ಕಲಬುರಗಿ: ಪ್ರೇಮಿಗಳ ದಿನ ಆಚರಿಸಿದರೆ ಸ್ಥಳದಲ್ಲಿಯೇ ಮಾಂಗಲ್ಯ ಕಟ್ಟಿಸಿ ಮದುವೆ: ಹಿಂದೂ ಜಾಗೃತಿ ಸೇನೆ ಎಚ್ಚರಿಕೆ
ಸಾರ್ವಜನಿಕರ ಪ್ರದೇಶಗಳಲ್ಲಿ ಪ್ರೇಮಿಗಳ ದಿನ ಆಚರಣೆ ಮಾಡುವುದು ಕಂಡುಬಂದರೆ ಅಂತಹ ಹುಡುಗ ಹುಡುಗಿಯರನ್ನು ಸ್ಥಳದಲ್ಲಿಯೇ ಮಾಂಗಲ್ಯ ಕಟ್ಟಿಸಿ ಮದುವೆ ಮಾಡಿಸುವುದಾಗಿ ಹಿಂದೂ ಜಾಗೃತಿ ಸೇನೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿ: ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ದಿನಾಚರಣೆ ಮಾಡುವ ಯುವಕ ಯುವತಿಯರನ್ನು ಹಿಡಿದು ಸ್ಥಳದಲ್ಲಿಯೇ ಮಾಂಗಲ್ಯ ಕಟ್ಟಿಸಿ ಮದುವೆ ಮಾಡುವದಾಗಿ ಹಿಂದೂ ಜಾಗೃತಿ ಸೇನೆ ಎಚ್ಚರಿಕೆ ನೀಡಿದೆ.
ಫೆ.14 ವ್ಯಾಲೆಂಟನ್ ಡೇ ಆಚರಣೆ ಭಾರತದ ಸಂಸ್ಕೃತಿ ಅಲ್ಲ, ಇದೊಂದು ಪಾಶ್ಯಾತ್ಯ ಸಂಸ್ಕೃತಿಯಾಗಿದೆ. ವಿದ್ಯಾರ್ಥಿಗಳು, ಯುವಕರು ಇಂತಹ ಅನಿಷ್ಟ ಪದ್ದತಿಗೆ ಮಾರು ಹೋಗದೇ ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕೃತಿ ನೆಲೆಗಟ್ಟಿನ ಮೇಲೆ ನಡೆಯಬೇಕು. ಇದಕ್ಕೂ ಮೀರಿ ಸಾರ್ವಜನಿಕರ ಪ್ರದೇಶಗಳಲ್ಲಿ ಪ್ರೇಮಿಗಳ ದಿನ ಆಚರಣೆ ಮಾಡುವುದು ಕಂಡುಬಂದರೆ ಅಂತಹ ಹುಡುಗ ಹುಡುಗಿಯರನ್ನು ಸ್ಥಳದಲ್ಲಿಯೇ ಮಾಂಗಲ್ಯ ಕಟ್ಟಿಸಿ ಮದುವೆ ಮಾಡಿಸುವದಾಗಿ ಎಚ್ಚರಿಕೆ ನೀಡಿದ್ದಾರೆ.