ದೈನಂದಿನ ರಾಶಿ ಭವಿಷ್ಯ 06/02/2021
ಶಾರ್ವರಿನಾಮ ಸಂವತ್ಸರ
ಉತ್ತರಾಯಣ
ಹೇಮಂತ ಋತು
ಪುಷ್ಯ ಮಾಸ
ಕೃಷ್ಣ ಪಕ್ಷ
ನವಮಿ ತಿಥಿ
ಅನುರಾಧಾ ನಕ್ಷತ್ರ
ಶನಿವಾರ
06/02/2021
ಸೂರ್ಯೋದಯ ಬೆಳಗ್ಗೆ 06:45
ಸೂರ್ಯಾಸ್ತ ಸಂಜೆ 06:23
ರಾಹುಕಾಲ : 09:52 ರಿಂದ 11:13
ಗುಳಿಕಕಾಲ: 07:10 ರಿಂದ 08:31
ಯಮಗಂಡಕಾಲ: 13:56 ರಿಂದ 15:17
ಅಮೃತ ಘಳಿಗೆ : 07:24 ರಿಂದ 08:55
ಮೇಷ ರಾಶಿ
ದೂರ ಪ್ರಯಾಣ ಮಾಡಬೇಕಿದ್ದರೆ ಅನಿವಾರ್ಯ ಅಲ್ಲ ಎಂದಾದಲ್ಲಿ ಮುಂದೂಡಿ. ನಂಬಿಕಸ್ತರನ್ನು ಬಿಟ್ಟು ವ್ಯವಹಾರ ಮಾಡಬೇಡಿ. ಖರ್ಚಿನ ಪ್ರಮಾಣ ಜಾಸ್ತಿ ಆಗಬಹುದು. ಅಂದುಕೊಳ್ಳದ ರೀತಿಯಲ್ಲಿ ನಾನಾ ಅಡೆ- ತಡೆಗಳು ಎದುರಾಗಿ, ಕೆಲಸ- ಕಾರ್ಯಗಳು ವಿಳಂಬ ಆಗುವ ಯೋಗ ಇದೆ. ವ್ಯಾಪಾರ ವ್ಯವಹಾರಗಳಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುವ ಯೋಗವಿದೆ, ಪೂರ್ವಾಪರ ಆಲೋಚಿಸಿ ವ್ಯವಹರಿಸಿ.
ವೃಷಭ ರಾಶಿ
ಔತಣಕೂಟದಲ್ಲಿ ಪಾಲ್ಗೊಳ್ಳುವ ಯೋಗ ಇದೆ. ನಿಮ್ಮ ಸಹಾಯದ ಬುದ್ಧಿಗೆ ಇತರರು ಮೆಚ್ಚುಗೆ ಸೂಚಿಸಲಿದ್ದಾರೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಹೊಸ ವಸ್ತ್ರಾಭರಣ ಖರೀದಿ ಮಾಡುವ ಯೋಗ ಇದೆ. ಈ ದಿನ ಮರೆವು ನಿಮ್ಮನ್ನು ಕಾಡಲಿದೆ. ಅಂದುಕೊಂಡಂತೆ ಕೆಲಸಗಳನ್ನು ಮುಗಿಸುವುದಕ್ಕೆ ಬಹಳ ಕಷ್ಟ ಪಡಬೇಕಾಗುತ್ತದೆ.
ಮಿಥುನ ರಾಶಿ
ಮುಖ್ಯ ದಾಖಲೆ- ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ನಿಮ್ಮನ್ನು ಬೇಕೆಂತಲೇ ವಿವಾದಕ್ಕೆ ಸಿಲುಕಿಸಲು ಕೆಲವರು ಪ್ರಯತ್ನ ಪಡಲಿದ್ದಾರೆ. ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಗೊಂದಲದ ಸ್ಥಿತಿ ಎದುರಾಗಬಹುದು. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಸೈಟು- ಮನೆ ಖರೀದಿ ವ್ಯವಹಾರಗಳು ಕೆಲ ಕಾಲ ಮುಂದಕ್ಕೆ ಹಾಕಬೇಕಾದಂಥ ಸ್ಥಿತಿ ಉದ್ಭವಿಸಬಹುದು.
ಕರ್ಕಾಟಕ ರಾಶಿ
ಅತ್ಯಂತ ಉತ್ಸಾಹದಿಂದ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ನಿಮ್ಮ ಧೈರ್ಯವನ್ನು ಕುಂದಿಸಲು ಕೆಲವರು ಪ್ರಯತ್ನ ಮಾಡಬಹುದು. ಆದರೆ ಅದರಲ್ಲಿ ಸಫಲರಾಗುವುದಿಲ್ಲ. ಅಗತ್ಯ ಇದೆಯೋ ಇಲ್ಲವೋ ಸಾಲ ಮಾಡುವಂತಾಗಬಹುದು. ಆದ್ದರಿಂದ ಖರ್ಚು ವೆಚ್ಚಗಳಲ್ಲಿ ಎಚ್ಚರಿಕೆಯಿಂದ ಇರಬೇಕು.
ಸಿಂಹ ರಾಶಿ
ಅತ್ಯಂತ ಉತ್ಸಾಹದಿಂದ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸಲಿದ್ದೀರಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳು ದೊರೆಯಲಿವೆ. ನಿಮ್ಮ ಧೈರ್ಯವನ್ನು ಕುಂದಿಸಲು ಕೆಲವರು ಪ್ರಯತ್ನ ಮಾಡಬಹುದು. ಆದರೆ ಅದರಲ್ಲಿ ಸಫಲರಾಗುವುದಿಲ್ಲ. ಕುಟುಂಬ ಸಮೇತರಾಗಿ ಕಿರು ಪ್ರವಾಸಕ್ಕೆ ತೆರಳುವ ಯೋಗ ಇದೆ. ವಾಣಿಜ್ಯ ಉದ್ದಿಮೆದಾರರಿಗೆ ಅಲ್ಪ ಹಿನ್ನಡೆ ಉಂಟಾಗಬಹುದು.
ಕನ್ಯಾ ರಾಶಿ
ದೇವತಾರಾಧನೆ, ಧಾರ್ಮಿಕ ಚಿಂತನೆ ಕಡೆಗೆ ಮನಸ್ಸು ಸೆಳೆಯಲಿದೆ. ಈ ಹಿಂದೆ ನೀವು ಮಾಡಿದ ಕೆಲವು ಉದಾತ್ತ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಮೌನವಾಗಿದ್ದುಕೊಂಡೇ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳಲಿದ್ದೀರಿ. ಸರ್ಕಾರಿ ಕೆಲಸಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಇರುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸುವ ಸಾಧ್ಯತೆ ಇದೆ.
ತುಲಾ ರಾಶಿ
ಇತರರ ಕಷ್ಟಕ್ಕೆ ಮರುಗಿ ಸಹಾಯ ಮಾಡಲಿದ್ದೀರಿ. ಸಮಾಜದಲ್ಲಿ ನಿಮ್ಮ ಸ್ಥಾನ- ಮಾನ ಹೆಚ್ಚಾಗಲಿದೆ. ಸವಾಲುಗಳನ್ನು ನೀವು ಎದುರಿಸುವ ರೀತಿ, ತೆಗೆದುಕೊಳ್ಳುವ ನಿರ್ಧಾರಗಳನ್ನು ಇತರರು ಮೆಚ್ಚುತ್ತಾರೆ. ಸಂಬಂಧಿಕರ ವರ್ತನೆಯಿಂದ ನಿಮ್ಮ ಹೆಸರು ಕೆಡುವ ಸಾಧ್ಯತೆ ಇದೆ. ನೀವು ಈ ಹಿಂದೆ ಆಡಿದ್ದ ಮಾತು ಸಮಸ್ಯೆಯಾಗಿ ಪರಿಣಮಿಸಲಿದೆ. ದೊರೆಯಬೇಕಾದ ಸ್ಥಾನ, ಹುದ್ದೆಗೆ ಕೆಲವರು ಸಮಸ್ಯೆ ಮಾಡುವ ಸಾಧ್ಯತೆ ಇದೆ. ಆ ಬಗ್ಗೆ ಗಮನ ಇರಲಿ.🦜
ವೃಶ್ಚಿಕ ರಾಶಿ
ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಲಿದೆ. ಆಹಾರ ಪಥ್ಯದ ವಿಚಾರದ ಕಡೆಗೂ ಗಮನ ನೀಡಲಿದ್ದೀರಿ. ಆದರೆ ಸರ್ಕಾರಿ ಕೆಲಸ- ಕಾರ್ಯಗಳು ಇದ್ದಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆಗಬಹುದು. ಉಳಿದಂತೆ ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಪ್ರಗತಿ ಇದೆ. ಮನೆಗೆ ಸಾಲ ಮಾಡಿಯಾದರೂ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಯೋಗವಿದೆ. ಆಪ್ತರ ನೆರವಿನಿಂದ ಕೆಲವು ಸಮಸ್ಯೆಗಳು ಬಗೆಹರಿಯಲಿವೆ.
ಧನುಸ್ಸು ರಾಶಿ
ಬೇರೆಯವರ ಮನೆಯ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ. ನಿಮ್ಮ ಉದ್ದೇಶ ಏನೇ ಆಗಿರಬಹುದು. ವಿನಾಕಾರಣ ಕೆಟ್ಟ ಹೆಸರು ಪಡೆಯಬೇಕಾಗುತ್ತದೆ. ಹಣಕಾಸಿನ ಹರಿವಿನಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು. ಹೊಸ ಆದಾಯ ಮೂಲಕ್ಕೆ ದಾರಿ ಗೋಚರಿಸಲಿದೆ. ಸಂಗಾತಿ ಮಕ್ಕಳ ಸಂತೋಷಕ್ಕಾಗಿ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ ಅಥವಾ ಮನೆಗೆ ಅಲಂಕಾರಿಕ ವಸ್ತುಗಳನ್ನು ತರಬಹುದು. ಅನುಭವಿಗಳ ಮಾತುಗಳನ್ನು ಅನುಸರಿಸಿದಲ್ಲಿ.
ಮಕರ ರಾಶಿ
ಕೆಲಸದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ಸ್ವಲ್ಪ ಉದ್ವೇಗ ತರಬಹುದು. ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತಿದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನೀವು ಮನೆಯಲ್ಲಿ ಸೂಕ್ಷ್ಮ ಸಮಸ್ಯೆಯನ್ನು ಬಗೆಹರಿಸಲು ನಿಮ್ಮ ಬುದ್ಧಿವಂತಿಕೆ ಮತ್ತು ಪ್ರಭಾವವನ್ನು ಬಳಸಬೇಕಾಗುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮಂತೆಯೇ ಮನೋಭಾವ ಹೊಂದಿರುವ ಸ್ನೇಹಿತರ ಸಹಾಯ ತೆಗೆದುಕೊಳ್ಳಿ.🦜
ಕುಂಭ ರಾಶಿ
ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ಇಂದು ನೀವು ಯಾವುದೇ ಅಜ್ಞಾತ ಮೂಲಗಳಿಂದ ಹಣವನ್ನು ಪಡೆಯಬಹುದು, ಇದರಿಂದ ನಿಮ್ಮ ಅನೇಕ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಒಬ್ಬರು ಇನ್ನೊಬ್ಬರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಮೂಲಕ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿ. ಅವುಗಳನ್ನು ಸಾರ್ವಜನಿಕಗೊಳಿಸಿದರೆ ನಿಮಗೆ ಅಪಖ್ಯಾತಿ ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಮೀನ ರಾಶಿ
ನೀವು ಕೆಲವು ಉನ್ನತ ವ್ಯಕ್ತಿಗಳನ್ನು ಭೇಟಿಯಾಗಬಹುದಾದ್ದರಿಂದ ಗಾಬರಿಯಾಗಬೇಡಿ ಮತ್ತು ವಿಶ್ವಾಸ ಕಳೆದುಕೊಳ್ಳದಿರಿ. ಇದು ವ್ಯಾಪಾರಕ್ಕೆ ಬಂಡವಾಳದಂತೆ ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿದೆ. ನೀವು ನಿಮ್ಮ ಕಳೆದ ಸಮಯದಲ್ಲಿ ಬಹಳಷ್ಟು ಹಣವನ್ನು ಖರ್ಚುಮಾಡಿದ್ದಿರಿ ಇದರ ತೊಂದರೆ ನೀವು ಇಂದು ಅನುಭವಿಸಬೇಕಾಗಬಹುದು. ನಿಮಗೆ ಹಣದ ಅಗತ್ಯವಿರಬಹುದು ಆದರೆ ಅದು ನಿಮಗೆ ದೊರೆಯುವುದಿಲ್ಲ.