ಮೋದಿ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸ್ತೇವೆ : ರಾಹುಲ್ ಗಾಂಧಿ
ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಮೂರು ದಿನಗಳ ತಮಿಳುನಾಡು ಪ್ರವಾಸವನ್ನು ಪ್ರಾರಂಭಿಸಲಿದ್ದು. ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಅವರು, ಬಿಜೆಪಿ ಸರ್ಕಾರದ ಆಡಳಿತದ ದಾಳಿಯ ವಿರುದ್ಧ ತಮ್ಮ ಪಕ್ಷದೊಂದಿಗೆ ತಮಿಳುನಾಡು ಹಾಗು ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಹಾಗೂ ಅದನ್ನು ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಮತ್ತೊಮ್ಮೆ ಹಿಂತಿರುಗಲು ನನಗೆ ಸಂತಸವಾಗುತ್ತಿದೆ. ಕೊಂಗು ನಾಡಿನ ನನ್ನ ತಮಿಳು ಸಹೋದರ ಹಾಗೂ ಸಹೋದರಿಯೊಂದಿಗೆ ಸಮಯ ಕಳೆಯಲಿದ್ದೇನೆ. ನಾವೆಲ್ಲರೂ ಒಟ್ಟಾಗಿ, ನರೇಂದ್ರ ಮೋದಿ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸಲಿದ್ದೇವೆ ಎಂದು ಟ್ವಿಟ್ ಮಾಡಿದ್ದಾರೆ.
ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮಿಳುನಾಡು ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು. ಇತ್ತೀಚೆಗಷ್ಟೇ ತಮಿಳರ ಹೊಸ ವರ್ಷ ‘ಪೊಂಗಲ್’ ಹಬ್ಬದ ಪ್ರಯುಕ್ತ ನಡೆದ ‘ಜಲ್ಲಿಕಟ್ಟು’ ಗ್ರಾಮೀಣ ಕ್ರೀಡೆಯಲ್ಲಿ ರಾಹುಲ್ ಅವರು ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಈ ಮೂಲಕ ಒಂದೇ ತಿಂಗಳಲ್ಲಿಯೇ ಎರಡನೇ ಬಾರಿಗೆ ತಮಿಳುನಾಡು ಪ್ರವಾಸ ಕೈಗೊಳ್ಳುತ್ತಿದ್ದಾರೆ.