ಬಿಗ್​ಬಾಸ್ ಸೀಸನ್​​-8ರ ಬಿಗ್ ಸೀಕ್ರೆಟ್​ ರಿವೀಲ್​​​ ..!​​ ಕನ್ಫೂಸ್ ಇಲ್ಲ ಗುರು, ಇವ್ರೆ ನೋಡಿ ದೊಡ್​ ಮನೆಗೆ ಎಂಟ್ರಿ ಕೊಡ್ತಿರೋರು.!

ಕಿರುತೆರೆ ಲೋಕದಲ್ಲಿ ಫೇಮಸ್​​ ರಿಯಾಲಿಟಿ ಶೋ ಅಂದ್ರೆ ಓನ್​ ಎಂಡ್​ ಓನ್ಲಿ ‘ಬಿಗ್​ ಬಾಸ್​’. ಅದೆಷ್ಟೋ ರಿಯಾಲಿಟಿ ಶೋಗಳು ಬಂದು ಹೋಗಿವೆ. ಆದ್ರೆ ಬಿಗ್​ಬಾಸ್​ ಮಾತ್ರ ಅಂದಿನಿಂದ ಇಂದಿನವರೆಗೂ ಸಿಕ್ಕಾಪಟ್ಟೆ ಕ್ರೇಜ್ ಉಳಿಸಿಕೊಂಡಿದೆ. ತನ್ನದೇ ಆದ ವಿಭಿನ್ನ ಛಾಪು ಮೂಡಿಸಿ,ದೊಡ್ಡ ಹವಾ ಸೃಷ್ಟಿಸಿದ ಖ್ಯಾತಿ ‘ಬಿಗ್​ಬಾಸ್’ನದ್ದು. ಭಾರತದ ಅನೇಕ ಭಾಷೆಗಳಲ್ಲಿ ಯಶಸ್ವಿಯಾಗಿರುವ ‘ಬಿಗ್​ಬಾಸ್’ ರಿಯಾಲಿಟಿ ಶೋ 7 ವರ್ಷದ ಹಿಂದೆ ಕನ್ನಡಕ್ಕೂ ಕಾಲಿಟ್ಟಿತ್ತು. ಈಗ 7 ಸೀಸನ್​ಗಳನ್ನು ಮುಗಿಸಿ ಇದೀಗ 8ನೇ ಸೀಸನ್​ಗೆ ಕಾಲಿಟ್ಟಿದೆ.

15 ಮಂದಿಯನ್ನು ಅರಮನೆಯಂತಹ ಒಂಟಿಮನೆಯಲ್ಲಿ ಹೊರ ಜಗತ್ತಿನ ಸಂಪರ್ಕ ಇಲ್ಲದಂತೆ ಒಂದೇ ಮನೆಯಲ್ಲಿ ಕೂಡಿ ಹಾಕಿ ಅವ್ರ ಸ್ವಭಾವ ಹೇಗಿದೆ, ಹೇಗೆ ಪ್ರೀತಿಸ್ತಾರೆ, ಹೇಗೆ ಜಗಳ ಆಡ್ತಾರೆ ಅನ್ನುವುದರ ಜೊತೆಗೆ ಒಂದಿಷ್ಟು ಟಾಸ್ಕ್​​ಗಳನ್ನು ಕೊಟ್ಟು ವೀಕ್ಷಕರನ್ನು ಎಂಟರ್​ಟೈನ್​ ಮಾಡೋದೆ ಈ ಕಾರ್ಯಕ್ರಮದ ಕಾನ್ಸೆ​ಪ್ಟ್​. ಇನ್ನು ದೊಡ್ಮನೆ ನೋಡೋಕ್ಕೆ ಒಂಥರಾ ಚೆಂದ,ಕಲರ್​ ಫುಲ್​ ಲೈಟಿಂಗ್​, ನೂರಾರು ಕ್ಯಾಮೆರಾಗಳು, ಡಿಫರೆಂಟ್​​ ಮಾದರಿಯ ಗಾರ್ಡನ್​​ ಸೇರಿದಂತೆ ಕಿಚನ್​ ನೋಡುಗರನ್ನ ಸಿಕ್ಕಾಪಟ್ಟೆ ಅಟ್ರ್ಯಾಕ್ಟ್​​ ​​ಮಾಡುತ್ತೆ. ಈ ಒಂಟಿ ಮನೆಯಲ್ಲಿ ಹೆಜ್ಜೆ ಇಟ್ಟಲ್ಲೆಲ್ಲಾ ನೂರಾರು ಕ್ಯಾಮೆರಾಗಳು, ಸ್ಪರ್ಧಿಗಳನ್ನೇ ಫೋಕಸ್​ ಮಾಡ್ತಿರುತ್ತದೆ. 24 ಗಂಟೆಯೂ ಅವರ ಚಲನವಲನಗಳು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗ್ತಿರುತ್ತದೆ.

‘ಬಿಗ್​ಬಾಸ್​​’ಅಡ್ಡದಿಂದ ಬಂತು ಸ್ವೀಟ್​ ನ್ಯೂಸ್​​..! ಫೆಬ್ರವರಿ 28ಕ್ಕೆ ಶುರುವಾಗುತ್ತಾ ‘ಬಿಗ್​ಬಾಸ್​​-8’..?

ಪ್ರತಿ ವರ್ಷವೂ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ‘ಬಿಗ್‌ ಬಾಸ್‌’ ರಿಯಾಲಿಟಿ ಶೋ ಭರಪೂರ ಮನರಂಜನೆ ನೀಡುತ್ತ ಬಂದಿದೆ. ಈವರೆಗೂ 7 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದ್ರಂತೆ ಈಗ ಬಿಗ್​ಬಾಸ್​ ಸೀಸನ್​​ 8 ಶುರುವಾಗೋಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಫೆಬ್ರವರಿ 8ಕ್ಕೆ ಬಿಗ್​ಬಾಸ್​ ಅವೃತ್ತಿ 8ರ ಪ್ರೋಮೋ ರಿಲೀಸ್​ ಆಗಿತ್ತು. ಈ ಪ್ರೋಮೋ ನೋಡಿದ ಅಭಿಮಾನಿಗಳು ಯಾವಾಗ ದೊಡ್ಮನೆ ಆಟ ಶುರುವಾಗುತ್ತೆ ಅಂತ ದಿನ ಎಣಿಸುತ್ತಿದ್ರು. ಈಗ ಬಿಗ್​ಬಾಸ್​ ಫ್ಯಾನ್ಸ್​ ಕಾತುರಕ್ಕೆ ತೆರೆಬಿದ್ದಿದೆ. ಯೆಸ್​ ಬಿಗ್​ಬಾಸ್​​ ಸೀಸನ್​ 8 ಇದೇ ಫೆಬ್ರವರಿ 28ಕ್ಕೆ ಗ್ರ್ಯಾಂಡ್​​ ಓಪನಿಂಗ್​ ಪಡೆದುಕೊಳ್ಳುವ ಸಾಧ್ಯತೆಯಿದೆ.

ಡೆಡ್ಲಿ ಕೋವಿಡ್ ಆಟಕ್ಕೆ ಚೆಕ್​ಮೇಟ್​​ ಇಡುತ್ತಾ ಬಿಗ್​ಬಾಸ್​..?

ಡೆಡ್ಲಿ ಕೊರೋನಾ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ದೊಡ್ಮನೆಗೆ ಹೋಗುವ ಸ್ಪರ್ಧಿಗಳನ್ನ 15 ದಿನಗಳ ಕಾಲ ಕ್ವಾರೆಂಟೈನ್​​ನಲ್ಲಿ ಇರಿಸಿ, ನಂತ್ರ ಕೋವಿಡ್​​ ಟೆಸ್ಟ್​​ ಆದ್ಮೇಲೆ ಬಿಗ್​ಬಾಸ್​​ ಶುರುವಾಗಲಿದಿಯಂತೆ. ಕೆಲ ಮೂಲಗಳ ಪ್ರಕಾರ ಈಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕಂಪ್ಲೀಟ್​ ಆಗಿದ್ದು, ಎಲ್ಲಾ ಸ್ಪರ್ಧಿಗಳು ಕ್ವಾರೆಂಟೈನ್​​​ನಲ್ಲಿದ್ದಾರೆ ಅನ್ನೋ ಸುದ್ದಿಯಿದೆ.

ಅರೇ ಇದೆಲ್ಲಾ ಓಕೆ ಬಿಗ್​ಬಾಸ್​​ ಮನೆಯೊಳಗೆ ಯಾರ್​​ ಹೋಗ್ತಾರೆ ಅಂತ ಕೇಳೋಕ್ಕೆ ವೈಟ್​ ಮಾಡ್ತಿದ್ದಿರಲ್ವ. ಹೌದು ನಿಮ್ಮ ನಿರೀಕ್ಷೆಯಂತೆ ಈ ಬಾರಿ ಒಂಟಿ ಮನೆಯೊಳಗೆ ಹೋಗುವರು ಸ್ಟಾರ್​​ ಆ್ಯಕ್ಟರ್ಸ್​​​​ಗಳೇ..

ಬಿಗ್​​ ಮನೆಯಲ್ಲಿ ಅಖಿಲಾಂಡೇಶ್ವರಿ ಅಬ್ಬರ ಇರುತ್ತಾ..?


ಇತ್ತಿಚಿನ ದಿನಗಳಲ್ಲಿ ಅಖಿಲಾಂಡೇಶ್ವರಿ ಅನ್ನೋ ಹೆಸ್ರು ಕೇಳಿದ್ರೆ ಸಾಕು ನಮ್ಮಗೆ ಥಟ್​ ಅಂತ ನೆನಪಾಗೋದು ವಿನಯ ಪ್ರಸಾದ್​​​. 80-90ರ ದಶಕದಲ್ಲಿ ಸ್ಯಾಂಡಲ್​​ವುಡ್​ನಲ್ಲಿ ದಿಗ್ಗಜರ ಜೊತೆ ನಟಿಸಿ ಸೈ ಎನ್ನಿಸಿಕೊಂಡ ಚೆಲುವೆ. ಅಂದಿನಿಂದ ಇಂದಿನವರೆಗೂ ವಿನಯ ಪ್ರಸಾದ್​ ಬಣ್ಣ ಹಚ್ಚುವುದನ್ನ ಬಿಟ್ಟಿಲ್ಲ. ಈಗಲೂ ಸಹ ಖಾಸಗಿ ವಾಹಿನಿಯಲ್ಲಿ ಮೂಡಿಬರ್ತಿರೋ ‘ಪಾರು’ ಎಂಬ ಸೀರಿಯಲ್​ನಲ್ಲಿ ಅಖಿಲಾಂಡೇಶ್ವರಿ ಪಾತ್ರದ ಮೂಲಕ ಸಾವಿರಾರು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇಂತಹ ಅದ್ಭುತ ಕಲಾವಿದೆ, ಹಿರಿಯ ನಟಿ ಬಿಗ್​ ಬಾಸ್​ ಸೀಸನ್​ 8ಕ್ಕೆ ಎಂಟ್ರಿಕೊಡಲಿದ್ದಾರಂತೆ.

ದೊಡ್ಮನೆಯಲ್ಲಿ ರವಿಶಂಕರ್​​ ಕಾಮಿಡಿ ಜೋರಾಗಿರುತ್ತೆ..?

ಸಿಲ್ಲಿ-ಲಲ್ಲಿ ಸೀರಿಯಲ್​​ನ ಡಾಕ್ಟರೇ ಪಾತ್ರದ ಮೂಲಕ ಮನೆ ಮಾತಾಗಿರೋ ರವಿಶಂಕರ್​​​, ಬರೀ ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕಾಮಿಡಿ ಮೂಲಕ ನಕ್ಕು ನಲಿಸಿದ್ದಾರೆ. ಈಗಲೂ ಸಹ ಕೆಲ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನ ರಂಜಿಸ್ತಿರೋ ರವಿಶಂಕರ್​​​, ದೊಡ್ಮನೆಯೊಳಗೆ ಕಾಲಿಡ್ತಾರಂತೆ.

ಒಂಟಿ ಮನೆಯೊಳಗೆ ಅನುಷಾ ರಂಗನಾಥ್​ ರಂಜಿಸ್ತಾರಾ..?

ಕಿರುತೆರೆ ಮೂಲಕ ಬಣ್ಣ ಹಚ್ಚಿ ಬೆಳ್ಳಿ ತೆರೆಯಲ್ಲಿ ಗಮನ ಸೆಳೆಯುತ್ತಿರೋ ಅಶಿಕಾ ರಂಗನಾಥ್​​ ಸಹೋದರಿ ಅನುಷಾ ರಂಗನಾಥ್​, ಈ ಬಾರಿ​ ಬಿಗ್​ ಮನೆಯೊಳಗೆ ಹೋಗುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ಯೆಸ್​ ಅನುಷಾ ರಂಗನಾಥ್​ ಸದ್ಯ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರಂತೆ. ಇದ್ರ ಬೆನ್ನಲ್ಲೇ ಬಿಗ್​ ಬಾಸ್​ ಸೀಸನ್​ 8ಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ ಅನ್ನೋ ಸುದ್ದಿ, ಸೋಷಿಯಲ್​​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜೋರಾಗಿ ಸೌಂಡ್​ ಮಾಡ್ತಿದೆ.

ಬಿಗ್​ ಮನೆಯೊಳಗೆ ಬ್ರಹ್ಮಗಂಟು ಗೀತಾ ಎಂಟ್ರಿ ಕನ್ಫರ್ಮಾ..?

