ಜೈಲಿನಿಂದ ಹೊರಬಂದ್ಮೇಲೆ ರಾಗಿಣಿ ಟೆಂಪಲ್ ರನ್..! ಶಕ್ತಿದೇವತೆಯ ಆಶೀರ್ವಾದ ಪಡೆದ ತುಪ್ಪದ ಬೆಡಗಿ..!
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿದ್ದ ರಾಗಿಣಿ, ಅಲ್ಲಿಂದ ಹೊರಬಂದ ನಂತ್ರ ಟೆಂಪಲ್ ರನ್ ಶುರುಮಾಡಿದ್ದಾರೆ. ಕಳೆದ ವಾರ ಶಕ್ತಿದೇವತೆಯ ಮೊರೆ ಹೋಗಿದ್ದ ರಾಗಿಣಿ ಈ ವಾರ ಅಚ್ಚರಿಯಂತೆ ದರ್ಗಾಕ್ಕೆ ಭೇಟಿ ಕೊಟ್ಟಿದ್ದಾರೆ. ಹಾಗಾದ್ರೆ ರಾಗಿಣಿ ದರ್ಗಾಕ್ಕೆ ಹೋಗಿದ್ಯಾಕೆ..? ಪಂಜರದಿಂದ ಹೊರಬಂದ ಈ ಗಿಣಿ ಬದುಕಿನಲ್ಲಿ ಆಗಿರೋ ಇಂಟ್ರಸ್ಟಿಂಗ್ ಬದಲಾವಣೆಯೇನು..? ಚಿತ್ರರಂಗಕ್ಕೆ ಮತ್ತೆ ಕಮ್ ಬ್ಯಾಕ್ ಆಗ್ತಾರಾ..? ಅನ್ನುವ ಪ್ರಶ್ನೆ ನಿಮ್ಮನ್ನ ಕಾಡುತ್ತಿದೆ ಅಲ್ವಾ ಹಾಗಾದ್ರೆ ಈ ಸ್ಟೋರಿ ಓದಿ….!
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ 143 ದಿನ ಸೆರೆವಾಸ ಅನುಭವಿಸಿದ ರಾಗಿಣಿ, ಜೈಲಿನಿಂದ ಹೊರಬಂದ ನಂತ್ರ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಮೊದಲಿನಂತೆ ಸೋಷಿಯಲ್ ಸರ್ವಿಸ್ ಶುರು ಮಾಡಿದ್ದಾರೆ. ಇಷ್ಟೇ ಅಲ್ಲ ಕಷ್ಟದ ದಿನಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಸಿಕ್ಕಿದ್ದಕ್ಕೆ, ರಾಗಿಣಿ ಟೆಂಪಲ್ ರನ್ ಶುರು ಮಾಡಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ, ಪರಪ್ಪನ ಅಗ್ರಹಾರ ಬಳಿ ಇರೋ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ನೆರವೇರಿಸಿದ ರಾಗಿಣಿ, ನಂತ್ರ ಶಕ್ತಿ ಮಾತೆಯ ಮೊರೆ ಹೋಗಿದ್ದಾರೆ. ಜನವರಿ 29ರ ಶುಕ್ರವಾರದಂದು, ಸಂಜೆ ಮಾತೆಯ ದೇವಸ್ಥಾನಕ್ಕೆ ಭೇಟಿ ಕೊಟ್ಟು, ನಿಂಬೆಹಣ್ಣಿನ ದೀಪ ಹಚ್ಚಿ, ದೇವರ ಸೇವೆ ಮಾಡಿದ್ದಾರೆ. ಇದರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಕೆಟ್ಟದ್ದನ್ನ ಒಳ್ಳೆಯದರಿಂದ ಜಯಸುತ್ತೇನೆ ಅನ್ನೋ ರೀತಿಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ರು.
ಇದಲ್ಲದೇ ರಾಗಿಣಿ ಕಷ್ಟದ ಸಮಯದಲ್ಲಿ ಅವರ ತಂದೆ-ತಾಯಿಗೆ ಶಕ್ತಿ ತುಂಬಿರೋದು ದೇವರು, ಮೊದಲಿನಿಂದಲೂ ರಾಗಿಣಿ ಫ್ಯಾಮಿಲಿಗೆ ಆಧ್ಯಾತ್ಮದ ಕಡೆ ಒಲವು ಜಾಸ್ತಿ. ಹೀಗಾಗಿ ದೇವಸ್ಥಾನಕ್ಕೆ ಅವಾಗವಾಗ ಭೇಟಿಕೊಡ್ತಾನೆ ಇರ್ತಾರೆ. ಇದ್ರಂತೆ ಈಗ ತುಪ್ಪದ ಬೆಡಗಿ, ತಮ್ಮ ಕುಟುಂಬದ ಜೊತೆಗೆ ದರ್ಗಾಕ್ಕೆ ಭೇಟಿಕೊಟ್ಟಿದ್ದಾರೆ. ದೇವಸ್ಥಾನದ ನಂತ್ರ ದರ್ಗಾದ ಮೊರೆ ಹೋದ ರಾಗಿಣಿ, ಶುಕ್ರವಾರ ಸಂಜೆ ಸಮಯದಲ್ಲಿ ಬೆಂಗಳೂರಿನ ಅಕ್ಕಿಪೇಟೆಯ ದರ್ಗಾಕ್ಕೆ ಭೇಟಿ ಕೊಟ್ಟಿದ್ದಾರೆ. ಅದೇನ್ ಹರಕೆ ಹೊತ್ತಿದ್ರೋ ಏನೋ ದರ್ಗಾದಲ್ಲಿ ಕಾಪಾಡು ದೇವರೇ ಅಂತ ಜಪಿಸಿದ್ದಾರೆ. ಅಲ್ಲಿಯೂ ವಿಶೇಷವಾದ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡಿರೋ ರಾಗಿಣಿ, ದರ್ಗಾಕ್ಕೆ ಬರುವ ಜನರಿಗೆ ಅನ್ನದಾನ ಮಾಡಿದ್ದಾರೆ.
ರಾಗಿಣಿಗೆ ಈ ವರ್ಷ ತುಂಬಾ ಪಾಸಿಟಿವಿಟಿ ಇದ್ಯಂತೆ. ಜೈಲಿನಿಂದ ಹೊರಬಂದ ನಂತ್ರ ಸಾಕಷ್ಟು ಇಂಟ್ರಸ್ಟಿಂಗ್ ಡೆವಲಪ್ಮೆಂಟ್ ಆಗ್ತಿದೆ. ಸದ್ಯದಲ್ಲಿಯೇ ಹಿಂದೆ ಕಮಿಟ್ ಆದ ಸಿನಿಮಾಗಳ ಶೂಟಿಂಗ್ಗೆ ಈ ತಿಂಗಳ ಕೊನೆಯಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೇ ಕೆಲ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲ ಮುಗಿದ ನಂತ್ರ ರಾಗಿಣಿಗೆ ಕಂಕಣ ಭಾಗ್ಯ ಕೂಡಿ ಬಂದ್ರು ಆಶ್ಚರ್ಯವಿಲ್ಲ. ಒಟ್ನಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಜೈಲಿನಿಂದ ಹೊರಬಂದ್ಮೇಲೆ ಮೊದಲಿಗಿಂತಲೂ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿರೋ ಅರಗಿಣಿ ಫೈಂಟಿಂಗ್, ಪುಸ್ತಕ ಓದುವುದರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಇಮೇಜ್ ಬಿಲ್ಡ್ ಮಾಡ್ತಿದ್ದಾರೆ.