ಉತ್ತರಾಖಂಡದಲ್ಲಿ ಹಿಮ ಪ್ರವಾಹ: ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್
ಲಖನೌ: ಉತ್ತರಾಖಂಡದ ಚಮೋಲಿಯ ಜೋಶಿಮಠದಲ್ಲಿ ಭಾರೀ ಪ್ರಮಾಣದಲ್ಲಿ ಹಿಮ ಪ್ರವಾಹ ದೊಡ್ಡ ಅನಾಹುತ ಸೃಷ್ಠಿಸಿದ್ದು ಇದರ ಬೆನ್ನಲ್ಲೇ ನೆರೆಯ ಉತ್ತರಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ದೌಲಿ ಗಂಗಾ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದರಿಂದ ನೀರಿನ ಮಟ್ಟದ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಉತ್ತರ ಪ್ರದೇಶದ ಸರ್ಕಾರ ಗಂಗಾ ತೀರದಲ್ಲಿರುವ ಅಧಿಕಾರಿಗಳನ್ನು ಎಚ್ಚರಿಸಿದೆ.
ಹಿಮನದಿಯ ಸ್ಫೋಟವು ಅಲಕಾನಂದ ನದಿ ವ್ಯವಸ್ಥೆಯಲ್ಲಿ ಹಿಮಪಾತ ಮತ್ತು ಪ್ರವಾಹವನ್ನು ಉಂಟುಮಾಡಿತು. ಅದು ಜಲವಿದ್ಯುತ್ ಕೇಂದ್ರಗಳನ್ನು ಹೊಡೆದು ಹಾಕಿತ್ತು. ಅಲ್ಲ ಸದ್ಯ ಪ್ರವಾಹದಲ್ಲಿ 10 ಮಂದಿ ಮೃತಪಟ್ಟಿದ್ದು 125 ಮಂದಿ ಕಾಣೆಯಾಗಿದ್ದಾರೆ.
ಉತ್ತರಪ್ರದೇಶದ ಜಿಲ್ಲಾ ನ್ಯಾಯಾಧೀಶರಿಗೆ ರಿಲೈಫ್ ಕಮೀಷನರ್ ವಿಪತ್ತು ಎಚ್ಚರಿಕೆಯ ವರದಿ ನೀಡಿದ್ದು “ಉತ್ತರಾಖಂಡದ ನಂದೇವಿ ಹಿಮನದಿಯ ಒಂದು ಭಾಗ ಹೊಡೆದಿರುವ ವರದಿಗಳು ಬಂದಿವೆ. ಗಂಗಾ ನದಿಯ ದಡದಲ್ಲಿರುವ ಜಿಲ್ಲೆಗಳು ಹೆಚ್ಚಿನ ಎಚ್ಚರಿಕೆಯಿಂದಿರಬೇಕು. ಅಲ್ಲದೆ ನಿರಂತರವಾಗಿ ನೀರಿನ ಮಟ್ಟದ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
“ಅಗತ್ಯವಿದ್ದರೆ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪಿಎಸಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್ನಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “ಉತ್ತರಾಖಂಡದಲ್ಲಿನ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ಉತ್ತರ ಪ್ರದೇಶ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ ಎಂದು ಹೇಳಿದ್ದಾರೆ.