ಬ್ರಹ್ಮಗಂಟು ಸೀರಿಯಲ್​ ಮೂಲಕ ರಾಜ್ಯಾದ್ಯಂತ ಫೇಮಸ್​ ಆಗಿರೋ ಕಿರುತೆರೆ ನಟಿ ಗೀತಾ ಭಾರತಿ ಭಟ್​​, ಸಿಕ್ಕಾಪಟ್ಟೆ ಟ್ಯಾಲೆಂಟೆಡ್​ ಹುಡುಗಿ. ಗೀತಾ ಬರೀ ಆ್ಯಕ್ಟರ್​​ ಮಾತ್ರವಲ್ಲ ಅದ್ಭುತ ಗಾಯಕಿ ಕೂಡ. ಇಂತಹ ಅದ್ಭುತ ಕಲಾವಿದೆ ಬಿಗ್​ಬಾಸ್​​-8ರ ಆವೃತ್ತಿಗೆ ಹೋಗೋದು ಪಕ್ಕಾ ಅಂತಿದೆ ಕೆಲ ಮೂಲಗಳು.

ದೊಡ್ಮನೆಯಲ್ಲಿ ಮ್ಯಾಜಿಕ್​ ಮಾಡ್ತಾರಾ ಶುಭಾ ಪೂಂಜಾ..!

ಸ್ಯಾಂಡಲ್​​ವುಡ್​ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿ, ಬಬ್ಲಿ-ಬಬ್ಲಿ ನಟನೆ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಚೆಲುವೆ ಶುಭಾ ಪೂಂಜಾ.. ಸದ್ಯ ಕೆಲ ಸಿನಿಮಾ ಹಾಗೂ ವೈಯಕ್ತಿಕ ಲೈಫ್​​ನಲ್ಲಿ ಬ್ಯುಸಿಯಾಗಿರೋ ಶುಭಾ, ಬಿಗ್​ ಬಾಸ್​ ಸೀಸನ್​ 8ಕ್ಕೆ ಎಂಟ್ರಿಕೊಡಲಿದ್ದಾರಂತೆ.

ಬಿಗ್​ಬಾಸ್​​ಗೆ ಹೋಗ್ತಾರಾ ‘ಎಕ್ಸ್​​​ಕ್ಯೂಸ್​​​ ಮೀ’ ನಟ..!

ಕನ್ನಡದಲ್ಲಿ ಬಾಲಕಲಾವಿದನಾಗಿ ಬಣ್ಣ ಹಚ್ಚಿದ ಸುನೀಲ್​ ರಾವ್​, ಅನೇಕ ಸಿನಿಮಾ ಸೇರಿದಂತೆ ಕಿರುತೆರೆ ಲೋಕದಲ್ಲಿ ತನ್ನದೇ ನಟನೆಯ ಛಾಪು ಮೂಡಿಸಿದ ಸುನೀಲ್​ ರಾವ್​​​, ಒಳ್ಳೆಯ ಗಾಯಕ ಕಡ. ಇತ್ತೀಚೆಗೆ ವೆಬ್​​ ಸೀರಿಸ್​​​ ಮೂಲಕ ಗಮನ ಸೆಳೆದ ಸುನೀಲ್​ ರಾವ್​​​, ಈ ಬಾರಿ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟು ಮ್ಯಾಜಿಕ್​ ಮಾಡ್ತಾರಂತೆ.

ಬಿಗ್​ಬಾಸ್​​ಗೆ ಡೆಡ್ಲಿ ನಿರ್ದೇಶಕ ಎಂಟ್ರಿ ಕೊಡ್ತಾರಂತೆ..?

ಕೆಲ ಸಿನಿಮಾಗಳ ಮೂಲಕ ವಿಭಿನ್ನ ಕೈಚಳಕ ತೋರಿಸಿದ, ನಿರ್ದೇಶಕ ರವಿ ಶ್ರೀವಾತ್ಸವ್​​, ಕೆಲ ಡೇರಿಂಗ್ ಸ್ಟೇಟ್​​ಮೆಂಟ್​​ಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಈಗ ಈ ಖ್ಯಾತ ನಿರ್ದೇಶಕ ರವಿ ಶ್ರೀವಾತ್ಸವ್​ ಬಿಗ್​​ಬಾಸ್​ ಸೀಸನ್​ 8ಕ್ಕೆ ಹೋಗಿ, ಅಲ್ಲಿಯೂ ಆಟದ ಮೂಲಕ ಆ್ಯಕ್ಷನ್​ ಕಟ್​ ಹೇಳ್ತಾರಂತೆ ಅನ್ನೋ ಸುದ್ದಿಯಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *