ಟಾಲಿವುಡ್ನಲ್ಲಿ ರಾಬರ್ಟ್ ರಿಲೀಸ್ಗೆ ಗ್ರೀನ್ ಸಿಗ್ನಲ್..! 400 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ರಾಬರ್ಟ್ ತೆಲುಗು ಚಿತ್ರ
ಇತ್ತೀಚೆಗೆ ನಮ್ಮ ಕನ್ನಡ ಸಿನಿಮಾಗಳು ಪರಭಾಷೆಯಲ್ಲೂ ಹೆಚ್ಚು ಸೌಂಡ್ ಮಾಡುತ್ತಿವೆ. ಏಕಕಾಲಕ್ಕೆ ಕನ್ನಡ ತೆಲುಗು, ಪ್ಯಾನ್ ಇಂಡಿಯನ್ ಲೆವೆಲ್ನಲ್ಲಿ ಬಿಡುಗೆಯಾಗುತ್ತಿವೆ. ಅದೇ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಕೂಡ ಮಾರ್ಚ್ 11ರಂದು ಟಾಲಿವುಡ್ನಲ್ಲೂ ತೆರೆಕಾಣೋಕ್ಕೆ ಸಿದ್ದವಾಗಿತ್ತು. ಆದರೆ, ಈ ಮಧ್ಯೆ ಟಾಲಿವುಡ್ ರಾಬರ್ಟ್ಗೆ ಕಿರಿಕ್ ಮಾಡಿದ್ದು ಗೊತ್ತೇಯಿದೆ. ಹಾಗಾದ್ರೆ ನಿನ್ನೆ ನಡೆದ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ನಲ್ಲಿ ಏನ್ ನಿರ್ಧಾರ ಆಯ್ತು(?) ಇಲ್ಲಿದೆ ಉತ್ತರ.
ಸ್ಯಾಂಡಲ್ವುಡ್ ಸಿನಿಮಾಗಳು ಇತ್ತೀಚೆಗೆ ಪರಭಾಷೆಗಳಲ್ಲೂ ಹೆಚ್ಚು ಸುದ್ದಿ ಮಾಡುತ್ತಿವೆ. ಕನ್ನಡ ಚಿತ್ರರಂಗದ ಮಾರ್ಕೆಟ್ ವಿಸ್ತರಿಸ್ತಾ ಇದೆ. ಕನ್ನಡದಲ್ಲೂ ಹೆಚ್ಚೆಚ್ಚು ಬಿಗ್ ಬಜೆಟ್, ಪ್ಯಾನ್ ಇಂಡಿಯನ್ ಸಿನಿಮಾಗಳು ರೆಡಿಯಾಗುತ್ತಿವೆ. ಇದೇ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಕೂಡ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿತ್ತು. ಮಾರ್ಚ್ 11ರಂದು ಕನ್ನಡ ಮತ್ತು ತೆಲುಗಿನಲ್ಲಿ ರಾಬರ್ಟ್ ಆರ್ಭಟಕ್ಕೆ ಸಕಲ ಸಿದ್ಧತೆಗಳು ನಡೀತಿರುವಾಗಲೇ ರಾಬರ್ಟ್ ವಿರುದ್ಧ ಕಿರಿಕ್ ಶುರುಮಾಡಿತು ಟಾಲಿವುಡ್. ರಾಬರ್ಟ್ ತೆಲುಗು ಬಿಡುಗಡೆಗೆ ಅಲ್ಲಿನ ವಿತರಕರು ಅಡ್ಡಿ ಮಾಡಿದರು. ತೆಲುಗಿನ ಸಣ್ಣ ಬಜೆಟ್ ಸಿನಿಮಾಗಳ ಬಿಡುಗಡೆ ಇದ್ದರೂ, ಕನ್ನಡದ ಸಿನಿಮಾಗಳನ್ನು ರಿಲಿಸ್ ಮಾಡುವಂತಿಲ್ಲ ಅಂದಿತ್ತು ಟಾಲಿವುಡ್. ತೆಲುಗು ಡಬ್ ವರ್ಷನ್ಗಳಿಗೂ ಟಾಲಿವುಡ್ ಅಡ್ಡಿಪಡಿಸೊಕ್ಕೆ ಶುರುಮಾಡಿದರು. ಇದೆಲ್ಲದರ ವಿರುದ್ಧ ಸ್ವತಃ ದರ್ಶನ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿ ದೂರು ನೀಡಿದ್ದು ಗೊತ್ತೇಯಿದೆ.
ರಾಬರ್ಟ್ ಚಿತ್ರತಂಡದ ಜೊತೆ ಮಾತುಕತೆ ನಡೆಸಿದ ಕರ್ನಾಟಕ ಫಿಲ್ಮ್ ಚೇಂಬರ್, ಈ ವಿಚಾರವನ್ನ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಮುಂದಿಡೋದಾಗಿ ಹೇಳಿತ್ತು. ಕನಾರ್ಟಕದಲ್ಲಿ ರಾಬರ್ಟ್ ಹವಾ ನೋಡಿ ಟಾಲಿವುಡ್ ಒಂದ್ಕಡೆ ಬೆಚ್ಚಿ ಬಿದ್ದಿದ್ದು. ಕೊನೆಗೆ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ರಾಬರ್ಟ್ ತೆಲುಗು ರಿಲೀಸ್ಗೆ ಅವಕಾಶ ಮಾಡಿಕೊಡಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ರಾಬರ್ಟ್’ ಸಿನಿಮಾದ ತೆಲುಗು ಅವತರಣಿಕೆ ಬಿಡುಗಡೆ ಆಗಲಿದೆ. ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗುವ ದಿನ ತೆಲುಗಿನ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ಇದರ ಮಧ್ಯೆಯೇ ತೆಲುಗು ನೆಲದಲ್ಲಿ ರಾಬರ್ಟ್ ಘರ್ಜನೆ ಶುರುಮಾಡಲಿದೆ. ವಿಶೇಷ ಅಂದ್ರೆ ‘ರಾಬರ್ಟ್’ ಸಿನಿಮಾದ ತೆಲುಗು ಡಬ್ ಸಿನಿಮಾದಲ್ಲಿ ಸ್ವತಃ ದರ್ಶನ್ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇನ್ನು ಚಿತ್ರಕ್ಕೆ ತರುಣ್ ಸುದೀರ್ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಶ್ರೀನಿವಾಸ್ ಬಂಡವಾಳ ಹಾಕಿದ್ದಾರೆ. ಸದ್ಯ ಸ್ಯಾಂಡಲ್ವುಡ್ ಸಿನಿಮಾಗಳು, ಪರಭಾಷೆಯಲ್ಲೂ ಘರ್ಜನೆ ಮಾಡುತ್ತಿರೋದು ಉತ್ತಮ ಬೆಳೆವಣಿಗೆಯಾಗಿದೆ.