ರಾಜ್ಯದಲ್ಲಿ ಸಿಕ್ತಾಯಿಲ್ಲ ಆಟೋ ಎಲ್ ಪಿ ಜಿ ಸಿಲಿಂಡರ್ ಗಳು…! 15 ವರ್ಷಗಳ ಅವಧಿ ಮುಗಿದ್ರು ಹಳೆಯ ಸಿಲಿಂಡರ್ಗಳಿಂದಲೇ ಆಟೋಗಳ ಸಂಚಾರ…!
ಸಿಲಿಕಾನ್ ಸಿಟಿ ಜನರೇ ಆಟೋ ಹತ್ತುವ ಮುನ್ನ ಎಚ್ಚರವಹಿಸಿ. ನೀವು ನಿತ್ಯ ಓಡಾಡುವ ಆಟೋಗಳು ಯಾವ ಸ್ಥಿತಿಯಲ್ಲಿವೆ ಅಂತಾ ಗೊತ್ತಾದ್ರೆ ಬೆಚ್ಚಿಬೀಳ್ತಿರಾ. ಸಾವಿನ ಸಿಲಿಂಡರ್ ಗಳನ್ನ ಇಟ್ಟುಕೊಂಡು ಆಟೋಗಳು ಸಂಚಾರ ಮಾಡ್ತಾಯಿದ್ರು ಆರ್ ಟಿ ಓ ಮಾತ್ರ ಈ ಸಮಸ್ಯೆಗೆ ಕ್ಯಾರೆ ಅಂತಿಲ್ಲ. ಅಷ್ಟಕ್ಕೂ ಆಟೋಗಳ ಆ ಸಮಸ್ಯೆ ಏನು ಅಂತೀರಾ..ಇಲ್ಲಿದೆ ಓದಿ…!
ರಾಜ್ಯದಲ್ಲಿ ಓಡಾಡ್ತಿರೋ ಲಕ್ಷಾಂತರ ಆಟೋಗಳು ಅಪಾಯದ ಅಂಚಿನಲ್ಲಿವೆ. ಯಾಕಂದ್ರೆ ಆಟೋಗಳಲ್ಲಿ ಅಳವಡಿಸಲಾಗಿರುವ ಎಲ್ ಪಿ ಜಿ ಸಿಲಿಂಡರ್ ಗಳ ಅವಧಿ ಮುಗಿದಿದ್ದು ಯಾವಾಗ ಬ್ಲಾಸ್ಟ್ ಆಗುತ್ತವೆ ಎಂಬ ಭೀತಿ ಎದುರಾಗಿದೆ. ಹೊಸ ಸಿಲಿಂಡರ್ ಗಳನ್ನ ಫಿಕ್ಸ್ ಮಾಡಿಸೋದಕ್ಕೆ ರಾಜ್ಯದಲ್ಲಿ ಸಿಲಿಂಡರ್ ಗಳೇ ಸಿಗದೇ ಆಟೋ ಮಾಲಿಕರು ಕಂಗಲಾಗಿದ್ದಾರೆ. 2004ರಲ್ಲಿ ಆಟೋಗಳಿಗೆ ಎಲ್ ಪಿ ಜಿ ಬಳಸಬೇಕು ಎಂಬ ರೂಲ್ಸ್ ತಂದಿತ್ತು. ಜೊತೆಗೆ 15 ವರ್ಷಗಳ ಬಳಿಕ ಅದನ್ನ ಬದಲಾಯಿಸಬೇಕಿತ್ತು. ಆದ್ರೆ ಸದ್ಯ ಹೊಸ ಸಿಲಿಂಡರ್ ಸಿಗದೇ ಆಟೋ ಮಾಲಿಕರು ಪರದಾಡುತ್ತಿದ್ದು ಆರ್ ಟಿ ಒ ಇದಕ್ಕೆ ಪರಿಹಾರ ನೀಡಬೇಕು ಎನ್ನುತ್ತಿದ್ದಾರೆ.
ಈ ಬಗ್ಗೆ ಆರ್ ಟಿ ಒ ಅಧಿಕಾರಿಗಳನ್ನು ಕೇಳಿದ್ರೆ ಕೇಂದ್ರ ಸರ್ಕಾರದ ಪಿಇಎಸ್ಓ ಸಂಸ್ಥೆ ಸಿಲಿಂಡರ್ ರೂಲ್ಸ್ ತಂದಿದೆ. ಸಾರಿಗೆ ಇಲಾಖೆ ಅದನ್ನ ಇಂಪ್ಲಿಮೆಂಟ್ ಮಾಡಿದೆ. ಸಿಲಿಂಡರ್ ವಿಚಾರವಾಗಿ ಪೆಟ್ರೋಲಿಯಂ ಹಾಗೂ ಸ್ಪೋಟಕ ಸುರಕ್ಷತಾ ಸಂಸ್ಥೆ ಗೆ ಈಗಾಗಲೇ ಮನವಿ ಪತ್ರ ಬರೆದಿದ್ದು ಅಲ್ಲಿಂದ ಉತ್ತರ ಬರಬೇಕಿದೆ. ಆಟೋ ಮಾಲಿಕರು ರೆಟ್ರೋಫಿಟ್ಮೆಂಟ್ ಸೆಂಟರ್ ಅಥವಾ ಏಜೆನ್ಸಿಗಳಲ್ಲಿ ಸಿಲಿಂಡರ್ ಪಡೆಯಬಹುದು.
ಇತ್ತ ಸಿಲಿಂಡರ್ ಸಿಕ್ತಾಯಿಲ್ಲ. ಅತ್ತ ಆರ್ ಟಿ ಓ, ಎಫ್ ಸಿ ಕೊಡ್ತಾಯಿಲ್ಲ. ಹಾಗಾಗಿ ಆಟೋ ಚಾಲಕರು ಭಯದಲ್ಲೆ ಆಟೊ ಓಡಿಸುವ ಪರಿಸ್ಥಿತಿ ಎದುರಾಗಿದ್ದು ಆದಷ್ಟು ಬೇಗ ಸಂಬಂಧದ ಪಟ್ಟ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.