ಸಣ್ಣ ಕಥೆಗಾರ ಶ್ರೀಕಂಠ ಪುತ್ತೂರು ಇನ್ನಿಲ್ಲ
ಹೈಲೈಟ್ಸ್:
- ಸಣ್ಣ ಕಥೆಗಾರ ಶ್ರೀಕಂಠ ಪುತ್ತೂರು ನಿಧನ
- 500ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ಬರೆದಿದ್ದಾರೆ
- ಗುರುವಾರ ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾರೆ
- ಇವರಿಗೆ 93 ವರ್ಷ ಪ್ರಾಯವಾಗಿತ್ತು
- ಮೃತರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.
ಉಡುಪಿ: ಸಣ್ಣ ಕಥೆಗಾರ, ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಶ್ರೀಕಂಠ ಪುತ್ತೂರು(93) ಅಜ್ಜರಕಾಡಿನ ನಿವಾಸದಲ್ಲಿ ಗುರುವಾರ ನಿಧನರಾದರು.
ಮೂಲತಃ ಕುಂಬ್ಳೆ ನೀರ್ಚಾಲಿನ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿಕ್ಷಣ ಪಡೆದಿದ್ದು ಇವರ 500ಕ್ಕೂ ಹೆಚ್ಚು ಸಣ್ಣ ಕಥೆಗಳು ತುಷಾರ, ಮಯೂರ ಸಹಿತ ವಾರಪತ್ರಿಕೆ, ಮಾಸಿಕ, ದೈನಿಕಗಳಲ್ಲಿ ಪ್ರಕಟವಾಗಿವೆ. ಅನುವಾದ ಸಾಹಿತ್ಯದಲ್ಲೂ ಕೂಡಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗೀಯ ಕಚೇರಿಯಲ್ಲಿ ಪ್ರಚಾರ ಅಧಿಕಾರಿಯಾಗಿ ಸೇರಿ ನಿವೃತ್ತಿ ಬಳಿಕ ಮಣಿಪಾಲ ಫೈನಾನ್ಸ್ ನಲ್ಲಿ ಕೆಲ ಕಾಲ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.