#MeToo ಅಭಿಯಾನ: ಎಂಜೆ ಅಕ್ಬರ್ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

ನವದೆಹಲಿ: #MeToo ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಪತ್ರಕರ್ತ ಎಂಜೆ ಅಕ್ಬರ್ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ಆರೋಪಿ ಪತ್ರಕರ್ತೆ ಪ್ರಿಯಾ ರಮಣಿ ಅವರನ್ನು ದೆಹಲಿ ಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.

2018 ರಲ್ಲಿ ಪ್ರಿಯಾ ರಮಣಿ #MeToo ಅಭಿಯಾನದ ವೇದಿಕೆ ಮೂಲಕ ತಮಗೆ ಹಿಂದೊಮ್ಮೆ ಆಗಿದ್ದ ಲೈಂಗಿಕ ಕಿರುಕುಳದ ಘಟನೆಯನ್ನು ಬಹಿರಂಗಪಡಿಸಿ, ಎಂಜೆ ಅಕ್ಬರ್ ವಿರುದ್ಧ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂಜೆ ಅಕ್ಬರ್ ಅವರು 2018ರ ಅಕ್ಟೋಬರ್ 15 ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಅವರು ಫೆಬ್ರವರಿ 1 ರಂದು ಅಕ್ಬರ್ ಮತ್ತು ರಮಣಿ ಅವರ ವಾದಗಳನ್ನು ಪೂರ್ಣಗೊಳಿಸಿ, ಫೆಬ್ರವರಿ 17ಕ್ಕೆ ತೀರ್ಪ ಕಾಯ್ದಿರಿಸಿದ್ದರು.

ಇಂದು ತೀರ್ಪು ಪ್ರಕಟಿಸಿದ ರವೀಂದ್ರ ಕುಮಾರ್ ಅವರು, “ಲೈಂಗಿಕ ಕಿರುಕುಳದಿಂದ ಸತ್ರಸ್ತರ ಮೇಲಾಗುವ ಪರಿಣಾಮವನ್ನು ಸಮಾಜ ಅರ್ಥಮಾಡಿಕೊಳ್ಳಬೇಕು. ದಶಕಗಳ ನಂತರವೂ ಮಹಿಳೆಗೆ ತನ್ನ ನೋವನ್ನು ಹೇಳಿಕೊಳ್ಳುವ ಹಕ್ಕಿದೆ” ಎಂದು ಹೇಳಿ, ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.

ಪ್ರಿಯಾ ರಮಣಿ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿದ ನಂತರ ಅ.17 ರಂದು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂಜೆ ಅಕ್ಬರ್ ಅವರು, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *