ಶಾಲೆಗಿಂತ ಮೊದಲೇ ಅಂಗನವಾಡಿ ಕೇಂದ್ರಗಳು ಆರಂಭ..! ಕೇಂದ್ರ ಸರ್ಕಾರದ ಗೈಡ್ ಲೈನ್ ಪ್ರಕಾರ ಅಂಗನವಾಡಿ ಆರಂಭಕ್ಕೆ ಸಿದ್ಧತೆ..!
ರಾಜ್ಯದಲ್ಲಿ ಇನ್ನು 1 ರಿಂದ 6ನೇ ತರಗತಿಗಳು ಪ್ರಾರಂಭವಾಗಿಲ್ಲ. ಶಾಲೆಯ ಗಂಟೆ ಭಾರಿಸುವ ಮೊದಲೇ ಅಂಗನವಾಡಿಯ ಬಾಗಿಲು ತೆರೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಯಾವುದೆಲ್ಲ ಗೈಡ್ ಲೈನ್ ಮುಖಾಂತರ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗ್ತಿವೆ ಗೊತ್ತಾ..? ಈ ಸ್ಟೋರಿ ಓದಿ..!
ಕೊರೋನಾ ಕಾರಣದಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳು ಮತ್ತೆ ಆರಂಭವಾಗಿವೆ. ಆದರೆ ಇನ್ನು 1 -8 ನೇ ಕ್ಲಾಸ್ ಗಳು ಆರಂಭವಾಗಿಲ್ಲ ಇದರ ಮಧ್ಯೆ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ರಾಜ್ಯದಲ್ಲಿ ಅಂಗನವಾಡಿಗಳನ್ನು ಆರಂಭಿಸಲು ಮುಂದಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ, ಗ್ರಾಮ ಪಂಚಾಯಿತಿಗಳ ಮೂಲಕ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲು ತಿಳಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಆದೇಶ ನೀಡಿದೆ.
ಮಾರ್ಗ ಸೂಚಿಯಲ್ಲಿ ಏನಿದೇ?
- 3 ರಿಂದ 6 ವರ್ಷದ ಮಕ್ಕಳಿಗೆ ಬೆಳಗ್ಗೆ 9:30 ರಿಂದ 12 ವರೆಗೆ ಕ್ಲಾಸ್.
- ಪೋಷಕರ ಅನುಮತಿ ಕಡ್ಡಾಯ
- ನಿತ್ಯ 5 ಜನ ಮಕ್ಕಳಿಗೆ ಮಾತ್ರ ಅವಕಾಶ.
- 20 ಮಕ್ಕಳಿದ್ದರೆ ಪಾಳಿ ಪದ್ಧತಿಯಲ್ಲಿ ಮಕ್ಕಳಿಗೆ ಕ್ಲಾಸ್.
- 10ಕ್ಕಿಂತ ಕಡಿಮೆ ಮಕ್ಕಳಿದ್ದರೆ ದಿನ ಬಿಟ್ಟು ದಿನ ಕ್ಲಾಸ್.
- 6 ತಿಂಗಳಿನಿಂದ 3 ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪ್ರವೇಶ ಇಲ್ಲ.
ಅಂಗನವಾಡಿ ಕೇಂದ್ರದ ಆವರಣವನ್ನು ಸ್ವಚ್ಛಗೊಳಿಸಿ, ಪೀಠೋಪಕರಣ, ಶೌಚಾಲಯ ಶುಚಿಗೊಳಿಸುವುದು. ಮೂರರಿಂದ ಆರು ವರ್ಷದ ಮಕ್ಕಳಿಗೆ ಮಧ್ಯಾಹ್ನ 12 ಗಂಟೆಯವರೆಗೆ ಚಟುವಟಿಕೆ ಕೈಗೊಳ್ಳಬಹುದು. ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿರುತ್ತದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ 1-8 ನೇ ತರಗತಿ ಇನ್ನೂ ಆರಂಭವಾಗಿಲ್ಲ. ಇದಕ್ಕಿಂತ ಮೊದಲೇ ಅಂಗನವಾಡಿ ಆರಂಭಿಸಲು ರಾಜ್ಯ ಸರ್ಕಾರ ಆಲೋಚಿಸಿದೆ.
ಒಟ್ನಲ್ಲಿ 1 ರಿಂದ 8 ನೇ ತರಗತಿಯ ಮೊದಲೇ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಆಲೋಚಿಸಿದ್ದು, ಪೋಷಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಾರಾ ಅಂತ ಕಾದು ನೋಡಬೇಕಿದೆ.