ಅಭಿಮಾನಿಗಳ ದೇವರು ಡಾ.ರಾಜ್ಗೆ ಇದೆಂಥಾ ಅಪಮಾನ..? ಡಾ.ರಾಜ್ ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ ಧ್ವಂಸ..!
ಡಾ.ರಾಜ್ ಪ್ರತಿಮೆ ಇಡಲು ಸಿದ್ದವಾಗಿದ್ದ ಮಂಟಪ ಕಿಡಿಗೇಡಿಗಳು ಧ್ವಂಸಗೊಳಿಸಿರು ಘಟನೆ ವಿದ್ಯಾರಣ್ಯಪುರ ಇಂದಿರಾ ಕ್ಯಾಂಟಿನ್ ಬಳಿ ನಡೆದಿದೆ. ಡಾ. ರಾಜ್ಕುಮಾರ್ ಅವರ ಪ್ರತಿಮೆಯನ್ನು ಇಡಲು ಸಿದ್ದವಾಗಿದ್ದ ಮಂಟಪವನ್ನು ಧ್ವಂಸಗೊಳಿಸಿದ್ದಕ್ಕೆ ಸ್ಥಳಿಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಟ ಸಾರ್ವಭೌಮ ಡಾ.ರಾಜ್ ಪ್ರತಿಮೆಗೆ BBMP ಮೀಸಲಿಟ್ಟಿದ್ದ ಜಾಗವಿದಾಗಿದ್ದು, ಬಹುತೇಕ ಪೂರ್ಣಗೊಂಡಿದ್ದ ಪ್ರತಿಮೆ ಪ್ರತಿಷ್ಠಾಪನೆ ಕೆಲಸ ಪೂರ್ಣವಾಗಿತ್ತು. ಕಳೆದ ರಾತ್ರಿ ಏಕಾಏಕಿ ಪುತ್ಥಳಿ ನಿರ್ಮಾಣ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ.
ಕನ್ನಡದ ಮೇರು ನಟ ಡಾ.ರಾಜ್ ಪ್ರತಿಮೆ ಉದ್ಘಾಟನೆಗೂ ಕಿಡಿಗೇಡಿಗಳು ಅಡ್ಡಿ ಮಾಡಿದ್ದು, ಕನ್ನಡದ ಸಾಕ್ಷಿ ಪ್ರಜ್ಞೆ ಡಾ.ರಾಜ್ಕುಮಾರ್ಗೆ ಅಪಮಾನ ಮಾಡಲಾಗಿದೆ ಕಿಡಿಗೇಡಿಗಳ ಕೃತ್ಯಕ್ಕೆ ಡಾ.ರಾಜ್ ಅಭಿಮಾನಿಗಳ ಆಕ್ರೋಶ ಹೊರಹಾಕಿದ್ದು, ಜೊತೆಗೆ ಕಿಡಿಗೇಡಿಗಳನ್ನು ಬಂಧಿಸುವಂತೆ ರಾಜ್ ಅಭಿಮಾನಿಗಳು ಆಗ್ರಹಿಸಿದ್ದಾರೆ.