ಬೆಂಗಳೂರಿನಲ್ಲಿ ವೃದ್ಧ ದಂಪತಿಗೆ ಆವಾಜ್…! ಆತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ…!
ಬಾಡಿಗೆ ಹಣ ಕೇಳಿದ್ದಕ್ಕೆ ತನ್ನ ಪ್ರಿಯಕರನ ಜೊತೆ ಬಂದು ವೃದ್ಧ ದಂಪತಿಗೆ ರೇಪ್ ಕೇಸ್ ಹಾಕೋ ಬೆದರಿಸಿದ್ದ ಜೋಡಿಯನ್ನ HAL ಪೊಲೀಸರು ಬಂಧಿಸಿದ್ದಾರೆ. ಹಲವು ವರ್ಷಗಳ ಹಿಂದೆ ವೃದ್ಧ ದಂಪತಿ ಕುಂದ್ಲಹಳ್ಳಿಯ ಬಳಿಯ ಕಟ್ಟಡವನ್ನ ಭುವನಾ ಎಂಬಾಕೆಗೆ ಪಿಜಿ ನಡೆಸಲು ಬಾಡಿಗೆಗೆ ನೀಡಿದ್ರು. ಸ್ವಲ್ಪ ದಿನ ಪಿಜಿ ನಡೆಸಿದ ಭುವನಾ ನಂತ್ರ 2019 ಡಿಸೆಂಬರ್ನಿಂದ ಬಾಡಿಗೆ ಹಣ ನೀಡಿಲ್ಲ. ಅಲ್ದೇ, ಅಂದಿನಿಂದ ಇದುವರೆಗೂ ಕಟ್ಟಡದ ವಿದ್ಯುತ್ ಮತ್ತು ವಾಟರ್ ಬಿಲ್ ಸಹ ಕಟ್ಟಿಲ್ಲ.
2019ರ ಡಿಸೆಂಬರ್ನಿಂದ 2021ರ ಫೆಬ್ರವರಿವರೆಗೆ ಬರೋಬ್ಬರಿ ಒಂದೂವರೆ ಕೋಟಿ ಬಾಡಿಗೆ ಹಣ ಕೊಡದೇ ಹಣ ಕೇಳಲು ಹೋದಾಗ ಆವಾಜ್ ಹಾಕ್ತಿದ್ಲು. ಅಲ್ದೇ, ದೆಹಲಿ ಮೂಲದ ರೌಡಿಶೀಟರ್ ವಿಶಾಲ್ ಎಂಬುವನಿಂದಲೂ ದಂಪತಿಗೆ ಧಮ್ಕಿ ಹಾಕಿಸಿದ್ಲು. ಈ ಹಿನ್ನೆಲೆ ವೃದ್ಧ ದಂಪತಿ ಕೋರ್ಟ್ ಮೊರೆ ಹೋಗಿದ್ರು. ಕೋರ್ಟ್ ಸೂಚನೆ ಮೇರೆಗೆ ಹೆಚ್‍ಎಎಲ್ ಪೊಲೀಸರು ಭುವನಾ ಮತ್ತು ವಿಶಾಲ್ನನ್ನು ಬಂಧಿಸಿ ತನಿಖೆ ನಡೆಸ್ತಿದ್ದಾರೆ.