲಿನ ಡೋಸ್ ತರ ನೀಡಲಿದ್ದು, ಕಾಮನ್ ರಿಯಾಕ್ಷನ್ಸ್ ಅಂದ್ರೆ ಜ್ವರ, ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ನೋವು ಆಗುವುದು ಸೇರಿದಂತೆ ಹಲವು ರಿಯಾಕ್ಷನ್ಸ್ ಆಗಲಿದೆ. ಆದ್ರೆ ಯಾವ್ದಕ್ಕೂ ಭಯ ಪಡೋದು ಬೇಡ ಅಂತ ಸಲಹೆ ನೀಡಿದ್ದಾರೆ.
ಒಟ್ನಲ್ಲಿ ಮೊದಲ ಡೋಸ್ ವ್ಯಾಕ್ಸಿನ್ ಪಡೆದ 28 ದಿನಗಳು ಬಹಳ ಮುಖ್ಯವಾಗಿದ್ದು, ಬಾಡಿಯಲ್ಲಿ ಇಮ್ಯುನಿಟಿ ಡೆವಲಪ್ ಆಗಲು ಸಹಾಕವಾಗಿದೆ. ಇದ್ರ ಮಧ್ಯೆ ಏನಾದ್ರೂ, ಆರೋಗ್ಯದ ಬಗ್ಗೆ ಗಮನ ಹರಿಸದೆ ಇದ್ರೆ ಇಮ್ಯುನಿಟಿ ಬಿಲ್ಡಪ್ ಆಗೋದು ಸಾಧ್ಯವಾಗೋದಿಲ್ಲ.