ಗುರುಪಾದೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಶಿಕ್ಷಣ ಹೋರಾಟಗಾರ ಎಂ.ಬಿ.ಅಂಬಲಗಿ ಇನ್ನಿಲ್ಲ..!

ಕಲಬುರಗಿ: ಶಿಕ್ಷಣ ತಜ್ಞ, ಹೋರಾಟಗಾರ, ಈಶಾನ್ಯ ವಲಯ ಶಿಕ್ಷಕರ ವೇದಿಕೆಯ ಸ್ಥಾಪಕರು, ಗುರುಪಾದೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಂಬಿ ಅಂಬಲಗಿ ( 57) ಅವರು ಗುರುವಾರ ತಡರಾತ್ರಿ ನಿಧನರಾದರು.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಒಡನಾಡಿಯಾಗಿದ್ದ ಎಂಬಿ ಅಂಬಲಗಿ ಅವರು, ಇತ್ತೀಚೆಗೆ ಈಶಾನ್ಯ ಶಿಕ್ಷಕರ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್‌ನಿಂದ ಟಿಕೆಟ್ ಬಯಸಿದ್ದರು. ಆದರೆ ಜೆಡಿಎಸ್‌ನಲ್ಲಿ ಟಿಕೆಟ್ ನೀಡದೇ ಇದ್ದರಿಂದ ಜೆಡಿಎಸ್ ನಂಟು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿ ಅಪಾರ ಬಂಧು ಬಳಗವನ್ನುಅಗಲಿರುವ ಅಂಬಲಗಿ ಅವರ, ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪಾರ್ಥೀವ ಶರೀರದ ಅಂತಿಮ ದರ್ಶನ ಇಂದು ಬೆಳಗ್ಗೆ 11 ಗಂಟೆವರೆಗೆ ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ಅವರ ಮನೆಯಲ್ಲಿ ಇಡಲಾಗುವುದು ಎಂದು ತಿಳಿದುಬಂದಿದೆ

ಸರಕಾರಿ ಕಾಲೇಜು ಉಪನ್ಯಾಸಕರಾಗಿದ್ದ ಅಂಬಲಗಿ, ಬಳಿಕ ನೌಕರಿಗೆ ರಾಜೀನಾಮೆ ನೀಡಿ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಗುರುಪಾದೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದರು. ಶಿಕ್ಷಕರು, ನಿರುದ್ಯೋಗಿ ಯುವಕರ ಬೇಡಿಕೆಗಳ ಹೋರಾಟಕ್ಕೆ ಸದಾ ಕಾಲ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಇದೀಗ ಅಪಾರ ಬಂಧುಬಳಗವನ್ನು ಅಗಲಿರುವ ಅಂಬಲಗಿ ಅವರ ಅಭಿಮಾನಿಗಳು,ಕುಟುಂಬಸ್ಥರು ಶೋಕತಪ್ತರಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *