ಉಪ ಚುನಾವಣೆ ದಿನಾಂಕ ಘೋಷಣೆ ಮುನ್ನವೇ ಬಿಜೆಪಿ ತಯಾರಿ; ಯುದ್ದಕ್ಕೂ ಮೊದಲು ಜೆಡಿಎಸ್ ಶಸ್ತ್ರತ್ಯಾಗ

ಬೆಂಗಳೂರು: ಮೂರು ವಿಧಾನಸಭೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಗಾಗಿ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಬೇಕಾಗಿದೆ. ಆದರೆ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲೂ ವಿಜಯ ಸಾಧಿಸಲು ಹವಣಿಸುತ್ತಿದೆ.

ತಿಂಗಳ ಗಡುವು ನೀಡಿದ್ದು, ಪಕ್ಷದ ಕಾರ್ಯಕರ್ತರಿಗೆ ವಿವಿಧ ಸಮಿತಿಗಳನ್ನು ನೇಮಿಸಿದೆ,  ಜೊತೆಗೆ ಚುನಾವಣಾ ಉಸ್ತುವಾರಿಗಳು ಅವರಿಗೆ ನೀಡಿರುವ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಆ  ಕ್ಷೇತ್ರಗಳಲ್ಲಿರುವ ಸಮಸ್ಯೆಗಳ ಹಾಗೂ ಸವಾಲುಗಳನ್ನು ಪಟ್ಟಿ ಮಾಡುತ್ತಿದ್ದಾರೆ.

ಪಂಚರತ್ನ ಸಮಿತಿಗಳು, 13 ಸದಸ್ಯರ ಬೂತ್ ಸಮಿತಿ ಮತ್ತು ಪನ್ನಾ ಪ್ರಮುಖ್  ಭಾಗವಾಗಿ ಕಾರ್ಯಕರ್ತರನ್ನು ಗುರುತಿಸಿದ್ದೇವೆ,

ಕಾರ್ಯಪಡೆಗಳನ್ನು ಕಂಪೈಲ್ ಮಾಡಲು ಕಾರ್ಯಕರ್ತರಿಗೆ ಫೆಬ್ರವರಿ ಅಂತ್ಯದ ಗಡುವು ನೀಡಲಾಗಿದೆ. ನಾವು ಪ್ರತಿ ಬೂತ್‌ನಲ್ಲಿ ಸುಮಾರು 40-50 ಕಾರ್ಯಕರ್ತಗಳನ್ನು ಹೊಂದಿದ್ದೇವೆ ಎಂದು ಬಿಜೆಪಿ ಎಂಎಲ್ಸಿ ರವಿ ಕುಮಾರ್ ಹೇಳಿದ್ದಾರೆ.ಪಂಚರತ್ನ ಸಮಿತಿಗಳಲ್ಲಿ ಐದು ವಿಭಾಗದ ಮತದಾರರಿಗೆ ಪ್ರಾತಿನಿಧ್ಯ ಇರುತ್ತದೆ- ಪ್ರತಿ ಬೂತ್ ಮಟ್ಟದಲ್ಲಿ ಒಬ್ಬ ಮಹಿಳೆ, ಒಬ್ಬ ಎಸ್‌ಸಿ, ಒಂದು ಎಸ್‌ಟಿ, ಒಂದು ಒಬಿಸಿ ಮತ್ತು ಒಂದು ಸಾಮಾನ್ಯ ಕಾರ್ಯಕರ್ತರು ಸ್ಥಾನ ಪಡೆದಿರುತ್ತಾರೆ.

ಒಂದು ವಾರದ ಹಿಂದೆ ಬಿಜೆಪಿ ಬಸವ ಕಲ್ಯಾಣ ಮತ್ತು  ಮಸ್ಕಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳನ್ನು ಪ್ರಕಟಿಸಿದೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್,  ಇಬ್ಬರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ,  ಇವರ ಜೊತೆಗೆ ಮಸ್ಕಿ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಸಚಿವ  ಬಿ ಶ್ರೀರಾಮುಲು ಸೇರಿದಂತೆ ನಾಲ್ವರನ್ನು ನಿಯೋಜಿಸಲಾಗಿದೆ.

ಮಸ್ಕಿ ಕ್ಷೇತ್ರದಲ್ಲಿ ಆಸಕ್ತಿದಾಯಕ ವಿಷಯವೆಂದರೇ ಅಭ್ಯರ್ಥಿಗಳ ಇಂಟರ್ ಚೇಂಜ್,  ಕಾಂಗ್ರೆಸ್ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್  2018ರಲ್ಲಿ ಗೆದ್ದಿದ್ದರು,  ಆದರೆ ಅನರ್ಹಗೊಂಡ ಅವರು 2019 ರಲ್ಲಿ ಬಿಜೆಪಿ ಸೇರಿದರು,  ಹೀಗಾಗಿ ಅವರನ್ನೇ ಬಿಜೆಪಿಯಿಂದ ಕಣಕ್ಕಿಳಿಸಲಾಗುವುದು ಎಂದು ಕೇಳಿ ಬರುತ್ತಿದೆ,. 2018ರ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದೆ ಬಸನಗೌಡ ತುರಿವಹಾಳ್  ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ತುರುವಿಹಾಳ್ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಇನ್ನೂ ಮುಂಬರುವ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರು ತಿಳಿಸಿದ್ದಾರೆ.  ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ.

ಪ್ರತಿಯೊಂದು ಸ್ಥಾನವೂ ವಿಭಿನ್ನವಾಗಿದೆ ಮತ್ತು ಮಾಸ್ಕಿಯಲ್ಲಿ ನಮ್ಮ ಮಾಜಿ ಅಭ್ಯರ್ಥಿ ಕಾಂಗ್ರೆಸ್ ಸೇರುವುದು ಕೂಡ ಒಂದು ಸವಾಲಾಗಿದೆ, ”ಎಂದು ವಿಜಯೇಂದ್ರ ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *