ರಾಜ್ಯ ಬಜೆಟ್‌ಗೆ ಬಿಎಸ್‌ವೈ ತಯಾರಿ, ವಿವಿಧ ಇಲಾಖೆಗಳ ಜೊತೆ ಪೂರ್ವಭಾವಿ ಸಭೆ
ಹೈಲೈಟ್ಸ್:
- ರಾಜ್ಯ ಬಜೆಟ್ ಮಂಡನೆಗೆ ನಡೆಯುತ್ತಿದೆ ಪೂರ್ವ ಸಿದ್ಧತೆ
- ವಿವಿಧ ಇಲಾಖೆಯ ಅಧಿಕಾರಿ, ಸಚಿವರೊಂದಿಗೆ ಬಿಎಸ್‌ವೈ ಸಭೆ
- ಇಲಾಖಾವಾರು ಸಭೆ ನಡೆಸಿ ಬಜೆಟ್‌ಗೆ ಬಿಎಸ್‌ವೈಯಿಂದ ಪೂರ್ವಸಿದ್ಧತೆ
ಗುರುವಾರ ಜಲ ಸಂಪನ್ಮೂಲ (ಬೃಹತ್ ಮತ್ತು ಮಧ್ಯಮ ನೀರಾವರಿ), ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗಣಿ ಮತ್ತು ಭೂವಿಜ್ಞಾನ ,ಕೃಷಿ, ತೋಟಗಾರಿಕೆ, ರೇಷ್ಮೆ, ನಗರಾಭಿವೃದ್ದಿ, ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆ, ನಗರಾಭಿವೃದ್ದಿ ( ಬೆಂಗಳೂರು ನಗರಾಭಿವೃದ್ದಿ ಮತ್ತು ನಗರ ಯೋಜನೆ) ಇಲಾಖೆಗಳ ಅಧಿಕಾರಿಗಳ ಜೊತೆಗೆ ಸಿಎಂ ಸಭೆ ನಡೆಸಲಿದ್ದಾರೆ.
ಇಲಾಖೆಗಳ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಅಗತ್ಯ ಪೂರ್ವಸಿದ್ಧತೆಗಳನ್ನು ಸಿಎಂ ಬಿಎಸ್‌ವೈ ನಡೆಸುತ್ತಿದ್ದಾರೆ. ಈಗಾಗಲೇ ಕೆಲವು ಇಲಾಖೆಗಳ ಜೊತೆಗೆ ಪೂರ್ವ ಸಿದ್ಧತಾ ಸಭೆಗಳು ನಡೆದಿವೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಅಧಿಕೃತ ದಿನಾಂಕ ಇನ್ನೂ ಪ್ರಕಟ ಆಗದೇ ಇದ್ದರೂ ಮಾರ್ಚ್ 5 ಕ್ಕೆ ದಿನಾಂಕ ಬಹುತೇಕ ನಿಗದಿಯಾಗಿದೆ.
ಮಾರ್ಚ್ 3 ಮತ್ತು 4 ರಂದು ವಿಧಾನಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಚರ್ಚೆ ನಡೆಯಲಿದೆ. ಇದರ ಬೆನ್ನಲ್ಲೇ ಅಂದರೆ 5 ರಂದು ಬಜೆಟ್ ಮಂಡನೆ ಆಗಲಿದೆ ಎಂದು ತಿಳಿದುಬಂದಿದೆ. ಮಾರ್ಚ್ 8 ರಿಂದ 31 ರ ವರೆಗೆ ಬಜೆಟ್ ಮೇಲೆ ಇಲಾಖಾವಾರು ಚರ್ಚೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.