ರಾಜ್ಯ ರಾಜಧಾನಿಯಲ್ಲಿ ಮೂರು ದಿನ ಏರ್ ಶೋ…! ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ..!

2021ನೇ ಸಾಲಿನ 13ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದಾರೆ. ಏರೋ ಇಂಡಿಯಾ-2021 ಉದ್ಘಾಟನಾ ಸಮಾರಂಭದಲ್ಲಿ ಐಎಎಫ್ ಹೆಲಿಕಾಪ್ಟರ್ ಗಳು ಹಾಗೂ ರಫೇಲ್ ಹಾರಾಡಿ, ಕಣ್ಮನ ಸೆಳೆಯದವು.


ಏರೋ ಇಂಡಿಯಾ – 2021 ವೈಮಾನಿಕ ಪ್ರದರ್ಶನದ 13ನೇ ಆವೃತ್ತಿ ಉದ್ಘಾಟನೆಗೊಂಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸುತ್ತಿದ್ದಂತೆ ಬಾನಂಗಳದಲ್ಲಿ ರಾಷ್ಟ್ರಧ್ವಜ, ಭಾರತೀಯ ವಾಯುಪಡೆಯ ಧ್ವಜ ಹಾಗೂ ಏರೋ ಇಂಡಿಯ-2021ರ ಬಾವುಟಗಳನ್ನು ಹೊತ್ತು ಮೂರು ಎಂಐ-17 ಹೆಲಿಕಾಪ್ಟರ್ ಗಳು ನೀಲಾಂಬರದಲ್ಲಿ ಸಾಗಿಬರುವ ಮೂಲಕ, ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆರಂಭಗೊಂಡಿತು.

ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಆರಂಭಗೊಂಡಿರುವಂತ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನ ಲೋಹದ ಹಕ್ಕಿಗಳು ಬಾನಂಗಳದಲ್ಲಿ ತಮ್ಮ ಚಮತ್ಕಾರ ಪ್ರದರ್ಶಿಸಲಿವೆ. ಅಂದಹಾಗೇ ಈ ಬಾರಿ ವಾಯುಪಡೆಯ ‘ಸೂರ್ಯಕಿರಣ್‌’ ಹಾಗೂ ‘ಸಾರಂಗ್‌’ ತಂಡಗಳು ಜಂಟಿ ಪ್ರದರ್ಶನ ನೀಡಲಿರುವುದು ಹಾಗೂ ಅಮೆರಿಕದ ಬಿ 1ಐಬಿ ಲ್ಯಾನ್ಸರ್‌ ಸೂಪರ್‌ಸಾನಿಕ್‌ ಬಾಂಬರ್‌ ವಿಮಾನ ಈ ಬಾರಿಯ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುಗಳಾಗಿವೆ.

ಏರೋ ಇಂಡಿಯಾ ಆ್ಯಪ್​ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ವರ್ಚುವಲ್ ಪ್ರದರ್ಶನವನ್ನು ವೀಕ್ಷಿಸಬಹುದು. ಇದೇ ಆ್ಯಪ್ ನಲ್ಲಿ ಪ್ರದರ್ಶನದ ಮೂರು ದಿನಗಳ ಎಲ್ಲಾ ಚಟುವಟಿಕೆಗಳು ಲಭ್ಯವಿರಲಿವೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *