Asteroid | ಫೆ. 22ಕ್ಕೆ ಭೂಮಿಯನ್ನು ಸಮೀಪಿಸಲಿದೆ ಬೃಹತ್ ಕ್ಷುದ್ರ ಗ್ರಹ!
ಕಳೆದ ವರ್ಷ ಭೂಮಿಯ ಸುತ್ತಮುತ್ತ ಹಲವು ವಸ್ತುಗಳು ಹಾದುಹೋಗುತ್ತವೆ ಎಂದು ವರದಿಗಳು ಬಂದಿತ್ತು. ಇದೇ ರೀತಿ ಈ ವರ್ಷ, ಫೆಬ್ರವರಿ 22ರಂದು ಕ್ಷುದ್ರಗ್ರಹವು ಭೂಮಿಯನ್ನು ಸಮೀಪಿಸುತ್ತಿದೆ ಎಂಬ ವರದಿ ಬಂದಿದೆ. 93 ಮೀಟರ್ ಎತ್ತರ ಹೊಂದಿರುವ ಅಮೆರಿಕದ ಸ್ವಾತಂತ್ರ್ಯದ ಪ್ರತಿಮೆಗಿಂತ (Statue of Liberty ) ಎರಡು ಪಟ್ಟು ಮೇಲೆ ಈ ಕ್ಷುದ್ರಗ್ರಹ ಪ್ರದಕ್ಷಿಣೆ ಮಾಡಲಿದೆ.
ಸೌರ ಮಂಡಲ ಸುತ್ತುತ್ತಿರುವ ಈ ಕ್ಷುದ್ರಗ್ರಹವು ಒಂದು ಗಂಟೆಗೆ 30,240 ಕಿ. ಮೀ ವೇಗದಲ್ಲಿ ಚಲಿಸಬಲ್ಲದು. ಇದು 213 ಮೀಟರ್ ಉದ್ದವನ್ನು ಹೊಂದಿದ್ದು, ಒಂದು ಗಂಟೆಯಲ್ಲಿ ಇಡೀ ಭೂಮಿಯ ಸುತ್ತ ಸಂಚರಿಸಬಹುದಾಗಿದೆ ಎಂದು ಹೇಳಲಾಗಿದೆ. 2020 XU6 ಎಂಬ ಹೆಸರಿನ ಈ ಕ್ಷುದ್ರಗ್ರಹ ಫೆ. 22ರಂದು ಭೂಮಿಯ ಸನಿಹ ಬರಲಿದೆ ಎಂದು ಡೈಲಿ ಎಕ್ಸ್ಪ್ರೆಸ್ ವರದಿ ಮಾಡಿದೆ.
Near Earth Object ಎಂದ ನಾಸಾ:
2020 XU6 ಹೆಸರಿನ ಕ್ಷುದ್ರಗ್ರಹವನ್ನು ನಾಸಾ ಭೂಮಿಯ ಹತ್ತಿರದ ವಸ್ತು (Near Earth Object) ಎಂದು ಬಣ್ಣಿಸಿದೆ. ಅಲ್ಲದೇ ಈ ಕ್ಷುದ್ರಗ್ರಹ ಅಪಾಯಕಾರಿಯಾಗಿದ್ದು, ಆದರೂ, ಇದು ಭೂಮಿಗೆ ಅಪ್ಪಳಿಸುವುದಿಲ್ಲ ಎಂದಿದೆ.
ಕ್ಷುದ್ರಗ್ರಹಗಳು ಅವು ಹತ್ತಿರದ ಗ್ರಹಗಳ ಗುರುತ್ವಾಕರ್ಷಣೆಯಿಂದ ಕಕ್ಷೆಗಳಾಗಿ ಭೂಮಿಯ ನೆರೆಹೊರೆಗೆ ಪ್ರವೇಶಿಸಲು ಸಹಾಯ ಮಾಡುತ್ತವೆ ಎಂದು ನಾಸಾ ತನ್ನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ವೆಬ್‌ಸೈಟ್‌ನಲ್ಲಿ ಹೇಳಿದೆ. ಕ್ಷುದ್ರಗ್ರಹವು ಅವು ಹತ್ತಿರದ ಗ್ರಹಗಳ ಗುರುತ್ವಾಕರ್ಷಣೆಯಿಂದ ಕಕ್ಷೆಗಳಿಗೆ ನುಗ್ಗಿ ಭೂಮಿಯ ನೆರೆಹೊರೆಯೊಳಗೆ ಪ್ರವೇಶಿಸಲು ಸಹಾಯ ಮಾಡಿಕೊಡುತ್ತದೆ.
“ಶತಕೋಟಿ ಧೂಮಕೇತುಗಳ ಒಟ್ಟುಗೂಡಿಸುವಿಕೆಯಿಂದ ರೂಪುಗೊಂಡ ದೈತ್ಯ ಹೊರ ಗ್ರಹಗಳು (ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್) ಈ ರಚನೆಯ ಪ್ರಕ್ರಿಯೆಯಿಂದ ಉಳಿದಿರುವ ತುಣುಕುಗಳು ಇಂದು ನಾವು ನೋಡುವ ಧೂಮಕೇತುಗಳಾಗಿವೆ ಎಂದು ನಾಸಾ ತಿಳಿಸಿದೆ.
ಕ್ಷುದ್ರಗ್ರಹಗಳ ಬಗ್ಗೆ ಮಾಹಿತಿ:ಕ್ಷುದ್ರಗ್ರಹವು ಸೌರಮಂಡಲವು ಜನಿಸಿದಾಗ ಸಂಪೂರ್ಣವಾಗಿ ವಿಕಸನಗೊಳ್ಳದ ಒಂದು ಸಣ್ಣ ಗ್ರಹವಾಗಿರುತ್ತದೆ. ಸೂರ್ಯನ ಸುತ್ತ ಪರಿಭ್ರಮಿಸುವ ಲಕ್ಷಾಂತರ ಕ್ಷುದ್ರಗ್ರಹಗಳು ಅಸ್ತಿತ್ವದಲ್ಲಿವೆ. ಆದರೆ ಹೆಚ್ಚಿನವು ಮಂಗಳ ಮತ್ತು ಗುರುಗಳ ಕಕ್ಷೆಗಳ ನಡುವಿನ ಪ್ರದೇಶವಾದ ಮುಖ್ಯ ಕ್ಷುದ್ರಗ್ರಹ ಪಟ್ಟಿಯಲ್ಲಿದೆ. ಆ ಕ್ಷುದ್ರಗ್ರಹಗಳು ಒಂದೇ ರೀತಿಯ ಗಾತ್ರ ಮತ್ತು ಆಕಾರವನ್ನು ಹೊಂದಿರುವುದಿಲ್ಲ. ಏಕೆಂದರೆ ಅವು ಸೂರ್ಯನಿಂದ ಬೇರೆ ಸ್ಥಳಗಳಲ್ಲಿ ರೂಪುಗೊಳ್ಳುತ್ತವೆ.