ಚಮೋಲಿ ವಿಪತ್ತು: ಮತ್ತೊಂದು ಸುರಂಗದಲ್ಲಿ ಸಿಲುಕಿದ ಕಾರ್ಮಿಕರು, ರಕ್ಷಣಾ ಕಾರ್ಯತಂತ್ರದಲ್ಲಿ ಬದಲಾವಣೆ

ತಪೋವನ: ಮತ್ತೊಂದು ಸುರಂಗದಲ್ಲಿ 37 ಕಾರ್ಮಿಕರು ಸಿಲುಕಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಚಮೋಲಿ ಜಿಲ್ಲೆಯ ತಪೋವನ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರಕ್ಷಣಾ ಕಾರ್ಯತಂತ್ರದಲ್ಲಿ ಬದಲಾವಣೆ ಮಾಡಲಾಗಿದೆ.

ಇಲ್ಲಿಯವರೆಗೂ ಡಿ-ಆಕಾರದ 180 ಮೀಟರ್ ಉದ್ದದ ಸುರಂಗವು ಐಟಿಬಿಪಿ ಪೊಲೀಸ್, ನೈಸರ್ಗಿಕ ವಿಪತ್ತು ಪಡೆ, ಭಾರತೀಯ ಸೇನೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ  ವಾಯುಪಡೆ ವಿವಿಧ ರಕ್ಷಣಾ ಪಡೆಗಳು ಮೂರು ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಚರಣೆಯ ಪ್ರಮುಖ ಸ್ಥಳವಾಗಿದೆ. ಇದೀಗ ಡಿ- ಆಕಾರದ ಕೆಳಗಡೆ ಇರುವ ಆದಿತ್ ಸುರಂಗದಲ್ಲಿ ಕಾರ್ಮಿಕರು ಸಿಲುಕಿರುವ ಮಾಹಿತಿ ಲಭ್ಯವಾಗಿದ್ದು,  ಇತರ ಏಜೆನ್ಸಿಗಳು ಕಾರ್ಮಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

ಈ ಮೊದಲು ಸುರಂಗದೊಳಗಿನ  180 ಮೀಟರ್  ಆಳವದಲ್ಲಿ ತಿರುವೊಂದರಲ್ಲಿ ಕಾರ್ಮಿಕರು ಸಿಲುಕಿರಬಹುದೆಂಬ ಕಲ್ಪನೆ ಇತ್ತು. ಇದೀಗ ರಕ್ಷಣಾ ತಂಡ ಕಾರ್ಮಿಕರನ್ನು ರಕ್ಷಿಸಲು ಸುರಂಗದ ಒಳಗಡೆ 70-75 ಮೀಟರ್ ಕೊರೆಯಲು ಪ್ರಾರಂಭಿಸಿದೆ ಎಂದು ಉತ್ತರಖಂಡ್ ನ ಗರ್ವಾಲ್ ವಿಭಾಗದ ಕಮೀಷನರ್ ರವಿನಾಥ್ ರಮಣ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆಡಳಿತ ಸಂಸ್ಥೆಗಳು, ಸಶಸ್ತ್ರ ಪಡೆಗಳು, ಮತ್ತು ಎನ್ ಟಿಪಿಸಿ ಸಮಾಲೋಚಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಸುರಂಗದ ವಿನ್ಯಾಸದ ಆಧಾರದ ಮೇಲೆ ಪೂರ್ವ ನಿರೀಕ್ಷೆ ಮೇಲೆ ಎಲ್ಲವೂ ನಡೆಯುತ್ತಿರುವುದರಿಂದ ಮಾಹಿತಿ ನಿರಂತರವಾಗಿ ದೊರೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆಯೂ ನಡೆಯುತ್ತಿದೆ. ಸುರಂಗದಿಂದ ಕೆಳಗಡೆ ಕೆಸರು ಇರುವುದು ಪತ್ತೆಯಾಗಿದ್ದು, ಮುಖ್ಯ ಸುರಂಗದ ಕೆಳಗಡೆ ಸಿಲುಕಿರುವ ಕಾರ್ಮಿಕರ ಹತ್ತಿರ ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಬುಧವಾರ ಸಂಜೆಯವರೆಗೂ ರಾಜ್ಯಸರ್ಕಾರದ ಏಜೆನ್ಸಿಗಳು ನೀರು ಹಾಗೂ ವಿದ್ಯುತ್ ಪೂರೈಕೆಯನ್ನು ಪುನರ್ ಸ್ಥಾಪಿಸಿವೆ.  ಹೆಲಿಕಾಪ್ಟರ್ ಮೂಲಕ ಆಹಾರವನ್ನು ಒದಗಿಸಲಾಗುತ್ತಿದೆ. ಈ ಮಧ್ಯೆ ನಾಪತ್ತೆಯಾಗಿರುವ ಉತ್ತರ ಪ್ರದೇಶ, ಪಂಜಾಬ್, ಬಿಹಾರ್ ಮತ್ತು ಜಾರ್ಖಂಡ್ ನ ರಾಜ್ಯಗಳ ಕುಟುಂಬ ಸದಸ್ಯರು ಚಮೋಲಿ ಬಳಿ ಜಮಾವಣೆಗೊಂಡಿದ್ದು, ತಮ್ಮವರು ಸಿಕ್ಕಬಹುದೆಂಬ ವಿಶ್ವಾಸದಲ್ಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *