“ನಾ ಕಂಡ ಬಡತನ” Article By Sushma Deshetti | Sharanabasava University, Journalisum Student Kalaburagi

ಅಬ್ಬಾ ಈ ಬಡತನ ಎಂಬ ನಾಲ್ಕು ಪದ ಮತ್ತು ಶ್ರೀಮಂತ  ಅನ್ನೊ ಮೂರು ಪದಗಳ ಮಧ್ಯೆ ಎಷ್ಟೋಂದು ವ್ಯತ್ಯಾಸವಿದೆ. ಬಡತನ ಇದರಲ್ಲಿ ಪದಗಳು  ಹೆಚ್ಚು ಅದೇ ರೀತಿ ಇದರಲ್ಲಿ ಕಾಣಲಾಗದಷ್ಟು ನೋವು ಕೂಡ ಇದೆ. ಶ್ರೀಮಂತ  ಅನ್ನೊ ಪದ ಚಿಕ್ಕದಿದ್ದರು ಅದರಲ್ಲಿ ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಶಕ್ತಿ ಇದೆ.

ಈ ಸಮಯದಲ್ಲಿ ಒಂದು ಮಾತು ನೆನಪಿಗೆ ಬರುತ್ತೆ “ಬಡವನಾಗಿ ಹುಟ್ಟೊದು ತಪ್ಪಲ್ಲ ಆದರೆ ಬಡವನಾಗಿ ಸಾಯೋದು ತಪ್ಪು” ಅಂತ,  ಆದರೆ ಒಮ್ಮೊಮ್ಮೆಇಷ್ಟೊಂದು ಮುಂದು ವರೆದ ಜಗತ್ತಿನಲ್ಲಿ ಬಡವರಾಗಿ ಹುಟ್ಟಿದ್ದೆ ತಪ್ಪು ಅನಿಸುತ್ತೆ. ಹಣ ಇದ್ದರೆ ಹೆಣಾನು  ಬಾಯಿ ಬಿಡುತ್ತೆ ಅನ್ನೋದಕೆ ಅನ್ನೋ ಮಾತೇ ಇದಕ್ಕೆ ಉತ್ತಮ ಉದಾಹರಣೆ.  ನಮ್ಮ ಹತ್ರ ಹಣ ಇದ್ದರೆ ಸಮಾಜದ ಎಲ್ಲ ಜನರು ನಮ್ಮವರೇ ಅದೇ ಹಣ ನಮ್ಮಲ್ಲಿ ಇಲ್ಲವಾದರೆ ಯಾರು ನಮ್ಮನ್ನ ಹತ್ತಿರ ಸೇರಿಸೋಕು ಯೋಷಿಸುವಂತಹ ಈ ಸಮಾಜದಲ್ಲಿ ಬಡವ ಜೀವನ ನಡೆಸುವುದು ಕಷ್ಟವೇಸರಿ ಅನಿಸುತ್ತೆ. ಎಲ್ಲವನ್ನೂ ಬಿಟ್ಟು ದೂರ ಹೋಗಿ ಬಿಡಬೇಕು ಅಂತ ಒಮ್ಮೊಮ್ಮೆ ಯೋಚಿಸಿದರು, ಇಂತಹ ದುಬಾರಿ ದುನಿಯಾದಲ್ಲಿ ನಮಗೆ ಸಿಗುವ ಮಾನ್ಯತೇ ಶೂನ್ಯವೇ ಸರಿ. ಬಡತನದ ಬೇಗೆಯಲ್ಲಿ ಹುಟ್ಟಿ ಹೂವಾಗಿ ಅರಳಿದ ಅದೆಷ್ಟೋ ಜನರು ನಮಗೆ ನಿದರ್ಶನವಾಗಿದ್ದರು ಆ ಮಟ್ಟಕ್ಕೆ ತಲುಪಲು ಅವರು ಪಟ್ಟ ಕಷ್ಟ ಅಷ್ಟಿಷ್ಟಾಗಿರೊಲ್ಲ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್​, ಎಪಿಜೆ ಅಬ್ದುಲ್ ಕಲಾಂ, ರಂತಹ ಹಲವು ಮಹಾನ್ ನಾಯಕರ ಬದುಕು ನಮಗೆ ಆದರ್ಶವಾಗಬೇಕು. ಬಡತನದ ಬೆಂಕಿಯಲ್ಲಿ ಬೆಂದರೂ ಸಮಾಜಕ್ಕೆ ಬೆಲೆ ಕಟ್ಟಲಾಗದ ಕೊಡುಗೆ ಕೊಟ್ಟ ಮಹಾನ್ ನಾಯಕರಿವರು.

ಬಡತನದಲ್ಲಿ ಹುಟ್ಟಿದೆ ಅನ್ನೋ ಕೀಳರಿಮೆಗಿಂತ. ಬಡತನವನ್ನು ಮೆಟ್ಟಿ  ನಿಲ್ಲುತ್ತೇನೆ ಅನ್ನೋ ಆತ್ಮವಿಶ್ವಾಸ ನಾವು ಬೆಳೆಸಿಕೊಳ್ಳಬೇಕು. ಬಡತನ ಒಂದು ಶಾಪವೇ ಆಗಿರಬಹುದು ಆದರೆ ಆ ಶಾಪವನ್ನು ವರವನ್ನಾಗಿ ಬದಲಾಯಿಸಿಕೊಳ್ಳುವ ಶಕ್ತಿ ನಮ್ಮಲ್ಲಿರಬೇಕು. ಭಾರತದಂತಹ ದೇಶದಲ್ಲಿ ಬಡತನ ಅನ್ನೊದು ದೊಡ್ಡ ಶಾಪವಾಗಿದೆ. ಬಡತನ ನಿರ್ಮೂಲನೆಗೆ ಭಾರತ ಸರ್ಕಾರ ಅದೆಷ್ಟೆ ಯೋಜನೆಗಳನ್ನು ಮಾಡಿದ್ರೂ ಎಲ್ಲವೂ ಹರಿಯೋ ನೀರಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಆಗಿದೆ. ಸರಕಾರದ ಯೋಜನೆಗಳು ಬಡವನ ಮನೆಗೆ ಬರುವ ಮೊದಲೇ ದಲ್ಲಾಳಿಗಳ ಜೇಬು ಸೇರುತ್ತಿದೆ.

ಆದರೆ ನಮ್ಮ ದೇಶದಲ್ಲಿ ಇಂಥಹ ಬಡತನವನ್ನು ಮೆಟ್ಟಿ ನಿಂತ ಅದೆಷ್ಟು ನಾಯಕರ ಉದಾಹರಣೆಗಳಿವೆ. ಬಡತನ ಅನ್ನೋದು ಕೇವಲ ನಮ್ಮ ದೇಶದ ಸಮಸ್ಯೆಯಲ್ಲ. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲೂ ಬಡವರಿದ್ದಾರೆ. ಆದರೆ ಬಡತನವನ್ನು ಮೆಟ್ಟಿ ನಿಲ್ಲೋ ತಾಕತ್ತು ನಮಗೀರಬೇಕಷ್ಟೆ. ಬಡತನದಲ್ಲಿ ಹುಟ್ಟಿದೆ ಅದಕ್ಕೆ ನಾನೇನು ಮಾಡಲಿಲ್ಲ ಅನ್ನೋ ಮನಸ್ಥಿತಿ , ಕುಂಟು ನೆಪಗಳನ್ನ ನಾವು ಮೆಟ್ಟಿ ನಿಲ್ಲಬೇಕು. ಏನೇ ಕಷ್ಟ ಬಂದರೂ ಬದುಕಿನ ಮಹಾ ಸಾಗರದಲ್ಲಿ ಬಡತನವೆಂಬ ದೊಡ್ಡ ಅಲೆಯನ್ನು ಮೆಟ್ಟಿ ನಿಂತು ನಾವು ಜಯಿಸಬೇಕು.

 

ಸುಷ್ಮಾ ದೇಶಟ್ಟಿ

ಪತ್ರಿಕೋದ್ಯಮ ವಿದ್ಯಾರ್ಥಿನಿ

ಶರಣಬಸವ ವಿಶ್ವವಿದ್ಯಾಲಯ

ಕಲಬುರಗಿ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *