ಕುಖ್ಯಾತ ದರೋಡೆಕೋರನನ್ನು ಸಿನೆಮಾ ಸ್ಟೈಲಿನಲ್ಲಿ ಬಂಧಿಸಿದ ಯಲಹಂಕ ಪೊಲೀಸರು…! ಅದು ಹೇಗೆ ಗೊತ್ತಾ ಇಲ್ಲಿದೆ ನೋಡಿ…
ಯಲಹಂಕ ಪೊಲೀಸರು ಕುಖ್ಯಾತ ದರೋಡೆಕೋರ ಶಬರೀಶ್ @ ಅಪ್ಪಿಯನ್ನು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಯಲಹಂಕ ನ್ಯೂಟೌನ್ ಜ್ಞಾನಜ್ಯೋತಿ ಮೈದಾನದ ಬಳಿ ಶಬರೀಶ್ ಅಂಡ್ ಟೀಂ ಹೋಗ್ತಿರೋ ಮಾಹಿತಿ ತಿಳಿದು ಇನ್ಸ್ಪೆಕ್ಟರ್ ರಾಮಕೃಷ್ಣಾರೆಡ್ಡಿ ಮತ್ತು ಟೀಂ ಬಂಧನಕ್ಕೆ ತೆರಳಿತ್ತು. ಈ ವೇಳೆ ಶಬರೀಶ್ ಮತ್ತು ಸಹಚರರು ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಕಾನ್ಸ್ಟೇಬಲ್ ಶಿವಕುಮಾರ್ಗೆ ಗಾಯವಾಗಿದೆ.
ಆತ್ಮ ರಕ್ಷಣೆಗಾಗಿ ಇನ್ಸ್ಪೆಕ್ಟರ್ ರಾಮಕೃಷ್ಣಾರೆಡ್ಡಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಶಬರೀಶ್ ಮತ್ತು ಆತನ ನಾಲ್ವರು ಸಹಚರರು ಬೈಕ್, ಕಾರಿನಲ್ಲಿ ಬರುವವರನ್ನು ದರೋಡೆ ಮಾಡ್ತಿದ್ದರು. ಮೂರು FIR ದಾಖಲು ಮಾಡಿದ್ದ ಯಲಹಂಕ ಪೊಲೀಸರು ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ ರೌಡಿ ಶಬರೀಶ್ ವಿರುದ್ಧ ಕುಮಾರಸ್ವಾಮಿ ಲೇಔಟ್, ಪೀಣ್ಯ , ಸಂಪಿಗೇಹಳ್ಳಿ, ಸಂಜಯನಗರ-, ನೆಲಮಂಗಲ, ಚಿಕ್ಕಜಾಲ, ಯಲಹಂಕ ಠಾಣೆಗಳಲ್ಲಿ ಕೇಸ್ಗಳಿದ್ದವು.