ಮುನ್ನೂರು ಕೋಟಿ ದಂಡ ವಸೂಲಿಗೆ ಪೊಲೀಸರ ಪ್ಲಾನ್..! ಇನ್ಮುಂದೆ ಮನೆ ಮನೆಗೆ ಬರ್ತಾರೆ ಟ್ರಾಫಿಕ್ ಪೊಲೀಸರು..!
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಅರಾಮಾಗಿ ಇರೋರಿಗೆ ಪೊಲೀಸರು ಶಾಕ್ ಕೊಡಲು ಮುಂದಾಗಿದ್ದಾರೆ. ಬೆಳಿಗ್ಗೆ ಎದ್ದು ಸೂರ್ಯನ ಮುಖ ನೋಡೊ ಬದಲು ಇನ್ಮುಂದೆ ಪೊಲೀಸರ ಮುಖ ನೋಡ್ಬೇಕಾಗುತ್ತೆ. ಯಾಕೆ ಗೊತ್ತಾ ಸ್ಟೋರಿ ಓದಿ…!.
ಟ್ರಾಫಿಕ್ ಪೊಲೀಸರ ಕಣ್ಣು ತಪ್ಪಿಸಿದ್ರೂ ಅವ್ರ ಕೈಯಲ್ಲಿರೋ ಕ್ಯಾಮಾರ, ಸಿಸಿ ಕ್ಯಾಮರಾ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ ಕೇಸ್ ಹಾಕಿಸಿಕೊಂಡ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸಲಿದ್ದಾರೆ. ಈಗಾಗಲೆ ಮುನ್ನೂರು ಕೋಟಿ ದಂಡ ವಸೂಲಿ ಬಾಕಿ ಹಿನ್ನಲೆ ಇನ್ಮುಂದೆ ಟ್ರಾಫಿಕ್ ಪೊಲೀಸರು ನಿಮ್ಮ ಮನೆ ಬಾಗಿಲು ಬಡಿಯಲು ರೆಡಿಯಾಗಿದ್ದಾರೆ.ಈಗಾಗಲೆ ಅದಕ್ಕಾಗಿ ಟೀಂ ಕೂಡ ರೆಡಿಯಾಗಿದೆ.
ದಂಡ ವಸೂಲಿಗೆ ಪ್ಲಾನ್ ಮಾಡಿರೋ ಪೊಲೀಸರು ಟೀಂ ರೆಡಿ ಮಾಡ್ಕೊಂಡು ಸನ್ನದ್ದರಾಗಿದ್ದಾರೆ. ಒಟ್ಟು ಬೆಂಗಳೂರಿನ 44 ಟ್ರಾಫಿಕ್ ಪೊಲೀಸ್ ಠಾಣೆಯ ಎಸ್ ಐ, ಎ ಎಸ್ ಐ ಗಳಿಗೆ ದಂಡ ವಸೂಲಿಗೆ ಸೂಚಿಸಲಾಗಿದೆ. ಠಾಣೆಯ ಕಾನ್ಸ್‌ಟೇಬಲ್ ಗಳು ಕೇಸ್ ಇರೋ ಮನೆಯನ್ನು ಗುರುತಿಸಿ ತಿಳಿಸಬೇಕು. ಎಸ್ ಐ, ಎ ಎಸ್ ಐ ಗಳು ಅವರ ಮನೆಗೆ ತೆರಳಿ ದಂಡವನ್ನು ವಸೂಲಿ ಮಾಡಲಾಗ್ತಿದೆ. ಎಲ್ಲಾ ಎಸ್ ಐ, ಎ ಎಸ್ ಐ ಗಳಿಗೂ ಎರಿಯಾಗಳನ್ನು ಕೊಟ್ಟು ಆ ಏರಿಯದಲ್ಲಿ ಅವ್ರು ಕರ್ಯಾ ನಿರ್ವಹಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಈಗಾಗಲೆ ಮನೆ ಮನೆ ದಂಡ ವಸೂಲಿ ಕಾರ್ಯಾ ಶುರುವಾಗಿದ್ದು ಹಲವರು ದಂಡ ಪಾವತಿ ಮಾಡ್ತಿದ್ದಾರೆ.
ಒಟ್ಟಾರೆ ಮನೆ ಮನೆ ದಂಡ ವಸೂಲಿ ಪ್ಲಾನ್ ಮುನ್ನೂರು ಕೋಟಿ ಪೆಂಡಿಂಗ್ ಹಣವನ್ನು ಕೊಡಿಸುತ್ತಾ ನೋಡ್ಬೇಕು. ಒಂದು ವೇಳೆ ದಂಡ ಕಟ್ಟಲು ಹಣ ಇಲ್ಲ ಅಂದ್ರೆ 133 ನೋಟೀಸ್ ಕೊಟ್ಟು ಪೊಲೀಸರು ಸಮಯವನ್ನೂ ಕೊಡ್ತಿದ್ದಾರೆ. ಆದ್ರೂ ಪೊಲೀಸರು ಮನೆ ಬಳಿ ಬರೋದನ್ನು ತಪ್ಪಿಸಬೇಕಂದ್ರೆ ರೂಲ್ಸ್ ಬ್ರೇಕ್ ಮಾಡದೆ. ದಂಡ ಕಟ್ಟೊದೇ ಲೇಸು.