ಕೆ.ಆರ್.ಪೇಟೆ ಬಸ್ನಿಲ್ದಾಣಗಳಲ್ಲಿ ಮೈ ಮರೆತ ಯುವ ಜೋಡಿಗಳು..! ಆಮೇಲೆ ಆಗಿದ್ದೆಲ್ಲಾ ಕಣ್ಣು ಮುಚ್ಚಿಕೊಳ್ಳುವಂತದ್ದು.!
valentinesdayಗೂ ಮುನ್ನ ಸಾರ್ನಜನಿಕ ಪ್ರದೇಶದಲ್ಲಿ ಯುವ ಜೋಡಿಗಳ ಚುಂಬನದ ದೃಶ್ಯಯೊಂದು ಸೋಷಿಯಲ್ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಆಶ್ಲೀಲ ವರ್ತನೆ ನಡೆದಿದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ ಎಂದರೆ ಸಾಕು ಪ್ರೇಮಿಗಳಲ್ಲಿ ಎಲ್ಲಿಲ್ಲದ ಉತ್ಸಾಹ ಹಾಗೂ ಸಂತೋಷ. ಸಂಗಾತಿಗಳು ನೀಡಿದ ಚಾಕೋಲೇಟ್, ಟೆಡ್ಡಿ ಬೇರ್ಗಳನ್ನು ಸಾಮಾಜೀಕ ಜಾಲತಾಣಗಳಲ್ಲಿ ಹಾಕಿ ಸಂಭ್ರಮಿಸುತ್ತಾರೆ. ಇಷ್ಟೇ ಆದರೆ ಯಾರು ಕೂಡ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ. ಕೆಲವೊಮ್ಮೆ ಯುವ ಜೋಡಿಗಳು ಪಬ್ಲಿಕ್ ಅಲ್ಲಿ ನಡೆದು ಕೊಳ್ಳುವ ಕೆಲ ವರ್ತನೆಗಳು ಸಾಮಾನ್ಯರಿಗೆ ಇರುಸು-ಮುರುಸು ತರುತ್ತವೆ.
ಹೀಗೆಯೇ ಮಂಡ್ಯದಲ್ಲಿ ಇಂತಹದ್ದೇ ಯುವ ಜೋಡಿಯೊಂದು ಸಾರ್ವಜನಿಕವಾಗಿಯೇ ವ್ಯಾಲೆಂಟೈನ್ಸ್ ದಿನ ಹತ್ತಿರ ಬರುತ್ತಿದ್ದಂತೆ ಮೈಮರೆತು ಕಿಸ್ ಮಾಡಿದ್ದಾರೆ. ಇವರು ನಡೆದುಕೊಂದ ರೀತಿಯೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು. ಸುತ್ತ-ಮುತ್ತ ಜನರು ಓಡಾಡುತ್ತಿರುತ್ತಾರೆ ಎನ್ನುವ ಪ್ರಗ್ನೇಯೇ ಇಲ್ಲದೆ ಈ ಜೋಡಿಯೂ ಮೈಮರೆತು ತಮ್ಮ ಕೆಲಸವನ್ನು ಮುಂದುವರೆಸಿದ್ದಾರೆ.
ಈ ಜೋಡಿಯು ಚುಂಬಿಸುತ್ತಿರುವ ದೃಶ್ಯವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯೂ ಸಾರ್ವಜನಿಕ ಪ್ರದೇಶದಲ್ಲಿ ನಡೆದಿರುವುದರಿಂದ ಜೋಡಿಯ ಆಶ್ಲೀಲ ವರ್ತನೆಗೆ ಈಗ ಆಕ್ರೋಶ ವ್ಯಕ್ತವಾಗಿದೆ. ಮತ್ತೆ ಇಂತಹ ಘಟನೆಯೂ ನೋಡಿಕೊಳ್ಳದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.