‘ಭಜರಂಗಿ-2’ ಖಡಕ್​ ಮೋಷನ್​ ಪೋಸ್ಟರ್​ ರಿಲೀಸ್​..! ರೈತರ ಪರ ಬ್ಯಾಟ್​ ಬೀಸಿದ ಹ್ಯಾಟ್ರಿಕ್​ ಹೀರೋ ಶಿವಣ್ಣ..!

ಒಂದು ಕಡೆ ಸೆಂಚುರಿ ಸ್ಟಾರ್​ ಶಿವಣ್ಣ ನಟನೆಯ ‘ಭಜರಂಗಿ-2’ ಸಿನಿಮಾದ ಮೋಷನ್​ ಪೋಸ್ಟರ್​​​ ಸಾಕಷ್ಟು ತಿಂಗಳುಗಳ ನಂತ್ರ ರಿಲೀಸ್​ ಆಗಿ, ಅಭಿಮಾನಿಗಳನ್ನ ಮೋಡಿ ಮಾಡ್ತಿದ್ರೆ. ಇನ್ನೊಂದು ಕಡೆ ಶಿವಣ್ಣ ರೈತರ ಪರ ಬ್ಯಾಟ್​ ಬೀಸಿದ್ದಾರೆ. ಅರೇ ಏನಿದು ಅಂತ ಯೋಚನೆ ಮಾಡ್ತಿದ್ದೀರಾ ಈ ಸ್ಟೋರಿ ಓದಿ…!

ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​ ನಟನೆಯ ಮೋಸ್ಟ್​ ಅವೈಟೆಡ್​ ಸಿನಿಮಾ ‘ಭಜರಂಗಿ-2’. ಈಗಾಗಲೇ ಇದರ ಟೀಸರ್​​​​​ ರಿಲೀಸ್​ ಆಗಿ, ಎಲ್ಲರ ಗಮನ ಸೆಳೆದಿತ್ತು. ಸಾಕಷ್ಟು ತಿಂಗಳುಗಳ ನಂತ್ರ, ಈಗ ‘ಭಜರಂಗಿ-2’ ಭರ್ಜರಿ ಮೋಷನ್​ ಪೋಸ್ಟರ್​​ ರಿಲೀಸ್​​ ಆಗಿದೆ. ಇದೊಂದು ಆಕ್ಷನ್​​​-ಥ್ರಿಲ್ಲರ್​​ ಸ್ಟೋರಿಯಾಗಿದ್ದು, ಶಿವಣ್ಣ ಅಸುರರ ಲೋಕದ ಭಜರಂಗಿ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇನ್ನು ಈ ಮೋಷನ್​ ಪೋಸ್ಟರ್​​ ನೋಡಿ, ಶಿವಣ್ಣ ಫ್ಯಾನ್ಸ್​​ ಫುಲ್​ ಥ್ರಿಲ್​ ಆಗಿದ್ದಾರೆ.

ಶಿವಣ್ಣ ಸದ್ಯ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಹ್ಯಾಟ್ರಿಕ್​ ಹೀರೋ, ಕ್ರೇಜ್​ಸ್ಟಾರ್​ ಸಿನಿಮಾಕ್ಕೆ ಸಾಥ್​ ನೀಡಿದ್ದಾರೆ.​ ಕ್ರಿಕೆಟ್​ ಆಡಿ ಕೈ ಗಾಯ ಆಗಿದ್ರೂ ಕೂಡ ಶಿವಣ್ಣ ಮೈಕ್​ ಹಿಡಿದು ಹಾಡಿದ್ದಾರೆ. ಯೆಸ್​​ ಕ್ರೇಜಿಸ್ಟಾರ್​ ರವಿಚಂದ್ರನ ನಟನೆಯ ‘ಕನ್ನಡಿಗ’ ಸಿನಿಮಾದ, ಸಿರಿಗನ್ನಡಂ ಗೆಲ್ಗೆ ಎಂಬ ಹಾಡನ್ನ ಶಿವಣ್ಣ ಹಾಡಿ ಎಂಜಾಯ್​ ಮಾಡಿದ್ದಾರೆ. ಈ ಹಾಡಿಗೆ ಕೆಜಿಎಫ್​​ ಮ್ಯೂಸಿಕ್​ ಮಾಂತ್ರಿಕ ರವಿ ಬಸ್ರೂರು ಮ್ಯೂಸಿಕ್​ ಕಂಪೋಸ್​​ ಮಾಡುವುದರ ಜೊತೆಗೆ ಇವರ ಸ್ಟುಡಿಯೋದಲ್ಲಿಯೇ, ಈ ಸಾಂಗ್​ ರೆರ್ಕಾಡಿಂಗ್​ ನಡೆದಿದೆ.

‘ಕನ್ನಡಿಗ’ ಸಾಂಗ್​ ರೆರ್ಕಾಡಿಂಗ್​​ ವೇಳೆ ಶಿವಣ್ಣ, ರೈತರ ಪರ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನ ವಿರೋಧಿಸಿ, ಹಲವು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಜಾಗತಿಕ ಮಟ್ಟದಲ್ಲಿ ರೈತರ ಹೋರಾಟ ಸಾಕಷ್ಟು ಸದ್ದು ಮಾಡಿತ್ತು. ಇದರ ಹಿನ್ನಲೇ ಇಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಂಡ್ತಿದೆ. ಸರ್ಕಾರ ರೈತ ಪರವಾಗಿ ನಿಲ್ಲಬೇಕು ಅಂತ ಹೇಳಿದ್ದಾರೆ.

ಒಟ್ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್​ ಎಷ್ಟೇ ಬ್ಯುಸಿಯಾಗಿದ್ರೂ ಕೂಡ, ಬೇರೆ ಬೇರೆ ಸಿನಿಮಾಗಳು ಹಾಗೂ ನಟರಿಗೆ ಸಾಥ್​ ನೀಡ್ತಾರೆ. ಇಷ್ಟೇ ಅಲ್ಲ ಶಿವಣ್ಣ ‘ಭಜರಂಗಿ-2’ ಮೋಷನ್​ ಪೋಸ್ಟರ್​ ನೋಡಿದ ಅಭಿಮಾನಿಗಳು, ತೆರೆ ಮೇಲೆ ಶಿವಣ್ಣನ ಖದರ್​​ ನೋಡಲು ವೈಟ್​ ಮಾಡ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *