ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ವರ್ಷ ಅಪಘಾತ ಪ್ರಮಾಣ ಇಳಿಮುಖ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಿಂದಿನ 2 ವರ್ಷಗಳಿಗೆ ಹೋಲಿಕೆ ಮಾಡಿದರೆ, ಕಳೆದ ವರ್ಷ ಅಂದರೆ 2020ರಲ್ಲಿ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಇಳಿಕೆಯಾಗಿದ್ದು, ಅಪಘಾತಗಳ ಸಂಖ್ಯೆ ಕೂಡ ಇಳಿಕೆಯಾಗಿರುವುದು ಕಂಡು ಬಂದಿದೆ.
ನಗರ ಸಂಚಾರ ಪೊಲೀಸರು ಮೂರು ವರ್ಷದ ಅವಧಿಯಲ್ಲಿ ಸಂಭವಿಸಿದ ಅಪಘಾತಗಳ ವಿಮರ್ಶೆ ಎಂಬ ಕಿರುಹೊತ್ತಿಗೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಪೈಕಿ ಪುರುಷರ ಸಂಖ್ಯೆ ಹೆಚ್ಚಾಗಿದ್ದು 21 ವರ್ಷದಿಂದ 40 ವಯಸ್ಸಿನೊಳಗಿನವರು ಅಪಘಾತಕ್ಕೆ ಹೆಚ್ಚು ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
2020ರಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಲಾಕ್ಡೊನ್ ಹಾಗೂ ಕೊರೋನಾ ವೇಳೆ ಬಹುತೇಕ ವಾಹನಗಳು ರಸ್ತೆಗಿಳಿಯದಿರುವುದು ಕಾರಣವೆಂದು ಹೇಳಲಾಗುತ್ತಿದೆ.
ನಗರದಲ್ಲಿ 2018ರಲ್ಲಿ 846, 2019ರಲ್ಲಿ 210 ಹಾಗೂ 2021ರಲ್ಲಿ 632 ಅಪಘಾತ ಪ್ರಕರಣಗಳು ದಾಖಲಾಗಿದೆ. ಇನ್ನು 2018ರಲ್ಲಿ 870 ಮಂದಿ ಅಪಘಾತದಿಂದ ಮೃತಪಟ್ಟರೆ, 2019ರಲ್ಲಿ 832 ಹಾಗೂ 2020ರಲ್ಲಿ 657 ಮಂದಿ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಸ್ವಯಂ ಅಪಘಾತದಿಂದ 2018ರಲ್ಲಿ 178, 2019ರಲ್ಲಿ 144 ಹಾಗೂ 2021ರಲ್ಲಿ 164 ಜನರು ಸಾವನ್ನಪ್ಪಿದ್ದಾರೆ.
ಇನ್ನು ಇತರೆ ವಾಹನಗಳ ಜಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ 2018 ರಲ್ಲಿ 692, 2019ರಲ್ಲಿ 688 ಹಾಗೂ 2020ರಲ್ಲಿ 493 ಮಂದಿ ಸಾವನ್ನಪ್ಪಿದ್ದಾರಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.