ಮಾಸಿಕ ವೇತನ ಪಡೆಯುವವರೇ ಗಮನಿಸಿ: ಬಜೆಟ್‌ನಿಂದ ಇವೆಲ್ಲಾ ಬದಲಾವಣೆಯಾಗಲಿದೆ

ಹೈಲೈಟ್ಸ್‌:

  • ಭವಿಷ್ಯ ನಿಧಿ ಕೊಡುಗೆ ಮೇಲೂ ತೆರಿಗೆ
  • ಗೃಹ ಸಾಲ ಬಡ್ಡಿ ಇನ್ನೊಂದು ವರ್ಷ ಮನ್ನಾ
  • ಸ್ವಯಂ ಚಾಲಿತ ತೆರಿಗೆ ರಿಟರ್ನ್‌ ಸೌಲಭ್ಯ

ನವದೆಹಲಿ: ಕೊರೊನಾದಿಂದ ತತ್ತರಿಸಿ ಹೋಗಿದ್ದ ಜನರಿಗೆ ಕೇಂದ್ರ ಸರ್ಕಾದರ ಬಜೆಟ್‌ ಮೇಲೆ ಭಾರೀ ನಿರೀಕ್ಷೆ ಇತ್ತು. ಅದರಲ್ಲೂ, ಬಡವರು ಹಾಗೂ ಮಧ್ಯಮ ವರ್ಗದವರು ಆಸೆಗಣ್ಣನಿಂದ ಬಜೆಟ್ ಅನ್ನು ಎದುದು ನೋಡುತ್ತಿದ್ದರು. ಕೊರೊನಾದಿಂದಾಗಿ ಆದಾಯ ಖೋತ ಉಂಟಾಗಿದ್ದರಿಂದ ಈ ಬಾರಿಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಮಧ್ಯಮ ವರ್ಗದ ಮಂದಿ ಇದ್ದರು. ಆದರೆ ಅದು ಆಗಿಲ್ಲ.

 

ಬಜೆಟ್‌ನಲ್ಲಿ ಘೋಷಣೆಯಾಗಿರುವ ಕೆಲ ನೀತಿಗಳಿಂದ ಮಾಸಿಕ ಸಂಬಳ ಪಡೆಯವ ತೆರಿಗೆ ಪಾವತಿದಾರರ ಮೇಲೆ ಪರಿಣಾಮ ಬೀರಲಿದೆ. ಅವುಗಳಲ್ಲಿ ಪ್ರಮುಖವಾದುದ್ದು ಹೀಗಿದೆ.

ಭವಿಷ್ಯ ನಿಧಿ (ಪಿಎಫ್‌) ಮೇಲಿನ ಕೊಡುಗೆ

ಭವಿಷ್ಯ ನಿಧಿಗೆ ನೌಕರರು ನೀಡುವ ಕೊಡುಗೆಗೆ ವಾರ್ಷಿಕವಾಗಿ ಎರಡೂವರೆ ಲಕ್ಷಕ್ಕಿಂತ ಹೆಚ್ಚು ಬಡ್ಡಿ ಬಂದರೆ, ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದು ಏಪ್ರಿಲ್‌ನಿಂದ ಜಾರಿಗೆ ಬರಲಿದೆ.

ಸ್ವಯಂ ಚಾಲಿತ ಆದಾಯ ತೆರಿಗೆ ರಿಟರ್ನ್‌

ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ವಯಂ ಚಾಲಿತವಾಗಿ ರಿಟರ್ನ್‌ ಫೈಲ್‌ ಆಗಿದೆ. ಸಂಬಳ, ಟಿಡಿಎಸ್‌, ಬಂಡವಾಳ ಹೂಡಿಕೆಯಿಂದ ಬಂದ ಲಾಭ, ಡಿವಿಡೆಂಡ್, ಬ್ಯಾಂಕ್‌ ಠೇವಣಿಯ ಬಡ್ಡಿ, ಅಂಚೆ ಕಚೇರಿ ಠೇವಣಿಯ ಬಡ್ಡಿ ಮುಂತಾದವುಗಳು ಸ್ವಯಂ ಚಾಲಿತವಾಗಿ ಟ್ಯಾಕ್ಸ್‌ ರಿಟರ್ನ್‌ ಫೈಲ್‌ನಲ್ಲಿ ದಾಖಲಾಗಲಿವೆ.

ಗೃಹ ಸಾಲ ಬಡ್ಡಿ ಮನ್ನಾ

ಗೃಹ ಸಾಲದ ಮೇಲೆ ಪಾವತಿ ಮಾಡಿದ ಬಡ್ಡಿ ಮನ್ನಾ ಇನ್ನೊಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. 1.5 ಲಕ್ಷದ ವರೆಗೆ ಬಡ್ಡಿ ಮನ್ನಾದ ಅನುಕೂಲ ಪಡೆಯಬಹುದು. ಮಾರ್ಚ್‌ 2020 ರ ವರೆಗೆ ಇದು ಅನ್ವಯವಾಗಲಿದೆ. ಎಲ್ಲರಿಗೂ ಸೂರು ಸಿಗಬೇಕು ಎನ್ನುವ ಉದ್ದೇಶದಿಂದ ಈ ರಿಯಾಯಿತಿ ಘೋಷಣೆ ಮಾಡಲಾಗಿದೆ.‌

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *